ಇಂದು ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಸೆಣಸಾಟ
ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಿರುವ ಅಪರೂಪದ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದು. ಈವರೆಗಿನ 5 ಪಂದ್ಯಗಳಲ್ಲಿ ಅದು ಮೂರನ್ನು ಗೆದ್ದಿದೆ. ಭಾರತಕ್ಕೆ ಒಲಿದದ್ದು 2 ಗೆಲುವು ಮಾತ್ರ. ರವಿವಾರದ ಮುಖಾಮುಖಿಯ ಹಿನ್ನೆಲೆಯಲ್ಲಿ ಈ ಫಲಿತಾಂಶಗಳತ್ತ ಒಂದು ಇಣುಕುನೋಟ ಹಾಯಿಸಲಾಗಿದೆ.ಆದರೆ ಗೆದ್ದು ಗೆದ್ದು ಕೊನೆಯಲ್ಲಿ ವಿಚಿತ್ರ ರೀತಿಯಲ್ಲಿ ಬಿದ್ದು ಕೂಟದಿಂದ ನಿರ್ಗಮಿಸುವುದು ಹರಿಣಗಳ ಪಡೆಯ ಹಣೆಬರಹವೇ ಆಗಿರುವುದನ್ನು ಮರೆಯುವಂತಿಲ್ಲ. ಹೀಗಾಗಿ ಅದಕ್ಕೆ ಸೆಮಿಫೈನಲ್ ಹಂತವೇ ಅಂತಿಮ ಮೆಟ್ಟಿಲಾಗುತ್ತ ಬಂದಿರುವುದು ವಿಪರ್ಯಾಸ.“ಚೋಕರ್’ ಹಣೆಪಟ್ಟಿಯನ್ನು ಕಿತ್ತೆಸೆಯಲು ದಕ್ಷಿಣ […]
ಉಚಿತ ಟಿಕೆಟ್ ಹಿಂದಿರುಗಿಸಿದ ಗವರ್ನರ್ : ಭಾರತ- ದ. ಆಫ್ರಿಕಾ ಕ್ರಿಕೆಟ್
ಕೋಲ್ಕತ್ತ,: ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು ಗವರ್ನರ್ ಅವರಿಗೆ ಟಿಕೆಟ್‌ಗಳನ್ನು ಒದಗಿಸಿತ್ತು.ಕಾಳಸಂತೆಯಲ್ಲಿ ಟಿಕೆಟ್ ಮಾರಾವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಗವರ್ನರ್ ಈ ನಿರ್ಧಾರ ಕೈಗೊಂಡಿದ್ದಾರೆ.ಪಶ್ಚಿಮ ಬಂಗಾಳದ ಗವರ್ನರ್ ಸಿ. ವಿ. ಆನಂದ ಬೋಸ್ ಅವರು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ವಿಶ್ವಕಪ್ ಪಂದ್ಯದ ನಾಲ್ಕು ಉಚಿತ ಟಿಕೆಟ್‌ಗಳನ್ನು ಶನಿವಾರ ಹಿಂದಿರುಗಿಸಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ರಾಜ್ಯಪಾಲರು ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಸಿಎಬಿಗೆ ಹಿಂದಿರುಗಿಸಿದ್ದಾರೆ. ಅವರು ರಾಜಭವನದಲ್ಲಿ ಜನತಾ ಕ್ರೀಡಾಂಗಣವನ್ನು ತೆರೆಯಲು ನಿರ್ಧರಿಸಿದ್ದಾರೆ, ಅಲ್ಲಿ ಜನರು ದೊಡ್ಡ […]
ನಾಳೆ ಅನಾವರಣ , ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್ ಬಾರಿಸುತ್ತಿರುವ 22 ಅಡಿ ಉದ್ದದ ಸಚಿನ್ ಪ್ರತಿಮೆ ನಿರ್ಮಾಣ.
