ಚೆಸ್‌ ವಿಶ್ವಕಪ್‌ ಫೈನಲ್‌: ನಾಳೆ 2ನೇ ಫೈಟ್​, ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ

ಬಾಕು (ಅಜರ್‌ಬೈಜಾನ್‌): ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 35 ನಡೆಗಳ ನಂತರ ಪಂದ್ಯ ಡ್ರಾ ಕಂಡಿದೆ. ನಾಳೆ ಎರಡನೇ ಕ್ಲಾಸಿಕಲ್ ಪಂದ್ಯ ನಡೆಯಲಿದೆ. ಇದರ ಫಲಿತಾಂಶದ ಮೂಲಕ ಪಂದ್ಯ ಟೈಬ್ರೇಕರ್​ನತ್ತ ಹೋಗಲಿದೆಯೇ ಎಂಬುದು ನಿರ್ಧಾರವಾಗಲಿದೆ.ಇಲ್ಲಿ ಇಂದಿನಿಂದ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್ 2023ರ ಫೈನಲ್​ನ ಮೊದಲ ಪಂದ್ಯವನ್ನು ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಡ್ರಾ ಮಾಡಿಕೊಂಡಿದ್ದಾರೆ.ಅಜರ್‌ಬೈಜಾನ್​ ದೇಶದ ಬಾಕುವಿನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್.ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವಣ ಫೈನಲ್‌ನ […]

2ನೇ ಟಿ20 ಟಾಸ್​ ಗೆದ್ದ ಭಾರತ ಐರ್ಲೆಂಡ್​ ವಿರುದ್ಧ ಬ್ಯಾಟಿಂಗ್​ ಆಯ್ಕೆ

ಡಬ್ಲಿನ್​(ಐರ್ಲೆಂಡ್​) : ಐರ್ಲೆಂಡ್​ ವಿರುದ್ಧ ಡಬ್ಲಿನ್​ನಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.ವೇಗಿ ಜಸ್ಪ್ರೀತ್​ ಬೂಮ್ರಾ ನೇತೃತ್ವದ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಕ್ಕೆ ತಂತ್ರ ರೂಪಿಸಿದ್ದರೆ, ಇತ್ತ ಆತಿಥೇಯ ಐರ್ಲೆಂಡ್​ ಕೂಡ ಬಲಿಷ್ಠ ಭಾರತವನ್ನು ಸೋಲಿಸಿ ಸರಣಿ ಸಮಬಲ ಸಾಧಿಸಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ನಾಯಕ ಪಾಲ್​ ಸ್ಟಿರ್ಲಿಂಗ್​ ಬ್ಯಾಟಿಂಗ್​ನಲ್ಲಿ ವಿಫಲವಾಗಿದ್ದರು. ಆರಂಭದಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕರ್ಟಿಸ್ ಕ್ಯಾಂಫರ್ ಮತ್ತು ಬ್ಯಾರಿ ಮೆಕಾರ್ಟಿ […]

ಮೈಸೂರು ವಾರಿಯರ್ಸ್​​ಗೆ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯ

ಬೆಂಗಳೂರು: ಬೆಂಗಳೂರು ತಂಡ ಲೀಗ್​ ಹಂತದಲ್ಲಿ ಐದನೇ ಸೋಲನ್ನು ಕಂಡಿದೆ. ಇನ್ನು ಐದು ಪಂದ್ಯಗಳು ಬಾಕಿ ಇದ್ದು ಪ್ರತಿ ಪಂದ್ಯ ಗೆಲ್ಲುವ ಒತ್ತಡ ತಂಡಕ್ಕಿದೆ.ಮಳೆ ಬಾಧಿತ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ 33 ರನ್‌ಗಳ ಗೆಲುವು (ವಿಜೆಡಿ ವಿಧಾನ) ಸಾಧಿಸಿದೆ.ಮೊದಲು ಬ್ಯಾಟ್ ಮಾಡಿದ ಮೈಸೂರು 185/7 ಉತ್ತಮ ಮೊತ್ತವನ್ನು ದಾಖಲಿಸಿತ್ತು. ಗುರಿ ಬೆನ್ನಟ್ಟಿದ ಬೆಂಗಳೂರು ಇನ್ನಿಂಗ್ಸ್‌ನ 11.1 ಓವರ್‌ ವೇಳೆಗೆ ಮಳೆ ಅಡ್ಡಿಯಾಯಿತು. ವಿಜೆಡಿ ವಿಧಾನದನ್ವಯ ಬೆಂಗಳೂರು 33 ರನ್‌ಗಳ ಹಿನ್ನೆಡೆಯಿದ್ದಿದ್ದರಿಂದ ಮೈಸೂರು […]

