ಫೋನ್ ಪೇ ಪೇಮೆಂಟ್ ನೋಟಿಫಿಕೇಶನ್ : ಇನ್ಮುಂದೆ ಕನ್ನಡ ಸೇರಿದಂತೆ ಈ ಪ್ರಾದೇಶಿಕ ಭಾಷೆಯಲ್ಲೂ ಪಡೆಯಬಹುದು
ಬೆಂಗಳೂರು: ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್ ಸ್ಪೀಕರ್ ನೋಟಿಫಿಕೇಶನ್ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್ನಲ್ಲಿ ಈ ನೋಟಿಫಿಕೇಶನ್ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ. ಡಿಜಿಟಲ್ ಪೇಮೆಂಟ್ ಪ್ಲಾಟ್ಫಾರ್ಮ್ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ.ವ್ಯಾಪಾರಿಗಳು ಇದೀಗ ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈ […]
ಸ್ವಾತಂತ್ರ್ಯ ದಿನಾಚರಣೆಯಂದು ಓಲಾ ಎಲೆಕ್ಟ್ರಿಕ್ S1X ಸ್ಕೂಟರ್ ಬಿಡುಗಡೆ: ಬೆಲೆ 1 ಲಕ್ಷಕ್ಕಿಂತಲೂ ಕಡಿಮೆ!!
ನವದೆಹಲಿ: ದೇಶದ ಅಗ್ರ E2W ತಯಾರಕರಾದ ಓಲಾ (Ola) ಎಲೆಕ್ಟ್ರಿಕ್, ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ “Ola S1X” ಅನ್ನು ಭಾರತೀಯ ಮಾರುಕಟ್ಟೆಗೆ ತರಲು ಮತ್ತು ಅದರ ವ್ಯಾಪಕ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೊಸ ಮಾದರಿಯನ್ನು ಸೇರಿಸಲು ಸಿದ್ಧವಾಗಿದೆ. Ola ಪ್ರಸ್ತುತ S1 Pro ಮತ್ತು S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತದೆ. ಕಂಪನಿಯು ಇತ್ತೀಚೆಗೆ ತನ್ನ S1 ರೂಪಾಂತರವನ್ನು ಸ್ಥಗಿತಗೊಳಿಸಿದೆ. ಬೆಲೆ ಓಲಾ ಎಲೆಕ್ಟ್ರಿಕ್ S1X ಎಂಬ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು […]
ಮೊದಲ ದಿನವೇ 3 ಲಕ್ಷ ಫೋನ್ ಮಾರಾಟ :ಶಿಯೋಮಿ ರೆಡ್ಮಿ-12 ಸಿರೀಸ್
ಬೆಂಗಳೂರು: ಶಿಯೋಮಿ ಇಂಡಿಯಾದ ರೆಡ್ಮಿ-12 (Redmi 12 Series) ಸಿರೀಸ್ ಲಾಂಚ್ ಆದ ಮೊದಲ ದಿನವೇ 3 ಲಕ್ಷಕ್ಕೂ ಅಧಿಕ ರೆಡ್ಮಿ12 5ಜಿ ಸ್ಮಾರ್ಟ್ಫೋನ್ಗಳು ಮಾರಾಟವಾಗಿದ್ದು ದಾಖಲೆಯಾಗಿದೆ. ರೆಡ್ಮಿ-12 5ಜಿ ಮತ್ತು ರೆಡ್ಮಿ 12 ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ಒಳಗೊಂಡಿರುವ ರೆಡ್ಮಿ-12 ಸರಣಿಯು ಈ ವಾರದ ಆರಂಭದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಾಗಿನಿಂದ ತಜ್ಞರು ಮತ್ತು ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ5ಜಿ ಯುಗದತ್ತ ಪರಿವರ್ತನೆಯ ಹಾದಿಯಲ್ಲಿ ಶಿಯೋಮಿ ಇಂಡಿಯಾ ಮಹತ್ತರ ಸಾಧನೆ ಮಾಡಿದೆ.ಶಿಯೋಮಿ ರೆಡ್ಮಿ-12 ಸಿರೀಸ್ ಸ್ಮಾರ್ಟ್ಫೋನ್ಗಳು ಭಾರತದ […]
ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ : ಕೇಂದ್ರ ಗೃಹ ಸಚಿವಾಲಯ
ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ 1.14 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ದೆಹಲಿ ಪೊಲೀಸ್ ಸೇರಿದಂತೆ ವಿವಿಧ ಪಡೆಗಳಲ್ಲಿ ಖಾಲಿ ಹುದ್ದೆಗಳು ಇವೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ 1,14,245 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಖಾಲಿ […]
WhatsAppನಿಂದ ಜೂನ್ನಲ್ಲಿ 66 ಲಕ್ಷ ಖಾತೆಗಳ ರದ್ದು
ನವದೆಹಲಿ : ಜೂನ್ 1 ರಿಂದ 30 ರ ನಡುವೆ, 66,11,700 ವಾಟ್ಸ್ ಆಯಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಇವುಗಳ ಪೈಕಿ 24,34,200 ಅಕೌಂಟ್ಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸ್ ಆಯಪ್ ಮಂಗಳವಾರ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ.ಹೊಸ ಐಟಿ ನಿಯಮಗಳು-2021 ರ ಅನುಸಾರವಾಗಿ ಮೆಟಾ ಒಡೆತನದ ವಾಟ್ಸ್ ಆಯಪ್ ಜೂನ್ ತಿಂಗಳಲ್ಲಿ ಭಾರತದಲ್ಲಿ 66 ಲಕ್ಷಕ್ಕೂ ಹೆಚ್ಚು ಅಕೌಂಟ್ಗಳನ್ನು ರದ್ದುಗೊಳಿಸಿದೆ. ವಾಟ್ಸ್ ಆಯಪ್ ಜೂನ್ ತಿಂಗಳಲ್ಲಿ ಭಾರತದಲ್ಲಿ […]