ಏಕದಿನ ವಿಶ್ವಕಪ್ 2023 : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು 49ನೇ ಶತಕ ಬಾರಿಸಿದ ಕಿಂಗ್ ಕೊಹ್ಲಿ , ದ.ಆ ಗೆ 327 ರನ್ ಗಳ ಟಾರ್ಗೆಟ್

2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಮಾದರಿಯಲ್ಲಿ 49ನೇ ಶತಕ ಸಿಡಿಸುವ ಮೂಲಕ ಸಚಿನ್‌ ದಾಖಲೆ ಸರಿಗಟ್ಟುವುದಲ್ಲದೇ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿಯೂ ಸಹಾಯಕರಾದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 326 ರನ್‌ ಗಳಿಸುವ ಮೂಲಕ ಸೌತ್‌ ಆಫ್ರಿಕಾಗೆ 327 ರನ್‌ಗಳ ಬಿಗ್‌ ಟಾರ್ಗೆಟ್‌ ನೀಡಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಪಂದ್ಯ ನಡೆಯುತ್ತಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಭಾರತ ತಂಡದ ಆರಂಭುಕರಾದ ನಾಯಕ ರೋಹಿತ್ ಶರ್ಮಾ ಸಿಡಿಸಲಬ್ಬರದ ಬ್ಯಾಟಿಂಗ್‌ ಮಾಡುವ ಮೂಲಕಪವರ್‌ ಪ್ಲೇನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಾಯಕರಾದರು.

ಇನ್ನು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡಕ್ಕೆ ನಾಯಕ ರೋಹಿತ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌ ಉತ್ತಮ ಆರಂಭ ನೀಡುವಲ್ಲಿ ಸಹಾಯಕವಾಯಿತು. 35ನೇ ವರ್ಷದ ಹುಟ್ಟುಹಬ್ಬನ್ನು ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಆಫ್ರಿಕಾ ವಿರುದ್ಧ ತಾಳ್ಮೆಯ ಆಟವಾಡುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲು ಸಹಾಯಕರಾದರು. ಇದೇ ವೇಳೆ ಕೊಹ್ಲಿ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಸಚಿನ್‌ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ 121 ಎಸೆತದಲ್ಲಿ 10 ಬೌಂಡರಿಗಳ ಮೂಲಕ 101 ರನ್‌ ಸಿಡಿಸಿ ಅಬ್ಬರಿಸಿದರು. ಉಳಿದಂತೆ ಸೂರ್ಯಕುಮಾರ್ ಯಾದವ್ 22 ರನ್ ಮತ್ತು ರವೀಂದ್ರ ಜಡೇಜಾ 29 ರನ್‌ ಗಳಿಸಿದರು. ವಿರಾಟ್ ಕೊಹ್ಲಿ ತಮ್ಮ ಏಕದಿನ ಮಾದರಿಯಲ್ಲಿ 49ನೇ ಶತಕ ಸಿಡಿಸುವ ಮೂಲಕ ಸಚಿನ್‌ ದಾಖಲೆ ಸರಿಗಟ್ಟುವುದಲ್ಲದೇ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿಯೂ ಸಹಾಯಕರಾದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 326 ರನ್‌ ಗಳಿಸುವ ಮೂಲಕ ಸೌತ್‌ ಆಫ್ರಿಕಾಗೆ 327 ರನ್‌ಗಳ ಬಿಗ್‌ ಟಾರ್ಗೆಟ್‌ ನೀಡಿದೆ.