ಬ್ಯಾಂಕ್ ಖಾತೆ ಮತ್ತು ಲಾಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಏನೆಲ್ಲಾ ಬದಲಾವಣೆ, ಹೊಸ ರೂಲ್ಸ್ ಏನು?

ನಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಬಂದಿದೆ. ಮುಂದಿನ ತಿಂಗಳು, ಅಂದರೆ ನವೆಂಬರ್ 1ರಿಂದ, ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು “ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ, 2025” ಅಡಿಯಲ್ಲಿ ಈ ಹೊಸ ನಿಯಮಗಳನ್ನು ತರಲು ನಿರ್ಧರಿಸಿದೆ. ಖಾತೆಗೆ ನಾಲ್ಕು ನಾಮಿನಿ ಹಾಕಬಹುದು: ಇದುವರೆಗೂ ಬ್ಯಾಂಕ್ ಖಾತೆಗೆ ಕೇವಲ ಒಬ್ಬರ ಹೆಸರನ್ನು ಮಾತ್ರ ನಾಮಿನಿಯಾಗಿ ಸೇರಿಸಲು ಸಾಧ್ಯವಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈಗಿನಿಂದ ನೀವು ನಿಮ್ಮ […]
ಫ್ಲಿಪ್‌ಕಾರ್ಟ್‌ನಲ್ಲೂ ಎಂಟ್ರಿ ಕೊಟ್ಟ ರಾಯಲ್ ಎನ್‌ಫೀಲ್ಡ್ 350 ಸಿಸಿ ಬೈಕ್!

ಮುಂಬೈ: ಮೋಟಾರ್‌ಬೈಕ್ ಪ್ರಿಯರಿಗೆ ಒಂದು ಗುಡ್ ನ್ಯೂಸ್. ವಾಲ್‌ಮಾರ್ಟ್ ಮಾಲೀಕತ್ವದ ಇ–ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್, ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೂ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ತಲುಪಿಸುವುದಾಗಿ ಘೋಷಿಸಿದೆ. ರಾಯಲ್ ಎನ್‌ಫೀಲ್ಡ್ ತನ್ನ 350 ಸಿಸಿ ಶ್ರೇಣಿಯ ಬೈಕ್‌ಗಳು– ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಮತ್ತು ಮೀಟಿಯರ್ 350–ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗುವಂತೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಕಂಪನಿ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 22ರಿಂದ ಬೆಂಗಳೂರು, ಗುರುಗ್ರಾಮ್, ಕೋಲ್ಕತ್ತಾ, ಲಖನೌ ಮತ್ತು […]
ಪ್ರತಿ ದಿನ ₹333 ಉಳಿಸಿದ್ರೆ ₹ 17 ಲಕ್ಷ ಗಳಿಸ್ತೀರಿ :ಅಂಚೆ ಇಲಾಖೆಯ ಈ ಬೊಂಬಾಟ್ ಯೋಜನೆ ಬಗ್ಗೆ ನಿಮಗೆ ಗೊತ್ತಾ!

ನಿಮಗೆ ಕಡಿಮೆ ಸಂಬಳ ಇದ್ರೂ ಯೋಚಿಸಬೇಕಿಲ್ಲ, ಸಣ್ಣ ಹೂಡಿಕೆದಾರರಿಗೂ ಅನುಕೂಲವಾಗುವ ಒಂದು ಅದ್ಬುತ ಯೋಜನೆ ಅಂಚೆ ಇಲಾಖೆಯಲ್ಲಿದೆ. ಪೋಸ್ಟ್ ಆಫೀಸ್‌ನ ಈ ಸಣ್ಣ ಉಳಿತಾಯ ಯೋಜನೆಗಳಿಂದ ನೀವು ಒಳ್ಳೆಯ ಲಾಭ ಪಡೀಬಹುದು. ಬನ್ನಿ ಆ ಯೋಜನೆ ಯಾವುದು? ನಿಮಗಾಗುವ ಅನುಕೂಲವೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಆರ್ ಡಿ ಮಾಡಿ ಪಡೆಯಿರಿ ಅತ್ಯುತ್ತಮ ಉಳಿತಾಯ: ‘ಮರುಕಳಿಸುವ ಠೇವಣಿ’ ಅಂದರೆ ರೆಕರಿಂಗ್ ಡೆಪಾಸಿಟ್ (RD) ಯೋಜನೆಯಲ್ಲಿ ನೀವು. ತಿಂಗಳಿಗೆ ಕೇವಲ ₹100 ರಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯಲ್ಲಿ, ನೀವು […]
ಯಕ್ಷಗಾನದಲ್ಲೂ ವೈರಲ್ಲಾಯ್ತು“ಹೂವಿನ ಬಾಣದಂತೆ” ಹಾಡು: ನಕ್ಕು ಸುಸ್ತಾದ ಪ್ರೇಕ್ಷಕರು! ಕೆಲವರು ಗರಂ

