ಟಾಟಾ ಏಸ್ ಎಲೆಕ್ಟ್ರಿಕ್ ವಿತರಣೆ ಪ್ರಾರಂಭ: ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಸಾಲು ಸಾಲು ಇವಿ ಕಾರುಗಳು

ಟಾಟಾ ಮೋಟಾರ್ಸ್ ಏಸ್ ಇವಿ ಬಿಡುಗಡೆ ಬೆಲೆಯನ್ನು ಬಹಿರಂಗಪಡಿಸಿದ್ದು, ವಾಹನದ ಬೆಲೆ ರೂ 9.99 ಲಕ್ಷದಿಂದ ಪ್ರಾರಂಭವಾಗಲಿದೆ.

ಟಾಟಾ ಏಸ್ ಎಲೆಕ್ಟ್ರಿಕ್ ನ ಮೊದಲ ಬ್ಯಾಚಿನ ವಿತರಣೆಗಳು ಅದಾಗಲೇ ಪ್ರಾರಂಭವಾಗಿವೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಏಸ್ ಸ್ಮಾಲ್ ಸಿವಿ ವಿತರಣೆಯನ್ನು 154 ಕಿಮೀ ವ್ಯಾಪ್ತಿಯೊಂದಿಗೆ ಪ್ರಾರಂಭಿಸುತ್ತದೆ. ಭಾರತದಾದ್ಯಂತ ಅಮೆಜಾನ್, ಡೆಲಿವರಿ, ಡಿ.ಎಚ್.ಎಲ್ ,ಫೆಡ್ ಎಕ್ಸ್, ಫ್ಲಿಪ್ ಕಾರ್ಟ್, ಜಾನ್ಸನ್ ಎಂಡ್ ಜಾನ್ಸನ್ ಕನ್ಯೂಮರ್ ಹೆಲ್ತ್ ,ಎಂಒಎವಿಂಗ್ಸ್, ಸೇಫ್ ಎಕ್ಸ್ಪ್ರೆಸ್ ಮತ್ತು ಟ್ರೆಂಟ್ ಲಿ ಮುಂತಾದ ಇ-ಕಾಮರ್ಸ್, ಎಫ್‌ಎಂಸಿಜಿ ಮತ್ತು ಕೊರಿಯರ್ ವ್ಯವಹಾರಗಳಲ್ಲಿ ಪ್ರಮುಖ ನಗರ ಕೇಂದ್ರಿತ ಕಾರ್ಗೋ ಟ್ರಾನ್ಸ್‌ಪೋರ್ಟ್ ಕಾರ್ಯಾಚರಣೆಯನ್ನು ಇದು ಗುರಿಯಾಗಿಸುತ್ತದೆ.

 

ಅಲ್ಲದೆ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ತಯಾರಿಸಿದ 90 ‘ಮೇಡ್ ಇನ್ ಇಂಡಿಯಾ’ ಮಿಲಿಟರಿ ಟ್ರಕ್‌ಗಳನ್ನು ಮೊರಾಕೊಗೆ ಕಳುಹಿಸಿಕೊಡಲಾಗುತ್ತಿದೆ.

ಏತನ್ಮಧ್ಯೆ, ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರ್ ವಿಭಾಗವು ಹೊಸ ಟೀಸರ್ ಅನ್ನು ಹಂಚಿಕೊಂಡಿದ್ದು, 2023 ಆಟೋ ಎಕ್ಸ್‌ಪೋದಲ್ಲಿ ಸಫಾರಿ ಎಲೆಕ್ಟ್ರಿಕ್, ಹ್ಯಾರಿಯರ್ ಎಲೆಕ್ಟ್ರಿಕ್, ಆಲ್ಟ್ರೋಜ್ ಎಲೆಕ್ಟ್ರಿಕ್ ಆಗಮನವನ್ನು ದೃಢೀಕರಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇವಿ ಕಾರು ಉದ್ಯಮದಲ್ಲಿ ಅದಾಗಲೇ ಸಿಂಹ ಪಾಲು ಹೊಂದಿರುವ ಟಾಟಾ ಮೋಟರ್ಸ್ ಮೂರನೆ ತಲೆಮಾರಿನ ಕರ್ವ್ ಪರಿಕಲ್ಪನೆ ಮತ್ತು ಅವಿನ್ಯಾದೊಂದಿಗೆ ಮಾರುಕಟ್ಟೆಯಲ್ಲಿ ಚಕ್ರಾಧಿಪತ್ಯ ಸ್ಥಾಪಿಸಲಿದೆ.

Tata Avinya EV concept breaks cover, offers over 500 km ...