ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮೊದಲ ಭಾರತೀಯ ಐಫೋನ್ ತಯಾರಿಕ ಕಂಪನಿಯಾಗಲಿದೆ ಟಾಟಾ

ಬೆಂಗಳೂರು: ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾದ ಟಾಟಾ ಗ್ರೂಪ್, ಆಗಸ್ಟ್‌ನಲ್ಲಿ ಆಪಲ್ ಪೂರೈಕೆದಾರರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಹತ್ತಿರದಲ್ಲಿದೆ. ಇದೇ ಮೊದಲನೆ ಬಾರಿಗೆ ಸ್ಥಳೀಯ ಕಂಪನಿಯೊಂದು ಐಫೋನ್‌ಗಳ ಜೋಡಣೆಯನ್ನು ಕರ್ನಾಟಕದಲ್ಲಿ ಮಾಡಲಿದೆ ಎಂದು ವರದಿಯಾಗಿದೆ. 600 ಮಿಲಿಯನ್ ಡಾಲರ್ (ಸುಮಾರು ರೂ. 4,900 ಕೋಟಿ) ಗಿಂತ ಹೆಚ್ಚು ಮೌಲ್ಯದ ವಿಸ್ಟ್ರಾನ್ ಕಾರ್ಖಾನೆಯನ್ನು ಟಾಟಾ ಗ್ರೂಪ್ ಸುಮಾರು ಒಂದು ವರ್ಷದ ಮಾತುಕತೆಗಳ ಬಳಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಇತ್ತೀಚಿನ iPhone 14 ಮಾದರಿಯನ್ನು ಜೋಡಿಸುವ […]
ಸೆಲೆಬ್ರಿಟಿಗಳು, ಹೂಡಿಕೆದಾರರು ಭಾಗಿ ಅಮೆಜಾನ್ ಪ್ರೈಮ್ನಲ್ಲಿ ಬರಲಿದೆ ಸ್ಟಾರ್ಟಪ್ ಕೇಂದ್ರಿತ ಶೋ

ನವದೆಹಲಿ :ಅಮೆಜಾನ್ ಇಂಡಿಯಾ ಪ್ರತಿನಿಧಿಗಳು ಹಲವಾರು ಏಂಜೆಲ್ ಹೂಡಿಕೆದಾರರು ಮತ್ತು ವೆಂಚರ್ ಫಂಡ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ರೈಮ್ ವಿಡಿಯೋ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಮೆಜಾನ್ ಪ್ರೈಮ್ ಸ್ಟಾರ್ಟಪ್ ಸರಣಿಯು ಶಾರ್ಕ್ ಟ್ಯಾಂಕ್ ಇಂಡಿಯಾ ಮಾದರಿಯಲ್ಲೇ ಇರಲಿದೆ. ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಈಗಾಗಲೇ ಶಾರ್ಕ್ ಟ್ಯಾಂಕ್ ಇಂಡಿಯಾದ ಎರಡು ಸೀಸನ್‌ಗಳು ಪ್ರಸಾರವಾಗಿವೆ. ಸೋನಿ ಇಂಡಿಯಾದಲ್ಲಿನ ಶಾರ್ಕ್ ಟ್ಯಾಂಕ್ ಶೋ ಅಮೇರಿಕನ್ ಶಾರ್ಕ್ ಟ್ಯಾಂಕ್‌ನ ಶೋ ದ ಭಾರತೀಯ ಫ್ರ್ಯಾಂಚೈಸ್ ಆಗಿದೆ. ಉದ್ಯಮಿಗಳು ಸ್ಟಾರ್ಟಪ್ […]
Google Playನಲ್ಲಿವೆ ಈ ಅಪಾಯಕಾರಿ ಆಯಪ್ಗಳು, ಬಳಕೆದಾರರ ಮಾಹಿತಿ ಕದ್ದು ಚೀನಾಗೆ ರವಾನೆ

