ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ : ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ 1.14 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ದೆಹಲಿ ಪೊಲೀಸ್ ಸೇರಿದಂತೆ ವಿವಿಧ ಪಡೆಗಳಲ್ಲಿ ಖಾಲಿ ಹುದ್ದೆಗಳು ಇವೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ 1,14,245 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಖಾಲಿ […]
WhatsAppನಿಂದ ಜೂನ್ನಲ್ಲಿ 66 ಲಕ್ಷ ಖಾತೆಗಳ ರದ್ದು

ನವದೆಹಲಿ : ಜೂನ್ 1 ರಿಂದ 30 ರ ನಡುವೆ, 66,11,700 ವಾಟ್ಸ್ ಆಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಇವುಗಳ ಪೈಕಿ 24,34,200 ಅಕೌಂಟ್ಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸ್ ಆಯಪ್ ಮಂಗಳವಾರ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ.ಹೊಸ ಐಟಿ ನಿಯಮಗಳು-2021 ರ ಅನುಸಾರವಾಗಿ ಮೆಟಾ ಒಡೆತನದ ವಾಟ್ಸ್ ಆಯಪ್ ಜೂನ್ ತಿಂಗಳಲ್ಲಿ ಭಾರತದಲ್ಲಿ 66 ಲಕ್ಷಕ್ಕೂ ಹೆಚ್ಚು ಅಕೌಂಟ್ಗಳನ್ನು ರದ್ದುಗೊಳಿಸಿದೆ. ವಾಟ್ಸ್ ಆಯಪ್ ಜೂನ್ ತಿಂಗಳಲ್ಲಿ ಭಾರತದಲ್ಲಿ […]
ವಿಜ್ಞಾನಿಗಳ ಮಹತ್ತರ ಸಾಧನೆ : ಭೂಮಿಗೆ ಯಶಸ್ವಿಯಾಗಿ ಮರಳಿದ ನಿಷ್ಕ್ರಿಯ ಉಪಗ್ರಹ ‘ಏಯೋಲಸ್’

ಪ್ಯಾರಿಸ್ : ಇಎಸ್‌ಎಯ ವಿಂಡ್ ಮಿಷನ್ ಎಂದೂ ಕರೆಯಲ್ಪಡುವ ಏಯೋಲಸ್ ಬಾಹ್ಯಾಕಾಶ ನೌಕೆಯ ಇಂಧನ ಖಾಲಿಯಾದ ನಂತರ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಲು ಇಎಸ್‌ಎಯಲ್ಲಿನ ಮಿಷನ್ ಅಧಿಕಾರಿಗಳ ತಂಡ ಮಾರ್ಗದರ್ಶನ ನೀಡಿತು. ಉಪಗ್ರಹ ಜುಲೈ 28 ರಂದು ಅಂಟಾರ್ಟಿಕಾದಲ್ಲಿ ಇಳಿದಿದೆ. ಏಯೋಲಸ್ ಜುಲೈ 28 ರಂದು ಅಂಟಾರ್ಟಿಕಾದ ಮೇಲೆ ಸುಮಾರು 21:00 CEST (12:30am IST) ಸಮಯದಲ್ಲಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದೆ ಎಂದು ಯುಎಸ್ ಬಾಹ್ಯಾಕಾಶ ಕಮಾಂಡ್ ದೃಢಪಡಿಸಿದೆ ಎಂದು ESA Aeolus ಮಿಷನ್ ಟ್ವಿಟ್ಟರ್ನಲ್ಲಿ ತಿಳಿಸಲಾಗಿದೆ..ಬಾಹ್ಯಾಕಾಶದಲ್ಲಿ […]
4 ಗಂಟೆಗಳ ಪರಿಶ್ರಮದಿಂದ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಗುಂಡು ಸೂಜಿ ಹೊರ ತೆಗೆದ ವೈದ್ಯರು ಬದುಕುಳಿದ ಬಡ ಜೀವ!!

ರೋಹ್ಟಕ್, ಹರಿಯಾಣ: ವೈದ್ಯೋ ನಾರಾಯಣ ಹರಿ ಎಂದು ಹೇಳಲಾಗುತ್ತದೆ. ಈ ಮಾತನ್ನು ಹರಿಯಾಣದ ರೋಹ್ಟಕ್ ಜಿಲ್ಲೆಯ ಪಿಜಿಐಎಂಎಸ್ ವೈದ್ಯರು ಸಾಬೀತುಪಡಿಸಿದ್ದಾರೆ.ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ 2 ಇಂಚಿನ ಗುಂಡು ಸೂಜಿಯನ್ನು ಹೊರತೆಗೆದು ವ್ಯಕ್ತಿಯ ಜೀವ ಉಳಿಸಿರುವ ಘಟನೆಯೊಂದು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ PGIMS ರೋಹ್ಟಕ್‌ನ ವೈದ್ಯರ ತಂಡವು ಬಾರಾ ಬಜಾರ್ ಪ್ರದೇಶದ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಿದ್ದಾರೆ. ಸತತ 4 ಗಂಟೆಗಳ ಪರಿಶ್ರಮದ ಬಳಿಕ ವ್ಯಕ್ತಿಯ ಶ್ವಾಸಕೋಶದಲ್ಲಿ ಕಂಡು ಬಂದ ಗುಂಡು ಸೂಜಿಯನ್ನು ವೈದ್ಯರು ಹೊರತೆಗೆದು ವ್ಯಕ್ತಿಯ ಪ್ರಾಣ […]
ಹೊಸ ಮ್ಯೂಚುವಲ್ ಫಂಡ್ ಕಂಪನಿ ಆರಂಭಿಸಿದ ಅಂಬಾನಿ : ಜಿಯೋ ಬ್ಲ್ಯಾಕ್‌ರಾಕ್

ಮುಂಬೈ: ಭಾರತದಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ತಂತ್ರಜ್ಞಾನ ಆಧರಿತ ಕೈಗೆಟುಕುವ, ನವೀನ ಹೂಡಿಕೆ ವಿಧಾನಗಳನ್ನು ಜಿಯೋ ಬ್ಲ್ಯಾಕ್‌ರಾಕ್ ನೀಡಲಿದೆ ಎಂದು ಬ್ಲ್ಯಾಕ್‌ರಾಕ್ ಮತ್ತು ಜಿಯೋ ಫೈನಾನ್ಷಿಯಲ್ನ ಜಂಟಿ ಉದ್ಯಮವಾಗಿರುವ ಜಿಯೋ ಬ್ಲ್ಯಾಕ್ರಾಕ್ನ ಹೇಳಿಕೆ ತಿಳಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ವಿಭಜನೆಗೊಂಡ, ಹಣಕಾಸು ಸಾಲ ನೀಡುವ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜಮೆಂಟ್ ಕಂಪನಿ ಬ್ಲ್ಯಾಕ್‌ರಾಕ್ ಎರಡೂ ಒಟ್ಟಾಗಿ ಸೇರಿ 300 ಮಿಲಿಯನ್ ಡಾಲರ್ ಸಂಯೋಜಿತ ಹೂಡಿಕೆಯೊಂದಿಗೆ ಹೊಸ ಅಸೆಟ್ ಮ್ಯಾನೇಜಮೆಂಟ್ ಕಂಪನಿ ಅಥವಾ […]