ಇಸ್ರೋದಿಂದ ಪ್ರಾಯೋಗಿಕ ಪರೀಕ್ಷೆ: ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವಸಹಿತ ಗಗನಯಾನ ಮಿಷನ್

ಬೆಂಗಳೂರು: ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ.ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವ ಸಹಿತ ಗಗನಯಾನ ಮಿಷನ್​ನ ಬಂದರು ಪ್ರಯೋಗ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ ಗಗನಯಾನ ಯೋಜನೆಯು ಬಾಹ್ಯಾಕಾಶ ನೌಕೆಯ ಮೂಲಕ ಮೂವರು ಗಗನಯಾತ್ರಿಗಳನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ದೂರದ ಕಕ್ಷೆಗೆ ಉಡಾವಣೆ ಮಾಡಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವುದಾಗಿದೆ. ಆಂಧ್ರ ಪ್ರದೇಶದ […]

ಪ್ರತಿ ಸೆಕೆಂಡಿಗೆ Social media ಗೆ 5 ಜನರ ಸೇರ್ಪಡೆ: 500 ಕೋಟಿ ದಾಟಿದಬಳಕೆದಾರರ ಸಂಖ್ಯೆ

ಹೈದರಾಬಾದ್:ವಿಶ್ವದ ಜನಸಂಖ್ಯೆಯ ಶೇ 60ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶ್ವದ ಜನಸಂಖ್ಯೆ ಇತ್ತೀಚೆಗೆ 800 ಕೋಟಿ ಗಡಿಯನ್ನು ದಾಟಿದೆ. ಇದರಲ್ಲಿ ಜುಲೈ 2023 ರ ಹೊತ್ತಿಗೆ ಸುಮಾರು 500 ಕೋಟಿ ಜನ (4.88 ಶತಕೋಟಿ ಬಳಕೆದಾರರ ಗುರುತುಗಳು) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 3.7 ರಷ್ಟು ಹೆಚ್ಚಾಗಿದೆ. ವಿಶ್ವದಲ್ಲಿ ಇಂಟರ್ನೆಟ್ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ […]

5ನೇ ಅತಿದೊಡ್ಡ ಮಾರುಕಟ್ಟೆ ಭಾರತ: ಶೇ 68ರಷ್ಟು iPhoneನ ಮಾರಾಟ ವೃದ್ಧಿ

ನವದೆಹಲಿ : 2023 ರ ಮೊದಲಾರ್ಧದಲ್ಲಿ ಭಾರತದಲ್ಲಿ ಆಯಪಲ್ ಐಫೋನ್ ಮಾರಾಟ ಶೇಕಡಾ 68 ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದೆ ಎಂದು ವರದಿ ತಿಳಿಸಿವೆ. iPhone 14 ಮತ್ತು iPhone 13 ಸರಣಿಗಳ ಫೋನ್​ಗಳ ಅತ್ಯಧಿಕ ಮಾರಾಟದಿಂದ ಈ ವೃದ್ಧಿ ಕಂಡು ಬಂದಿದೆ. ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ ಅವಧಿ) ಒಂದರಲ್ಲಿಯೇ ಆಯಪಲ್ ಐಫೋನ್ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆ ಕಂಡು ಬಂದಿದೆ. ಕಂಪನಿಯು ದೇಶದಲ್ಲಿ ಮೊಬೈಲ್ ಮಾರಾಟದಲ್ಲಿ ಶೇಕಡಾ 68 ರಷ್ಟು ಅದ್ಭುತ ಬೆಳವಣಿಗೆ ದಾಖಲಿಸಿದೆ ಎಂದು ಸೈಬರ್ […]

ಎಐ ಚಾಟ್​ಬಾಟ್​ ಲಾಮಾ-2 ಬಿಡುಗಡೆ; ಚಾಟ್​ಜಿಪಿಟಿ ಪೈಪೋಟ

ಬೆಂಗಳೂರು : ಮುಂದಿನ ಪೀಳಿಗೆಯ ಓಪನ್ ಸೋರ್ಸ್ ದೊಡ್ಡ ಭಾಷಾ ಮಾಡೆಲ್ ಆಗಿರುವ ಲಾಮಾ-2 (Llama-2)ದ ಉಚಿತ ಲಭ್ಯತೆಯನ್ನು ಮೆಟಾ ಘೋಷಿಸಿದೆ.ಮೆಟಾ ತನ್ನ ಮುಂದಿನ ಪೀಳಿಗೆಯ ಎಐ ಚಾಟ್​ಬಾಟ್​ ಲಾಮಾ-2 ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರು ಉಚಿತವಾಗಿ ಬಳಸಬಹುದಾಗಿದೆ ಕಂಪನಿಯು ಮೈಕ್ರೋಸಾಫ್ಟ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ತನ್ನ ಮುಂದಿನ ಪೀಳಿಗೆಯ AI ದೊಡ್ಡ ಭಾಷಾ ಮಾದರಿಯನ್ನು ಮತ್ತು ಲಾಮಾ 2 ಎಂದು ಕರೆಯಲ್ಪಡುವ ತಂತ್ರಜ್ಞಾನವನ್ನು ತಯಾರಿಸುತ್ತಿದೆ ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ಹೇಳಿದರು.ಇದು ವಿಭಿನ್ನ ವಿಧಾನದೊಂದಿಗೆ […]

ಸಾವಿರ ರೂಪಾಯಿವರೆಗೆ ರಿಯಾಯಿತಿ :ಜುಲೈ 19ರಂದು realme C53 ಅರ್ಲಿ ಬರ್ಡ್ ಸೇಲ್;

ನವದೆಹಲಿ : ಕಂಪನಿಯ ಈ ಶ್ರೇಣಿಯಲ್ಲಿ realme C53 ಇದು 108MP ಕ್ಯಾಮೆರಾ ಹೊಂದಿರುವ ಮೊದಲ ಮತ್ತು ಏಕೈಕ ಸ್ಮಾರ್ಟ್‌ಫೋನ್ ಆಗಿದೆ.ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ರಿಯಲ್‌ಮಿ ತಾನು ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್​ಫೋನ್ ರಿಯಲ್‌ಮಿ ಸಿ 53 ಮಾರಾಟಕ್ಕಾಗಿ ಜುಲೈ 19 ರಂದು “ಅರ್ಲಿ ಬರ್ಡ್ ಸೇಲ್” ಅನ್ನು ಘೋಷಿಸಿದೆ.ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ ರಿಯಲ್‌ಮಿ ಮಂಗಳವಾರ ಜುಲೈ 19 ರಂದು ದೇಶದಲ್ಲಿ ರಿಯಲ್‌ಮಿ C53 ಮಾರಾಟಕ್ಕಾಗಿ ಅರ್ಲಿ ಬರ್ಡ್ ಸೇಲ್ ಘೋಷಿಸಿದೆ. realme ಡಾಟ್ com ವೆಬ್​ಸೈಟ್​ನಲ್ಲಿ […]