ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿ ಭಾರತವನ್ನು ಮುನ್ನಡೆಸಲಿದ್ದಾರೆ ಪಿವಿ ಸಿಂಧು, ಲಕ್ಷ್ಯ ಸೇನ್

ಟೊರೊಂಟೊ(ಕೆನಡಾ): ಕ್ಯಾಲ್ಗರಿಯಲ್ಲಿ ಇಂದಿನಿಂದ ಪ್ರಾರಂಭವಾಗುವ ಕೆನಡಾ ಓಪನ್ 2023 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಷಟ್ಲರ್‌ಗಳಾದ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಭಾರತವನ್ನು ಮುನ್ನಡೆಸಲಿದ್ದಾರೆ.ಗಾಯದಿಂದ ಮರಳಿದ ನಂತರ ಪಿವಿ ಸಿಂಧು ಅವರ ರಾಕೆಟ್​ ಮೌನವಾಗಿದೆ ಎನ್ನಬಹುದು. ಈ ವರ್ಷ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಕೆನಡಾ ಓಪನ್​ನಿಂದ ಕಮ್​ಬ್ಯಾಕ್​ ನಿರೀಕ್ಷೆ ಇದೆ. ತೈಪೆ ಓಪನ್ 2023 ಅನ್ನು ಕಳೆದುಕೊಂಡ ನಂತರ ಪಿವಿ ಸಿಂಧು ಮತ್ತೆ ತಮ್ಮ ಹೊಸ ಪ್ರಯಾಣವನ್ನು ಕೆನಡಾ ಓಪನ್​ನಿಂದ ಆರಂಭಿಸಲು ಇಚ್ಚಿಸಿದ್ದಾರೆ. 12ನೇ […]

ಬಿಸಿಸಿಐ ಘೋಷಣೆ : ಭಾರತ ಕ್ರಿಕೆಟ್ ತಂಡಕಕ್ಕೆ ಡ್ರೀಮ್-11 ಪ್ರಾಯೋಜಕತ್ವ

ಮುಂಬೈ: ಬೈಜೂಸ್‌ಗೆ (Byju’s) ಬದಲಾಗಿ ಡ್ರೀಮ್-11 ಜೆರ್ಸಿ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ. ಇನ್ಮುಂದೆ ಟೀಂ ಇಂಡಿಯಾ (Team India) ಡ್ರೀಮ್‌-11 ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದೇ ತಿಂಗಳಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿ ಮೂಲಕ ಭಾರತ ಡ್ರೀಮ್‌-11 ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ. ಕ್ರಿಕೆಟ್‌ ಅಭಿಮಾನಿಗಳ ಜನಪ್ರಿಯ ಗೇಮಿಂಗ್‌ ಪ್ಲಾಟ್‌ಫಾರ್ಮ್ ಡ್ರೀಮ್-11 (Dream11) ಭಾರತ ಕ್ರಿಕೆಟ್ ತಂಡದ ಜೆರ್ಸಿ (Jerseys) ಪ್ರಾಯೋಜಕತ್ವ ಪಡೆದುಕೊಂಡಿದೆ. ಮುಂದಿನ 3 ವರ್ಷಗಳ ಅವಧಿಗೆ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿರುವುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) […]