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) :”ನಮ್ಮ ಎಂಜಿನ್ Google Play Store ನಲ್ಲಿ ಅಡಗಿರುವ ಎರಡು ಸ್ಪೈವೇರ್ಗಳನ್ನು ಪತ್ತೆಹಚ್ಚಿದೆ. 1.5 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಬಹುದಾದ ಆಯಪ್ ಇವಾಗಿವೆ. ಎರಡೂ ಅಪ್ಲಿಕೇಶನ್‌ಗಳು ಒಂದೇ ಡೆವಲಪರ್‌ನಿಂದ ತಯಾರಿಸಲ್ಪಟ್ಟಿವೆ. ಇವು ಫೈಲ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್‌ಗಳಂತೆ ಕಾಣಿಸುತ್ತವೆಯಾದರೂ ಎರಡೂ ಒಂದೇ ರೀತಿಯ ದುರುದ್ದೇಶಪೂರಿತ ನಡವಳಿಕೆಗಳನ್ನು ಹೊಂದಿವೆ” ಎಂದು ಸೈಬರ್ ಸೆಕ್ಯೂರಿಟಿ ಕಂಪನಿ Pradeo ಹೇಳಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು 1.5 ಮಿಲಿಯನ್ ಬಾರಿಗಿಂತಲೂ ಹೆಚ್ಚು ಡೌನ್ಲೋಡ್ ಆಗಿರುವ 2 ಆಯಪ್ಗಳು […]
ಇದು ವೈದ್ಯಕೀಯ ಪ್ರಶ್ನೆಗಳಿಗೆ ಉತ್ತರಿಸುವ ವಿಶೇಷ AI :ಗೂಗಲ್ನ Med-PaLM 2

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಗೂಗಲ್ನ AI ಸಾಫ್ಟವೇರ್ Med-PaLM 2 (PALM 2 ನ ರೂಪಾಂತರ) ಅನ್ನು ಯುಎಸ್ ಮೂಲದ ಲಾಭರಹಿತ ಸಂಸ್ಥೆಯಾದ ಮೇಯೊ ಕ್ಲಿನಿಕ್ ಸಂಶೋಧನಾ ಆಸ್ಪತ್ರೆ ಸೇರಿದಂತೆ ಇನ್ನೂ ಕೆಲವೆಡೆ ಏಪ್ರಿಲ್ನಿಂದ ಪರೀಕ್ಷಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ವೈದ್ಯಕೀಯ ಮಾಹಿತಿ ಕುರಿತಾದ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವಂಥ ಕೃತಕ ಬುದ್ಧಿಮತ್ತೆ (artificial intelligence -AI) ಪ್ರೋಗ್ರಾಂ ಅನ್ನು ಗೂಗಲ್ ಪರೀಕ್ಷಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಶ್ನೆಗಳಿಗೆ ನಿಖರವಾಗಿ […]
2 ಕೆಜಿ ಟೊಮೆಟೊ ಉಚಿತವಾಗಿ ಪಡೆಯಲು ಸ್ಮಾರ್ಟ್‌ಫೋನ್ ಖರೀದಿಸಿ

ಅಶೋಕನಗರ (ಮಧ್ಯಪ್ರದೇಶ): ಪ್ರಸ್ತುತ ಒಂದು ಕೆಜಿ ಟೊಮೆಟೊ 150ರಿಂದ 200ರವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ರಾಹಕರು ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆದರೆ ಈಗ ಮಾರುಕಟ್ಟೆಗೆ ಟೊಮೆಟೊ ಆವಕ ಇಳಿಕೆ ಕಂಡಿದೆ. ಆಹಾರ ದೈತ್ಯ ಮೆಕ್‌ಡೊನಾಲ್ಡ್ ತನ್ನ ಮೆನುವಿನಿಂದ ಟೊಮೆಟೊ ಅನ್ನು ಕೈಬಿಟ್ಟಿದೆ ಎಂಬುದರ ಕುರಿತು ವರದಿಯಾಗಿದೆ.ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಮುಖಿಯಾಗಿದೆ. ಟೊಮೆಟೊ ಬೆಲೆಯಂತೂ ತುಂಬಾ ಏರಿಕೆಯಾಗಿದೆ.ಮಧ್ಯಪ್ರದೇಶದ ಅಶೋಕನಗರದ ಮೊಬೈಲ್ ಅಂಗಡಿಯವರೊಬ್ಬರು ಸ್ಮಾರ್ಟ್‌ಫೋನ್ ಖರೀದಿಸಿದರೆ, ಎರಡು ಕೆಜಿ ಟೊಮೆಟೊವನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ರಿಯಾಯಿತಿ […]