ಐಟಿಎಫ್ ವರ್ಲ್ಡ್ ಟೆನ್ನಿಸ್ ಟೂರ್ನಿಗೆ ಚಾಲನೆ ನೀಡಿದ ಅಜರ್ : ಧಾರವಾಡದಲ್ಲಿ ಮಹಿಳೆಯರಿಗೂ ಅವಕಾಶ ಸಿಗಲಿ

ಧಾರವಾಡ: ಧಾರವಾಡ ಜಿಲ್ಲಾ ಟೆನ್ನಿಸ್ ಸಂಸ್ಥೆ (ಡಿಡಿಎಲ್‍ಟಿಎ) ಆಶ್ರಯದಲ್ಲಿ ರಾಜ್ಯಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಪುರುಷರ ಟೆನ್ನಿಸ್ ಪಂದ್ಯಾವಳಿಯನ್ನು ಬಲೂನ್ ಹಾರಿ ಬಿಡುವ ಮೂಲಕ ಹಾಗೂ ಸಾಂಕೇತಿಕವಾಗಿ ಟೆನ್ನಿಸ್ ಆಡುವ ಮೂಲಕ ಮಾಜಿ ಸಂಸದ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಹಾಗೂ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ಪಂದ್ಯಾವಳಿ ಉದ್ಘಾಟಿಸಿದರು.ಧಾರವಾಡದಲ್ಲಿ ಮಹಿಳೆಯರಿಗೂ ಅವಕಾಶ ಸಿಗಲಿ ಎಂದ ಅಜರ್, ಇಂದಿನಿಂದ ಐದು ದಿನಗಳ ಕಾಲ ನಡೆಯುವ ಐಟಿಎಫ್ ವರ್ಲ್ಡ್ ಟೆನ್ನಿಸ್ […]
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಟಿಕೆಟ್ ಮಾರಾಟ : ಐಸಿಸಿ ಏಕದಿನ ವಿಶ್ವಕಪ್

ಬೆಂಗಳೂರು : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ 4 ಪಂದ್ಯಗಳ ಟಿಕೆಟ್ ಮಾರಾಟದ ದಿನಾಂಕವನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ.ಐಸಿಸಿ ಏಕದಿನ ವಿಶ್ವಕಪ್ನ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಟಿಕೆಟ್ ಮಾರಾಟಕ್ಕೆ ಚಾಲನೆ ದೊರೆತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಂಗಳವಾರ, ಬುಧವಾರ ಹಾಗೂ ಗುರುವಾರ ಕ್ರೀಡಾಂಗಣದ ನಾಲ್ಕು ಕೌಂಟರ್‌ನಲ್ಲಿ ಟಿಕೆಟ್ ಮಾರಾಟ ನಡೆಯಲಿದೆ. ಅಕ್ಟೋಬರ್ […]
ಗೆಲುವಿನ ಖಾತೆ ತೆರೆಯುವ ಉತ್ಸಾಹದಲ್ಲಿ ಉಭಯ ತಂಡಗಳು : ಆಸ್ಟ್ರೇಲಿಯಾ – ಶ್ರೀಲಂಕಾ ಮುಖಾಮುಖಿ

ಲಕ್ನೋ (ಉತ್ತರ ಪ್ರದೇಶ): ಲಕ್ನೋದಏಕಾನಾ ಕ್ರಿಕೆಟ್ ಮೈದಾನದಲ್ಲಿಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ.ಆಸ್ಟ್ರೇಲಿಯಾಗೆ ಫೀಲ್ಡಿಂಗ್ಗೆ ಇಳಿದಿದೆ. ಉಭಯ ತಂಡಗಳು ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿವೆ. ಹಾಗಾಗಿ ಎರಡರಲ್ಲಿ ಒಂದು ತಂಡ ಇಂದಿನ ಪಂದ್ಯವನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಗೆಲುವಿನ ಖಾತೆ ತೆರೆಯಲಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಬಳಿಕ ಲಂಕಾ ನಾಯಕ ಹೇಳಿದ್ದಿಷ್ಟು: ನಾವು […]
ಪಾಕ್ ವಿರುದ್ಧ ಟಾಸ್ ಗೆದ್ದ ರೋಹಿತ್ ಪಡೆ ಫೀಲ್ಡಿಂಗ್ ಆಯ್ಕೆ, ಗಿಲ್ಗೆ ಅವಕಾಶ : ಹೈವೋಲ್ಟೇಜ್ ಪಂದ್ಯ

ಅಹಮದಾಬಾದ್ (ಗುಜರಾತ್):ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿದೆ. ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ 12ನೇ ಪಂದ್ಯ ಇದಾಗಿದ್ದು, ಈ ಹೈವೋಲ್ಟೇಜ್ ಪಂದ್ಯದ ವೀಕ್ಷಣೆಗೆ ಪ್ರಪಂಚವೇ ಕಾದು ಕುಳಿತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಕದನ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದೆ.ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ 2023ರ ಏಕದಿನ ವಿಶ್ವಕಪ್ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ […]
ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ : ಐಸಿಸಿ ಏಕದಿನ ವಿಶ್ವಕಪ್

ಚೆನ್ನೈ(ತಮಿಳುನಾಡು): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಗಿವೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎದುರಾಳಿ ನಾಯಕ ಶಾಕಿಬ್ ಅಲ್ ಹಸನ್ ಮುಂದಾಳತ್ವದ ಬಾಂಗ್ಲಾ ತಂಡ ಬ್ಯಾಟಿಂಗ್ಗೆ ಮುಂದಾಗಿದೆಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಚೆನ್ನೈನ ಚಿದಂಬರಂ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧ ಮೊದಲ ನಿರಾಯಾಸ ಗೆಲುವು ಕಂಡ ಬಾಂಗ್ಲಾ, ತನ್ನ ಎರಡನೇ […]