ಮುಂಬೈ (ಮಹಾರಾಷ್ಟ್ರ): ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಅನಾವರಣ ಮಾಡಲಾಗುತ್ತಿದೆ. ‘ಭಾರತ ರತ್ನ’ ಸಚಿನ್ ತೆಂಡೂಲ್ಕರ್ ಅವರು ಅನಾವರಣ ಕಾರ್ಯಕ್ರಮಕ್ಕೆ ಸ್ವತಃ ಹಾಜರಿರಲಿದ್ದಾರೆ. ಸಚಿನ್ ಇಷ್ಟಪಡುವ ಮತ್ತು ತವರು ಮೈದಾನವಾದ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ ‘ತದ್ರೂಪಿ ಲಿಟಲ್ ಮಾಸ್ಟರ್’ ಮೈದಾಳಿದ್ದು, ಬುಧವಾರ (ನವೆಂಬರ್ 1) ಅದು ಅನಾವರಣಗೊಳ್ಳಲಿದೆ.ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿಗೆ ಅದೆಷ್ಟೋ ದಾಖಲೆಗಳಿವೆ. ಅವರಾಡಿದ […]
ಕಿವೀಸ್ಗೆ ಬೃಹತ್ ಟಾರ್ಗೆಟ್ ನೀಡಿದ ಆಸೀಸ್ : ಹಿಮದ ನಾಡಲ್ಲಿ ರನ್ ಗಳ ಸುರಿಮಳೆ
ಧರ್ಮಶಾಲಾ, ಹಿಮಾಚಲ ಪ್ರದೇಶ: ಏಕದಿನ ವಿಶ್ವಕಪ್‌ನಲ್ಲಿ (Cricket World Cup) ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ರನ್ಗಳ ಮಳೆಯೇ ಸುರಿದಿದೆ. ಕಿವೀಸ್ ಬೌಲರ್ಗಳ ಬೆವರಿಳಿಸಿದ ಆಸೀಸ್ ತಂಡ ನಿಗದಿತ 50 ಓವರ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 388 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿಗೆ ಬೃಹತ್ ಟಾರ್ಗೆಟ್ ನೀಡಿದೆ. ಕಿವೀಸ್ ಬೌಲರ್ಗಳ ಬೇವರಿಳಿಸಿದ ಆರಂಭಿಕರು: ಟಾಸ್ ಗೆದ್ದು ನ್ಯೂಜಿಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದ್ರೆ ಆರಂಭಿಕರಾದ […]
ಬಾಬರ್, ಶಕೀಲ್ ಅರ್ಧಶತಕ; ಹರಿಣಗಳಿಗೆ 271 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದ ಪಾಕಿಸ್ತಾನ : ವಿಶ್ವಕಪ್ ಕ್ರಿಕೆಟ್
ಚೆನ್ನೈ (ತಮಿಳುನಾಡು): ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡವು ಬಾಬರ್ ಆಜಂ ಮತ್ತು ಸೌದ್ ಶಕೀಲ್ ಅವರ ಅರ್ಧಶತಕದ ನೆರವಿನಿಂದ 46.3 ಓವರ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 270 ರನ್ ಗಳಿಸಿತು.ಚೆನ್ನೈನ ಚೆಪಾಕ್ ಪಿಚ್ನಲ್ಲಿ ಇಂದು ತಬ್ರೈಜ್ ಶಮ್ಸಿ ಅವರ ಸ್ಪಿನ್ ದಾಳಿಯ ನಡುವೆಯೂ ಪಾಕಿಸ್ತಾನ ಹರಿಣಗಳಿಗೆ 271 ರನ್ ಗುರಿ ನೀಡಿತು. ಮೈದಾನಕ್ಕಿಳಿದ ಪಾಕ್ ಆರಂಭಿಕರಿಗೆ ಮಾರ್ಕೊ ಜಾನ್ಸೆನ್ ಕಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಅಬ್ದುಲ್ಲಾ ಶಫೀಕ್ ಕೇವಲ 9 ರನ್ಗೆ […]