ಜ್ಯೂರಿಚ್ ಡೈಮಂಡ್ ಲೀಗ್​: ಮತ್ತೊಂದು ಚಿನ್ನದ ಪದಕಕ್ಕೆ ನೀರಜ್ ಚೋಪ್ರಾ ಹೆಜ್ಜೆ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಮುಕ್ತಾಯ ಕಂಡ ಬೆನ್ನಲ್ಲೇ ಜ್ಯೂರಿಚ್ ಡೈಮಂಡ್ ಲೀಗ್​ ನಡೆಯಲಿದ್ದು, ಅಥ್ಲೆಟಿಕ್ಸ್ ಅಭಿಮಾನಿಗಳು ನೀರಜ್‌ ಚೋಪ್ರಾ ಪ್ರದರ್ಶನ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿರುವ ಜಾವೆಲಿನ್‌ ಆಟಗಾರ ನೀರಜ್​ ಚೋಪ್ರಾ ಸೇರಿದಂತೆ ನೋಹ್ ಲೈಲ್ಸ್, ಶಾಕ್ಯಾರಿ ರಿಚರ್ಡ್‌ಸನ್, ಕಾರ್ಸ್ಟನ್ ವಾರ್‌ಹೋಮ್ ಮತ್ತು ಮಿಲ್ಟಿಯಾಡಿಸ್ ಟೆಂಟೊಗ್ಲೋ ಅವರು ಜ್ಯೂರಿಚ್ ಡೈಮಂಡ್ ಲೀಗ್​ನಲ್ಲಿ ಪ್ರತಿಷ್ಟಿತ ಪ್ರಶಸ್ತಿ ಗೆಲುವಿಗಾಗಿ ತಯಾರಿ ನಡೆಸುತ್ತಿದ್ದಾರೆ.ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದಿರುವ ನೀರಜ್​ ಚೋಪ್ರಾ, ಜ್ಯೂರಿಚ್ […]

ಪದಕ ಇಡೀ ಭಾರತಕ್ಕೆ ಸಲ್ಲುತ್ತದೆ : ಬುಡಾಪೆಸ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ನೀರಜ್ ಚೋಪ್ರಾ

ಬುಡಾಪೆಸ್ಟ್, ಹಂಗೇರಿ : ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ ಅವರು 88.17 ಮೀಟರ್‌ ದೂರ ಜಾವೆಲಿನ್​ ಎಸೆದು ಪದಕ ಗೆದ್ದರು. ವಿಶ್ವ ಚಾಂಪಿಯನ್ ಆದ ನಂತರ ನೀರಜ್ ಚೋಪ್ರಾ ಅವರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಮಾಧ್ಯಮದ ಮುಂದೆ ಮಾತನಾಡಿದ ನೀರಜ್ ಚೋಪ್ರಾ ಒಂದು ಕ್ಷಣ ಬಾವುಕರಾದರು. ‘ನಾನು ಈಗ ಏನು ಹೇಳಲಿ, ಈ […]

2024ರ ಪ್ಯಾರಿಸ್​ ಒಲಂಪಿಕ್​ಗೆ ಅರ್ಹತೆ ಪಡೆದ ಪಾರುಲ್ : 3000 ಮೀಟರ್​ ಓಟದಲ್ಲಿ ದಾಖಲೆ

ಬುಡಾಪೆಸ್ಟ್ (ಹಂಗೇರಿ): 3000 ಮೀಟರ್​ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ 11ನೇ ಸ್ಥಾನ ಪಡೆದು 2024ರ ಪ್ಯಾರಿಸ್​ ಒಲಂಪಿಕ್ಸ್​​ಗೆ ಆಯ್ಕೆ ಆಗಿದ್ದಾರೆ.ಸ್ಪರ್ಧೆಯಲ್ಲಿ 9:15.31 ಸಮಯದಲ್ಲಿ ಓಟ ಪೂರ್ಣಗೊಳಿಸಿದ ಅವರು, 11ನೇ ಸ್ಥಾನ ಪಡೆದರು. ಈ ಮೂಲಕ ಪಾರುಲ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 3000 ಮೀಟರ್​ ಓಟವನ್ನು 9:15.31 ನಿಮಿಷದಲ್ಲಿ ಪೂರೈಸಿದ್ದು ಭಾರತದ ದಾಖಲೆಯಾಗಿದೆ.ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರ 3000 ಮೀಟರ್​ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ […]

ಶಿವಮೊಗ್ಗ ಲಯನ್ಸ್ ಮಣಿಸಿ ಫೈನಲ್‌ಗೇರಿದ ಹುಬ್ಬಳ್ಳಿ ಟೈಗರ್ಸ್: ಮಹಾರಾಜ ಟ್ರೋಫಿ

ಬೆಂಗಳೂರು: ಶಿವಮೊಗ್ಗ ಲಯನ್ಸ್ ತಂಡವನ್ನು ಅನಾಯಾಸವಾಗಿ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ. ಪ್ರಸಕ್ತ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಹುಬ್ಬಳ್ಳಿ ಟೈಗರ್ಸ್ ಸೆಮಿಫೈನಲ್‌ನಲ್ಲಿ ಶಿವಮೊಗ್ಗ ಲಯನ್ಸ್​ ವಿರುದ್ಧ ಮುಗ್ಗರಿಸಿತು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ತಾಹಾ (69) ಮತ್ತು ಕೆ.ಎಲ್.ಶ್ರೀಜಿತ್ (61*) ಜೊತೆಯಾಟದ ಬಲದಿಂದ ಶಿವಮೊಗ್ಗವನ್ನು ಆರು ಓವರ್‌ಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಮಣಿಸಿತು.ಟಾಸ್ ಸೋತು ಶಿವಮೊಗ್ಗ […]

ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ಚಿನ್ನ ಪದಕ ಗೆದ್ದ ಹಿನ್ನೆಲೆ: ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ : ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಒಕ್ಕೂಟದ ವರ್ಲ್ಡ್ ಗೇಮ್ಸ್ 2023 ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಮಣಿಸಿದ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ನಿನ್ನೆ (ಶನಿವಾರ) ಹೊಸ ಇತಿಹಾಸ ನಿರ್ಮಿಸಿದೆ.ಐತಿಹಾಸಿಕ ಪದಕ ವಿಜೇತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, “ನಿಮ್ಮ ಯಶಸ್ಸಿನಿಂದ ಇಡೀ ದೇಶವೇ ಹೆಮ್ಮೆಯಿಂದ ಬೀಗುತ್ತಿದೆ” ಎಂದು ಹೇಳಿದ್ದಾರೆ. ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಮಹಿಳಾ ಅಂಧರ ಕ್ರಿಕೆಟ್ ತಂಡವು ಚಿನ್ನದ […]