ಮೂರು ಟಿ20 ಸರಣಿಯ ವೇಳಾಪಟ್ಟಿ ಪ್ರಕಟ -ಭಾರತ ಐರ್ಲೆಂಡ್ ಪ್ರವಾಸ

ಡಬ್ಲಿನ್: ಭಾರತ, ಐರ್ಲೆಂಡ್ ನಡುವಿನ ಎಲ್ಲ ಮೂರು ಪಂದ್ಯಗಳು ಐರ್ಲೆಂಡ್ ರಾಜಧಾನಿ ಡಬ್ಲಿನ್‌ನ ಮಲಾಹೈಡ್‌ನಲ್ಲಿ ಆಗಸ್ಟ್ 18 ರಿಂದ 23ರ ವರೆಗೆ ನಡೆಯಲಿವೆ. ಜುಲೈ ಮತ್ತು ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಭಾರತ ತಂಡ ಐರ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಆಗಸ್ಟ್‌ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲ್ಲಿದ್ದು, ಮೂರು ಪಂದ್ಯಗಳ T20 ಸರಣಿಯನ್ನು ಆಡಲಿದೆ ಎಂದು ಕ್ರಿಕೆಟ್ ಐರ್ಲೆಂಡ್ ದೃಢಪಡಿಸಿರುವುದಾಗಿ ಐಸಿಸಿ ಮಂಗಳವಾರ ಪ್ರಕಟಿಸಿದೆ. ಈ ಬಗ್ಗೆ […]
ಗಾಲ್ಫ್ ಮೈದಾನದಲ್ಲಿ ಗ್ಯಾರಿ ಪ್ಲೇಯರ್ ಜೊತೆಗಿನ ಫೋಟೋ ಹಂಚಿಕೊಂಡ ತೆಂಡೂಲ್ಕರ್

ನವದೆಹಲಿ: ಹಿರಿಯ ಕ್ರಿಕೆಟಿಗ ಹಾಗೂ ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ.ಇದೀಗ ಹೊಸ ಆಟಗಾರನಾಗಿ ಮಾಸ್ಟರ್ ಬ್ಲಾಸ್ಟರ್ ಮೈದಾನಕ್ಕೆ ಬಂದಿದ್ದಾರೆ. ಸಚಿನ್ ಈ ಮೈದಾನದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೊಸ ಆಟದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೃತ್ತಿಪರ ಗಾಲ್ಫ್ ಆಟಗಾರ ಗ್ಯಾರಿ ಪ್ಲೇಯರ್ ಅವರೊಂದಿಗೆ ಸಚಿನ್ ತೆಂಡೂಲ್ಕರ್ ಕೆಲ ಕ್ಷಣಗಳನ್ನು ಕಳೆದಿದ್ದು, ಸವಿ ಕ್ಷಣಗಳ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ […]
ಹವಾಮಾನ ಇಲಾಖೆಯಿಂದ ಮುನ್ಸೂಚನೆ ಮುಂದಿನ ಐದು ದಿನಗಳ ಕಾಲ ಕರಾವಳಿ ಭಾಗದಲ್ಲಿ ಮಳೆ

ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಕರಾವಳಿಯಲ್ಲಿ ಮುಂದಿನ ಐದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮಲೆನಾಡು, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 26ರಿಂದ ಜೂ 30ರವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದಿದೆ.ರಾಜ್ಯದಲ್ಲಿ ಮುಂದಿನ ತಿಂಗಳು ಮಳೆ ಪ್ರಮಾಣ ಎಷ್ಟಿರಲಿದೆ […]
ದಿನೇಶ್ ಕಾರ್ತಿಕ್ ಅವರಿಂದ ನಟರಾಜನ್ ನಿರ್ಮಿಸಿದ ಕ್ರಿಕೆಟ್ ಮೈದಾನ ಲೋಕಾರ್ಪಣೆ

ಸೇಲಂ (ತಮಿಳುನಾಡು): ಭಾರತ ತಂಡದಲ್ಲಿ ರ್ಯಾಕರ್ ಸ್ಪೆಷಲಿಸ್ಟ್ ಆಗಿರುವ ಮತ್ತು ಟಿ20 ಮಾದರಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ಟಿ ನಟರಾಜನ್ ಅವರ ಕನಸು ನಿನ್ನೆ ಸಾಕಾರಗೊಂಡಿದೆ. ತಮ್ಮಂತೆ ಊರಿನ ಮಕ್ಕಳು ದೇಶಕ್ಕಾಗಿ ಆಡಬೇಕು ಎಂಬ ಉದ್ದೇಶದಿಂದ ಸ್ವಂತ ಖರ್ಚಿನಿಂದ ನಟರಾಜನ್ ತಾವೇ ದುಡಿದು ಕ್ರಿಕೆಟ್ ಕ್ರೀಡಾಂಗಣವನ್ನು ಮಾಡಿದ್ದರು. ನಿನ್ನೆ ಈ ಮೈದಾನ ಲೋಕಾರ್ಪಣೆಗೊಂಡಿದ್ದು, ಯುವ ಪ್ರತಿಭೆಗಳ ಅಭ್ಯಾಸಕ್ಕೆ ಅವಕಾಶ ಹೆಚ್ಚಿದಂತಾಗಿದೆ. ತಮಿಳುನಾಡಿನ ಕ್ರಿಕೆಟಿಗ ಟಿ ನಟರಾಜನ್ ಅವರು ಸ್ವಂತ ಖರ್ಚಿನಿಂದ ತಾವೇ ದುಡಿದು ನಿರ್ಮಿಸಿದ […]
ಇದೇ 27ಕ್ಕೆ ವೇಳಾಪಟ್ಟಿ ಪ್ರಕಟವಾಗಲಿದ್ದು, ವಿಶ್ವಕಪ್ಗೆ ಇನ್ನು ಮೂರೇ ತಿಂಗಳು.

ಐಸಿಸಿ ಇದೇ 27 ರಂದು ಮುಂಬೈನಲ್ಲಿ ಹೋಟೆಲ್ವೊಂದರಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದು, ಅಂದೇ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೇಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ -BCCI) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ-ICC)ಗೆ ಕರಡು ವೇಳಾ ಪಟ್ಟಿಯನ್ನು ಸಲ್ಲಿಸಿತ್ತು. ಐಸಿಸಿ ಸ್ಪರ್ಧಿಸುವ ರಾಷ್ಟ್ರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಿ ಆಯಾ ಕ್ರಿಕೆಟ್ ಮಂಡಳಿಗೆ ಕಳುಹಿಸಿಕೊಟ್ಟಿದೆ ಎಂದು ವರದಿಗಳಾಗಿವೆ. ವಿಶ್ವಕಪ್ ಸನಿಹವಾಗುತ್ತಿದ್ದು, ಇದೇ 27 ರಂದು ಐಸಿಸಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. […]