ಕಳೆದ ಒಂದು ವಾರದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗುತ್ತಿರುವ “ಹೂವಿನ ಬಾಣದಂತೆ ಯಾರಿಗೂ ಕಾಣದಂತೆ” ಹಾಡು ಈಗ ಯಕ್ಷಗಾನದ ರಂಗಸ್ಥಳದಲ್ಲೂ ಸದ್ದು ಮಾಡಿದೆ. ಆ ಮೂಲಕ ಸೋಶಿಯಲ್ ಮೀಡಿಯಾದ ಈ ಟ್ರೆಂಡಿಂಗ್ ಹಾಡಿಗೆ ಯಕ್ಷಪ್ರಿಯರು ನಕ್ಕು ನಕ್ಕು ಸುಸ್ತು ಹೊಡೆದಿದ್ದಾರೆ. ಹೌದು. ಸೋಶಿಯಲ್ ಮೀಡಿಯಾದಲ್ಲಿ ಯಕ್ಷಗಾನದ ತುಣುಕೊಂದು ವೈರಲ್ ಆಗಿದೆ. ಯಕ್ಷಗಾನ ಕಲಾವಿದರಾದ ಉದಯ ಹೆಗಡೆ ಕಡಬಾಳ, ಪಾತ್ರವೊಂದನ್ನು ನಿರ್ವಹಿಸುತ್ತ ನನಗೆ ರೂಪದಿಂದಲೇ ತೊಂದರೆ ಕೊಡುತ್ತಿದ್ದಾಳೆ ಅವಳು “ಯಾವ ರೀತಿ ಅಂದ್ರೆ “ಹೂವಿನ ಬಾಣದಂತೆ..ಯಾರಿಗೂ ಕಾಣದಂತೆ” ಎಂದು ಹಾಡನ್ನು […]
AI ಫೋಟೋ ಟ್ರೆಂಡ್ ಆಕರ್ಷಣೆಗೆ ಬಿದ್ದರೆ ಖಾತೆಯಿಂದ ಹಣ ಗೋತಾ? : AI ಪ್ರಿಯರೇ ಹುಷಾರು!

ಇದು AI ಯುಗ, ಆದರೆ ಆ AI ಯಿಂದಲೇ ನಾವು ಪಡೆದುಕೊಂಡಷ್ಟು ಕೆಲವೊಂದನ್ನು ಕಳೆದುಕೊಳ್ಳುತ್ತಲೂ ಇದ್ದೇವೆ. AI ನಿಂದಲೇ ಸೈಬರ್ ಅಪರಾಧಗಳೂ ಏರಿಕೆಯಾಗುತ್ತಿವೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರೇ ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ. ಇತ್ತೀಚೆಗೆ ಟ್ರೆಂಡಿಂಗ್ AI ಆ್ಯಪ್ ‘ನ್ಯಾನೋ ಬನಾನಾ’ಗೆ ತಮ್ಮ ಫೋಟೋ ಅಪ್ಲೋಡ್ ಮಾಡಿದವರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ. ಕೆಲವರಿಗಂತೂ ಖಾತೆಯಿಂದ 70 ಸಾವಿರ ರೂಪಾಯಿಗಳು ಮಾಯವಾಗಿವೆ. ಈ ಘಟನೆಯು AI ಆ್ಯಪ್ಗಳ ಬಳಕೆಯಲ್ಲಿ ಜಾಗರೂಕತೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ವೇಮುಲವಾಡ ಜಿಲ್ಲೆಯಲ್ಲಿಇತ್ತೀಚೆಗೆ […]