ಸ್ಯಾಮ್​​ಸಂಗ್​​​ ವಾಚ್​​ಗಳು ನೀಡಲಿವೆ ನಿಮ್ಮ ಹೃದಯ ಬಡಿತದ ಮಾಹಿತಿ .. ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯ

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಸ್ಯಾಮ್‌ಸಂಗ್ ಹೆಲ್ತ್ ಮಾನಿಟರ್ ಅಪ್ಲಿಕೇಶನ್‌ನಲ್ಲಿನ ‘ಅನಿಯಮಿತ ಹಾರ್ಟ್ ರಿದಮ್ ನೋಟಿಫಿಕೇಶನ್’ IHRN ವೈಶಿಷ್ಟ್ಯವು ಈ ವರ್ಷದ ಬೇಸಿಗೆಯಲ್ಲಿ ಆದಷ್ಟು ಶೀಘ್ರ 13 ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಪ್ರಕಟಿಸಿದೆ. ಹೃದಯದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ವಾಚ್​ಗಳನ್ನು ಸ್ಯಾಮ್​ಸಂಗ್​​ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಶೀಘ್ರದಲ್ಲೇ ಈ ವಾಚ್​ಗಳು ವಿವಿಧ 13 ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ಏನಿದು IHRN ವೈಶಿಷ್ಟ್ಯ?: ಐಎಚ್​ಆರ್​ಎನ್​ ಅಪ್ಲಿಕೇಶನ್‌ನ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾನಿಟರಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಗ್ಯಾಲಕ್ಸಿ ವಾಚ್ ಬಳಕೆದಾರರಿಗೆ ಹೃತ್ಕರ್ಣದ […]

ನಕಲಿ ಖಾತೆಗಳ ಕುರಿತು ತನಿಖೆಗೆ ಸಹಕಾರ ನೀಡಬೇಕು ಇಲ್ಲವಾದಲ್ಲಿ ಫೇಸ್​​​ಬುಕ್​​​​​ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಬೆಂಬಲಿಸಿದ ಕಾರಣಕ್ಕೆ ಮಂಗಳೂರು ಮೂಲದ ಶೈಲೇಶ್ ಕುಮಾರ್ ಹೆಸರಿನಲ್ಲಿ ಅನಾಮಿಕರು ನಕಲಿ ಫೇಸ್ಬುಕ್ Facebook ಖಾತೆ ಪ್ರಾರಂಭಿಸಿ ಸೌದಿ ಅರೇಬಿಯಾದ ದೊರೆ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದ ಪ್ರಕರಣದಲ್ಲಿ ತನಿಖೆಗೆ ಸೂಕ್ತ ಸಹಕಾರ ನೀಡಿದಿದ್ದಲ್ಲಿ ಭಾರತದಲ್ಲಿ ಫೇಸ್​​ಬುಕ್​ ಕಾರ್ಯಾಚರಣೆ ಬಂದ್ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಸೌದಿ ಅರೇಬಿಯಾ ದೊರೆ ಬಗ್ಗೆ ಅವಹೇಳನಕಾರಿ ಹೇಳಿಕೆ ದಾಖಲಿಸಿದ್ದ ಆರೋಪದ […]

ವಾಟ್ಸಾಪ್​ನಿಂದ ಮೆಸೇಜ್​ ಎಡಿಟಿಂಗ್ ಆಪ್ಶನ್​ : ಹೊಸ ಫೀಚರ್​

ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸಾಪ್​ ತನ್ನ ಬಳಕೆದಾರರಿಗೆ ಮೋಜಿನ ಅನುಭವವನ್ನು ನೀಡಲು ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ. ಈಗ ಜನಪ್ರಿಯ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳ ಕೆಲವು ಬೀಟಾ ಪರೀಕ್ಷಕರಿಗೆ ಮೆಸೇಜ್​ ಎಡಿಟಿಂಗ್ ಫೀಚರ್ ಅನ್ನು ಪ್ರಸ್ತುತ ಪಡಿಸಿದೆ. ಅದರ ಸಹಾಯದಿಂದ, ಬಳಕೆದಾರರು ಕಳುಹಿಸಿದ ಸಂದೇಶವನ್ನು ಎಡಿಟ್​ ಮಾಡಬಹುದಾಗಿದೆ. ಇದೀಗ ಈ ವೈಶಿಷ್ಟ್ಯವನ್ನು ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ತರಲಾಗಿದೆ. ಮುಂಬರುವ ಅಪ್​ಡೇಟ್​ಗಳೊಂದಿಗೆ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ. ಕಂಪನಿಯು ಮೇ […]

ಮುಂಬೈ ಮಂಗಳೂರು ಎರಡನೇ ದೈನಂದಿನ ವಿಮಾನ ಹಾರಾಟ ಆರಂಭಿಸಿದ ಏರ್ ಇಂಡಿಯಾ

ಮಂಗಳೂರು: ಏರ್​ ಇಂಡಿಯಾದ ಎರಡನೇ ಮುಂಬೈ ಮಂಗಳೂರು ದೈನಂದಿನ ವಿಮಾನ ಹಾರಾಟ ಆರಂಭವಾಗಿದೆ. ಏರ್ ಇಂಡಿಯಾ ವಿಮಾನ‌ಯಾನ ಸಂಸ್ಥೆಯು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಎರಡನೇ ದೈನಂದಿನ ವಿಮಾನ ಯಾನವನ್ನು ಆರಂಭಿಸಿದೆ. ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ಜೂನ್ 10ರಿಂದ ಏರ್ ಇಂಡಿಯಾ ತನ್ನ ಎರಡನೇ ದೈನಂದಿನ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಮೇ 22 ರಂದು ಇಂಡಿಗೊ ಮುಂಬೈ-ಮಂಗಳೂರು ವಲಯದಲ್ಲಿ ಮೂರನೇ ದೈನಂದಿನ ವಿಮಾನವನ್ನು ಪ್ರಾರಂಭಿಸಿದ ನಂತರ ಈ ವಿಮಾನ ಸಂಚಾರ ಆರಂಭವಾಗಿದೆ. ಇದರೊಂದಿಗೆ, ಎರಡು […]

ಪರ್ಸನಲೈಸ್ಡ್ ಲಾಕ್​ಸ್ಕ್ರೀನ್, ವಿಜೆಟ್ಸ್​ : ಆಯಪಲ್​ iPadOS 17 ಲಾಂಚ್

ಕ್ಯಾಲಿಫೋರ್ನಿಯಾ (ಅಮೆರಿಕ): ಆಯಪಲ್ ತನ್ನ ಹೊಸ ಆಪರೇಟಿಂಗ್ ಸಿಸ್ಟಂ ಸಾಫ್ಟವೇರ್ iOS 17 ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಹಲವಾರು ಆಕರ್ಷಕ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಹಲವಾರು ಹೊಸ ಫೀಚರ್​ಗಳೊಂದಿಗೆ ಆಯಪಲ್ ತನ್ನ iPadOS 17 ಅನ್ನು ಲಾಂಚ್ ಮಾಡಿದೆ. ವರ್ಲ್ಡ್​ವೈಡ್ ಡೆವಲಪರ್ಸ್​ ಕಾನ್ಫರೆನ್ಸ್​ -2023 ತಂತ್ರಜ್ಞಾನ ಸಮಾವೇಶದಲ್ಲಿ ಆಯಪಲ್ ಹೊಸ OS ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿರುವ ಹೊಸ ಟ್ಯಾಬ್ಲೆಟ್ ಸಾಫ್ಟವೇರ್ ಅಪ್ಡೇಟ್ iOS 17 ನಲ್ಲಿರುವ ಹಲವಾರು ಫೀಚರ್​ಗಳನ್ನೇ ಒಳಗೊಂಡಿರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. […]