ಲಿಂಗ ಸಮಾನತೆ ಸಾರುವ ಮ್ಯಾಸ್ಕಾಟ್ ಬಿಡುಗಡೆ: 2023 ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್

ಗುರುಗ್ರಾಮ್ (ಹರಿಯಾಣ): ಕ್ರಿಕೆಟ್ ವಿಶ್ವಕಪ್ ಸಮೀಪಿಸುತ್ತಿರುವಾಗ ಪ್ರಚಾರದ ಅಂಗವಾಗಿ ಮತ್ತು ಜನರ ಆಕರ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಮ್ಯಾಸ್ಕಾಟ್ ಜೋಡಿಯನ್ನು ಐಸಿಸಿ ಪರಿಚಯಿಸಿದೆ. ಈ ಜೋಡಿ ಕ್ರಿಕ್ಟೋವರ್ಸ್ ಎಂಬ ಯುಟೋಪಿಯಾದಿಂದ ಹುಟ್ಟಿಕೊಂಡಿದೆ, ಪುರುಷ ಮತ್ತು ಸ್ತ್ರೀ ಮ್ಯಾಸ್ಕಾಟ್‌ಗಳು ಐಸಿಸಿ ಪ್ರಕಾರ ಲಿಂಗ ಸಮಾನತೆ ಮತ್ತು ವೈವಿಧ್ಯತೆ ಸಂಕೇತಗಳಾಗಿ ವಿಶಿಷ್ಟ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ. ಹಾಲಿ 19 ವರ್ಷದೊಳಗಿನ ವಿಶ್ವಕಪ್ ಚಾಂಪಿಯನ್‌ಗಳಾದ ಯಶ್ ಧುಲ್ ಮತ್ತು ಶಫಾಲಿ ವರ್ಮಾ ಗುರುಗ್ರಾಮ್‌ನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕಾರ್ಯಕ್ರಮದಲ್ಲಿ […]

ಭಾರತ-ಐರ್ಲೆಂಡ್‌ ಮೊದಲ ಟಿ-20ಗೆ ಪ್ರಸಿದ್ಧ ಕೃಷ್ಣ, ರಿಂಕು ಪಾದಾರ್ಪಣೆ

ಡಬ್ಲಿನ್​ (ಐರ್ಲೆಂಡ್​): ಇಲ್ಲಿನ ದಿ ವಿಲೇಜ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐರ್ಲೆಂಡ್​ ವಿರುದ್ಧದ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.ಈ ಸರಣಿಯ ಮೂಲಕ ಪ್ರಸಿದ್ಧ ಕೃಷ್ಣ ಮತ್ತು ರಿಂಕು ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಬ್ಬರು ಆಟಗಾರರಿಗೆ ಜಸ್ಪ್ರೀತ್​ ಬುಮ್ರಾ ಕ್ಯಾಪ್​ ಕೊಟ್ಟು ಸ್ವಾಗತಿಸಿದರು. ಐರ್ಲೆಂಡ್​-ಭಾರತ ನಡುವಿನ ಮೂರು ಟಿ20 ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಭಾರತ ಫೀಲ್ಡಿಂಗ್​ ಆಯ್ದುಕೊಂಡಿದೆ. ಐರ್ಲೆಂಡ್​​: […]