ಐಪಿಎಲ್ ನಾಯಕ ಸ್ಥಾನದ ಯುಗಾಂತ್ಯಕ್ಕೆ ಮುಂಬೈ ಇಂಡಿಯನ್ಸ್ ನಿಂದ ಭಾವಪೂರ್ಣ ವಿದಾಯ

ಮುಂಬೈ: ಮುಂಬೈ ಇಂಡಿಯನ್ಸ್ (MI) ತಂಡವು ನಾಯಕ ಸ್ಥಾನದಿಂದ ಹೊರನಡೆಯುತ್ತಿರುವ ತನ್ನ ಆಟಗಾರ ರೋಹಿತ್ ಶರ್ಮಾ ಅವರಿಗೆ ಹೃತ್ಪೂರ್ವಕ ವಿದಾಯ ಸಲ್ಲಿಸಿದೆ. ಶರ್ಮಾ ಅವರ ಐಪಿಎಲ್ ಪಯಣದ ಯುಗ ಅಂತ್ಯವಾಗಿದೆ. ಶರ್ಮಾ ಅವರ ನಾಯಕತ್ವದಲ್ಲಿ, ತಂಡವು 2013 ರಿಂದ ಐದು IPL ಪ್ರಶಸ್ತಿಗಳು ಮತ್ತು ಚಾಂಪಿಯನ್ಸ್ ಲೀಗ್ T20 ಗೆಲುವು ಸೇರಿದಂತೆ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಶರ್ಮಾ ಅವರ ಅಪ್ರತಿಮ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಿದೆ. ಇನ್ನು ಮುಂದೆ ತಂಡದ ನ್ಯಾಕತ್ವವನ್ನು ಹಾರ್ದಿಕ್ […]
ಕ್ರಿಕೆಟ್ ದಂತಕತೆ ಎಂ.ಎಸ್. ಧೋನಿಯ ಜರ್ಸಿ ನಂ.7 ಇನ್ನು ಮುಂದೆ ಆಟಗಾರರಿಗೆ ಲಭ್ಯವಿಲ್ಲ: ಜೆರ್ಸಿಗೆ ನಿವೃತ್ತಿ ನೀಡಲು BCCI ನಿರ್ಧಾರ

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಐಕಾನಿಕ್ ನಂ.7 ಜೆರ್ಸಿ ಇನ್ನು ಮುಂದೆ ಯಾವುದೇ ಭಾರತೀಯ ಆಟಗಾರ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಧೋನಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದ ಮೂರು ವರ್ಷಗಳ ನಂತರ, ಧೋನಿ ಅವರ ವೃತ್ತಿಜೀವನದುದ್ದಕ್ಕೂ ಅವರ ಜೊತೆ ಇದ್ದ ಸಂಖ್ಯೆಗೆ ನಿವೃತ್ತಿ ನೀಡಲು BCCI ನಿರ್ಧರಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, 2004 ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ ಧೋನಿ ಕ್ರೀಡೆಗೆ ನೀಡಿದ ಕೊಡುಗೆಗೆ ಗೌರವ […]
ಕೇಂದ್ರ ಸರ್ಕಾರ ಆರೋಪ : ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರ ಅವಕಾಶ

ನವದೆಹಲಿ: ‘ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರವಾಗಿ ಅವಕಾಶ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರವಾಗಿ ಭಾರತದ ಜೊತೆ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತಂದುಕೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಕೇಂದ್ರ ಸರ್ಕಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. ಕೆನಡಾ ವಿರುದ್ಧ ಭಾರತ ಸರ್ಕಾರ ಗಂಭೀರ ಆರೋಪ ಮಾಡಿದೆ. ಆ ದೇಶದಲ್ಲಿ ಭಾರತ ವಿರುದ್ಧದ ಉಗ್ರ ಕೃತ್ಯಗಳಿಗೆ ಸರ್ಕಾರವೇ ಅವಕಾಶ ನೀಡುತ್ತಿದೆ ಎಂದು ಟೀಕಿಸಿದೆ. ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ […]
ನ.19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ v/s ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್: ಎಲ್ಲರ ಚಿತ್ತ ಭಾರತದತ್ತ

ಗುರುವಾರ ಈಡನ್ ಗಾರ್ಡನ್‌ನಲ್ಲಿ ನಡೆದ 2023 ರ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತದ ವಿರುದ್ಧ ಫೈನಲ್ ಪ್ರಶಸ್ತಿ ಹಣಾಹಣಿಗೆ ಸಿದ್ದವಾಗಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ತಂಡವು 3 ವಿಕೆಟ್ ಮತ್ತು 2.4 ಓವರ್‌ಗಳು ಉಳಿದಿರುವಂತೆಯೇ 213 ರನ್‌ಗಳನ್ನು ಬೆನ್ನಟ್ಟುವ ಮೂಲಕ ರೋಮಾಂಚಕವಾಗಿ ಮೇಲುಗೈ ಸಾಧಿಸಿತು. ಐದು ಬಾರಿ ಟೂರ್ನಿ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಇದು 8ನೇ ಏಕದಿನ ವಿಶ್ವಕಪ್. ಭಾರತವು ಎರಡು […]
ಮುರುಘಾ ಶ್ರೀ ಬಿಡುಗಡೆ: ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಇಂದು ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಮುರುಘಾ ಶ್ರೀ ವಿರುದ್ಧದ ಎರಡು ಪೋಕ್ಸೋ ಪ್ರಕರಣಗಳ ಪೈಕಿ ಒಂದರಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಚಿತ್ರದುರ್ಗ ಜೈಲಿನಿಂದ ಶ್ರೀಗಳು ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಿತ್ರದುರ್ಗದ ಕೋರ್ಟ್ಗೆ ಹಾಜರಾಗಿದ್ದರು. ಬುಧವಾರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಗೆ ಶ್ರೀಗಳನ್ನು […]