ಏಷ್ಯಾಕಪ್​ ಮೂಲಕ ಕೆಎಲ್​ ರಾಹುಲ್​, ಜಸ್ಪ್ರೀತ್​ ಬೂಮ್ರಾ ಮತ್ತೆ ಭಾರತ ತಂಡಕ್ಕೆ

ನವದೆಹಲಿ: ಈಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗಾಯಗೊಂಡು ಕಳೆದ ನವೆಂಬರ್​ನಿಂದ ಕ್ರಿಕೆಟ್​ನಿಂದ ದೂರವುಳಿದಿರುವ ಬೂಮ್ರಾ, ಐಪಿಎಲ್​ನಲ್ಲಿ ಇಂಜ್ಯುರಿಯಾದ ಕೆಎಲ್​ ರಾಹುಲ್​ ಏಷ್ಯಾ ಕಪ್​ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ರಿಷಬ್​ ಪಂತ್​, ಜಸ್ಪ್ರೀತ್​ ಬೂಮ್ರಾ ಗಾಯಗೊಂಡಿದ್ದು, ತಂಡಕ್ಕೆ ಹಿನ್ನಡೆ ಉಂಟಾಗಿದೆ. ಏಷ್ಯಾ ಕಪ್​ ಮೂಲಕ ಗಾಯಾಳುಗಳಾದ ಕೆಎಲ್​ ರಾಹುಲ್​ ಮತ್ತು ಜಸ್ಪ್ರೀತ್​ ಬೂಮ್ರಾ ಭಾರತ ಕ್ರಿಕೆಟ್​ ತಂಡಕ್ಕೆ […]

ಮೂರು ಟಿ20 ಸರಣಿಯ ವೇಳಾಪಟ್ಟಿ ಪ್ರಕಟ -ಭಾರತ ಐರ್ಲೆಂಡ್​ ಪ್ರವಾಸ

ಡಬ್ಲಿನ್​: ಭಾರತ, ಐರ್ಲೆಂಡ್ ನಡುವಿನ ಎಲ್ಲ ಮೂರು ಪಂದ್ಯಗಳು ಐರ್ಲೆಂಡ್​ ರಾಜಧಾನಿ ಡಬ್ಲಿನ್‌ನ ಮಲಾಹೈಡ್‌ನಲ್ಲಿ ಆಗಸ್ಟ್ 18 ರಿಂದ 23ರ ವರೆಗೆ ನಡೆಯಲಿವೆ. ಜುಲೈ ಮತ್ತು ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ ಪ್ರವಾಸದ ಬಳಿಕ ಭಾರತ ತಂಡ ಐರ್ಲೆಂಡ್​ಗೆ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್​ ಇಂಡೀಸ್​ ಪ್ರವಾಸದ ಬಳಿಕ ಆಗಸ್ಟ್​ನಲ್ಲಿ ಭಾರತ ಪುರುಷರ ಕ್ರಿಕೆಟ್​ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲ್ಲಿದ್ದು, ಮೂರು ಪಂದ್ಯಗಳ T20 ಸರಣಿಯನ್ನು ಆಡಲಿದೆ ಎಂದು ಕ್ರಿಕೆಟ್ ಐರ್ಲೆಂಡ್ ದೃಢಪಡಿಸಿರುವುದಾಗಿ ಐಸಿಸಿ ಮಂಗಳವಾರ ಪ್ರಕಟಿಸಿದೆ. ಈ ಬಗ್ಗೆ […]

ಗಾಲ್ಫ್ ಮೈದಾನದಲ್ಲಿ ಗ್ಯಾರಿ ಪ್ಲೇಯರ್ ಜೊತೆಗಿನ ಫೋಟೋ ಹಂಚಿಕೊಂಡ ತೆಂಡೂಲ್ಕರ್

ನವದೆಹಲಿ: ಹಿರಿಯ ಕ್ರಿಕೆಟಿಗ ಹಾಗೂ ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ.ಇದೀಗ ಹೊಸ ಆಟಗಾರನಾಗಿ ಮಾಸ್ಟರ್ ಬ್ಲಾಸ್ಟರ್ ಮೈದಾನಕ್ಕೆ ಬಂದಿದ್ದಾರೆ. ಸಚಿನ್ ಈ ಮೈದಾನದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೊಸ ಆಟದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೃತ್ತಿಪರ ಗಾಲ್ಫ್ ಆಟಗಾರ ಗ್ಯಾರಿ ಪ್ಲೇಯರ್ ಅವರೊಂದಿಗೆ ಸಚಿನ್ ತೆಂಡೂಲ್ಕರ್ ಕೆಲ ಕ್ಷಣಗಳನ್ನು ಕಳೆದಿದ್ದು, ಸವಿ ಕ್ಷಣಗಳ ಬಗ್ಗೆ ಇನ್​ಸ್ಟಾಗ್ರಾಮ್​​ನಲ್ಲಿ​ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ […]