ಲೈಗರ್ ನಿಂದ ಪ್ರಪಂಚದ ಮೊಟ್ಟ ಮೊದಲ ಸ್ವಯಂ-ಸಮತೋಲನ ತಂತ್ರಜ್ಞಾನದ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

ನವದೆಹಲಿ: ಮುಂಬೈ ಮೂಲದ ಸ್ಟಾರ್ಟ್‌ಅಪ್ ಕಂಪನಿ ಲೈಗರ್ ಮೊಬಿಲಿಟಿಯು ದೆಹಲಿ ಆಟೋ ಎಕ್ಸ್‌ಪೋ 2023 ರಲ್ಲಿ ಎರಡು ಹೊಸ ಸ್ವಯಂ-ಸಮತೋಲಿತ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಲೈಗರ್ ಎಕ್ಸ್ ಮತ್ತು ಲೈಗರ್ ಎಕ್ಸ್ + ಅನ್ನು ಅನಾವರಣಗೊಳಿಸಿದೆ. ಕೃತಕ ಬುದ್ದಿಮತ್ತೆಯ ಸೆನ್ಸರ್ ಗಳನ್ನು ಅಳವಡಿಸಿರುವ ಇ-ಸ್ಕೂಟರ್ಗಳು ತಮ್ಮನ್ನು ತಾವೇ ಸಮತೋಲದಲ್ಲಿಡಲು ಸಮರ್ಥವಾಗಿದೆ. ಎರಡೂ ಸ್ಕೂಟರ್ ಗಳು ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದರೂ, ಲೈಗರ್ ಎಕ್ಸ್ + ಗಿಂತ ಭಿನ್ನವಾಗಿರುವ ಎಕ್ಸ್ ನ ಬ್ಯಾಟರಿಗಳನ್ನು ಹೊರತೆಗೆಯಬಹುದು ಮತ್ತು ಎಲ್ಲಿ ಬೇಕೆಂದರಲ್ಲಿ […]

ದೂರದ ನಕ್ಷತ್ರಪುಂಜದಿಂದ ಸಂಕೇತವನ್ನು ಪತ್ತೆ ಮಾಡಿದ ಕೆನಡಾ ಮತ್ತು ಭಾರತೀಯ ಖಗೋಳಶಾಸ್ತ್ರಜ್ಞರು

ಪುಣೆ: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮತ್ತು ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಬಹುದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್‌ನಿಂದ ಹುಟ್ಟಿಕೊಂಡಿರುವ ರೇಡಿಯೋ ಸಂಕೇತವನ್ನು ಪತ್ತೆ ಮಾಡಿದ್ದಾರೆ. ಪುಣೆಯಲ್ಲಿನ ದೈತ್ಯ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (GMRT) ಅನ್ನು ಉಪಯೋಗಿಸಿಕೊಂಡು ವಿಜ್ಞಾನಿಗಳು ಈ ಡೇಟಾವನ್ನು ಕಂಡುಹಿಡಿದಿದ್ದಾರೆ. ಈ ಸಂಕೇತವು ಇದುವರೆಗೆ ಕಂಡುಹಿಡಿದ “ಅತ್ಯಂತ ದೂರದಿಂದ ಬಂದಿರುವ ಅತಿ ದೊಡ್ಡ ಸಂಕೇತ”ವಾಗಿದೆ ಎಂದು ಐಐಎಸ್‌ಸಿ ತಿಳಿಸಿದೆ. ಸಂಶೋಧನೆಗಳನ್ನು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ನೋಟಿಸ್ ನಲ್ಲಿ ಪ್ರಕಟಿಸಲಾಗಿದೆ. ಮೆಕ್‌ಗಿಲ್ […]

ಬಿಎಂಡಬ್ಲ್ಯೂ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೆಸ್ಲಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಅಮೇರಿಕಾ ಕಾರು ಕಂಪನಿಯ ಸಾಧನೆ

25 ವರ್ಷಗಳಲ್ಲಿ ಅಮೇರಿಕಾದ ವಾಹನ ತಯಾರಕರು ಮಾಡಲಾಗದ್ದನ್ನು ಟೆಸ್ಲಾ ಮಾಡಿ ತೋರಿಸಿದೆ. 2022 ರಲ್ಲಿ ಯುಎಸ್‌ನ ಅಗ್ರ ಐಷಾರಾಮಿ ಬ್ರಾಂಡ್‌ ಕಾರ್ ನ ಶೀರ್ಷಿಕೆಯನ್ನು ಪಡೆದ ಟೆಸ್ಲಾ, ಇದುವರೆಗೂ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಬಿಎಂಡಬ್ಲ್ಯೂ ಕಾರುಗಳನ್ನು ಹಿಂದಿಕ್ಕಿದೆ. 2021 ರಲ್ಲಿ ಟೆಸ್ಲಾ ಅಮೇರಿಕಾದಲ್ಲಿ ಬಿಎಂಡಬ್ಲ್ಯೂ ಗಿಂತ ಕೇವಲ 23,244 ಕಡಿಮೆ ವಾಹನಗಳನ್ನು ಮಾರಾಟ ಮಾಡಿತ್ತು, ಆದರೆ 2022 ರಲ್ಲಿ ಟೆಸ್ಲಾ ಇದನ್ನು ಸಂಪೂರ್ಣವಾಗಿ ತಿರುಗಿಸಿತು. ಆಟೋಮೋಟಿವ್ ನ್ಯೂಸ್ ರಿಸರ್ಚ್ ಮತ್ತು ಡಾಟಾ ಸೆಂಟರ್‌ನ ಅಂದಾಜಿನ ಪ್ರಕಾರ ಟೆಸ್ಲಾ ಕಳೆದ […]

ಟಾಟಾ ಏಸ್ ಎಲೆಕ್ಟ್ರಿಕ್ ವಿತರಣೆ ಪ್ರಾರಂಭ: ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಸಾಲು ಸಾಲು ಇವಿ ಕಾರುಗಳು

ಟಾಟಾ ಮೋಟಾರ್ಸ್ ಏಸ್ ಇವಿ ಬಿಡುಗಡೆ ಬೆಲೆಯನ್ನು ಬಹಿರಂಗಪಡಿಸಿದ್ದು, ವಾಹನದ ಬೆಲೆ ರೂ 9.99 ಲಕ್ಷದಿಂದ ಪ್ರಾರಂಭವಾಗಲಿದೆ. ಟಾಟಾ ಏಸ್ ಎಲೆಕ್ಟ್ರಿಕ್ ನ ಮೊದಲ ಬ್ಯಾಚಿನ ವಿತರಣೆಗಳು ಅದಾಗಲೇ ಪ್ರಾರಂಭವಾಗಿವೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಏಸ್ ಸ್ಮಾಲ್ ಸಿವಿ ವಿತರಣೆಯನ್ನು 154 ಕಿಮೀ ವ್ಯಾಪ್ತಿಯೊಂದಿಗೆ ಪ್ರಾರಂಭಿಸುತ್ತದೆ. ಭಾರತದಾದ್ಯಂತ ಅಮೆಜಾನ್, ಡೆಲಿವರಿ, ಡಿ.ಎಚ್.ಎಲ್ ,ಫೆಡ್ ಎಕ್ಸ್, ಫ್ಲಿಪ್ ಕಾರ್ಟ್, ಜಾನ್ಸನ್ ಎಂಡ್ ಜಾನ್ಸನ್ ಕನ್ಯೂಮರ್ ಹೆಲ್ತ್ ,ಎಂಒಎವಿಂಗ್ಸ್, ಸೇಫ್ ಎಕ್ಸ್ಪ್ರೆಸ್ ಮತ್ತು ಟ್ರೆಂಟ್ ಲಿ ಮುಂತಾದ ಇ-ಕಾಮರ್ಸ್, ಎಫ್‌ಎಂಸಿಜಿ […]

ಮಹೀಂದ್ರಾ ಕಂಪನಿಯ ಎರಡನೇ ತಲೆಮಾರಿನ ಥಾರ್ ಬಿಡುಗಡೆ: ರೂ 9.99 ಲಕ್ಷದಿಂದ ಪ್ರಾರಂಭ

ಮಹೀಂದ್ರಾ ಭಾರತದಲ್ಲಿ ಎರಡನೇ ತಲೆಮಾರಿನ ಥಾರ್‌ನ ರಿಯರ್-ವೀಲ್ ಡ್ರೈವ್ (ಆರ್.ಡಬ್ಲ್ಯೂ.ಡಿ) ರೂಪಾಂತರವನ್ನು ಬಿಡುಗಡೆ ಮಾಡಿದೆ, ಇದರ ಪರಿಚಯಾತ್ಮಕ ಬೆಲೆಗಳು ರೂ 9.99 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ). 4ಡಬ್ಲ್ಯೂಡಿ ರೂಪಾಂತರಗಳಂತೆ, ಥಾರ್ ರಿಯರ್-ವೀಲ್ ಡ್ರೈವ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ, ಆದರೂ ನೋಟದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಭಾರತದಲ್ಲಿ ಮಹೀಂದ್ರಾ ಥಾರ್ ಕಾರುಗಳ ಬಗ್ಗೆ ಖರೀದಿದಾರರಲ್ಲಿ ಹೆಚ್ಚು ಆಸಕ್ತಿ ಇದೆ. ಥಾರ್ 4×4 ರಂತೆ, ಹೊಸ ಥಾರ್ ಆರ್.ಡಬ್ಲ್ಯೂ.ಡಿಯು ಎ.ಎಕ್ಸ್(ಒ) ಮತ್ತು ಎಲ್.ಎಕ್ಸ್ ಟ್ರಿಮ್ […]