ಟಾಸ್ : ನೆದರ್ಲ್ಯಾಂಡ್ಸ್ ಪಾಕ್​ ವಿರುದ್ಧ ಗೆದ್ದ ಬೌಲಿಂಗ್ ಆಯ್ಕೆ ​

ಹೈದರಾಬಾದ್: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ.ಐಸಿಸಿ ಪುರುಷರ ವಿಶ್ವಕಪ್ 2023ರ ಎರಡನೇ ಪಂದ್ಯ ಇದಾಗಿದ್ದು ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್, ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕ ಬಾಬರ್ ಅಜಮ್​​ ನೇತೃತ್ವದ ಪಾಕಿಸ್ತಾನ ತಂಡ ಬ್ಯಾಟಿಂಗ್​ ಮಾಡುತ್ತಿದೆ . ಇಂದು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಸೆಣಸಾಟ ನಡೆಸುತ್ತಿದ್ದು, ಟಾಸ್ ಗೆದ್ದ ನೆದರ್ಲೆಂಡ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡಗಳು: ಉಭಯ […]

ಬಿಲ್ಲು ಸ್ಪರ್ಧೆಯಲ್ಲಿ ಬೆಳ್ಳಿ; ಬ್ಯಾಡ್ಮಿಂಟನ್​, ಕುಸ್ತಿ, ಕಿಕ್​ ವಾಲಿಬಾಲ್​ನಲ್ಲಿ ಕಂಚು: ಏಷ್ಯನ್​ ಗೇಮ್ಸ್

ಹ್ಯಾಂಗ್​ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನ 13ನೇ ದಿನವಾದ ಶುಕ್ರವಾರ  ಭಾರತದ ಪದಕ ಬೇಟೆ ಮುಂದುವರೆದಿದೆ. 19ನೇ ಏಷ್ಯಾಡ್​ನಲ್ಲಿ ಭಾರತ ಪ್ರಸ್ತುತ 21 ಚಿನ್ನ, 33 ಬೆಳ್ಳಿ ಮತ್ತು 37 ಕಂಚಿನಿಂದ 91 ಪದಕಗಳನ್ನು ಗೆದ್ದುಕೊಂಡಿದೆ. 2018ರಲ್ಲಿ 70 ಪದಕ ಗೆದ್ದಿರುವುದು ದಾಖಲೆಯಾಗಿತ್ತು. ಪ್ರಸ್ತುತ ಕೂಟದ ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದರೆ, ಚೀನಾ, ಜಪಾನ್​, ದಕ್ಷಿಣ ಕೊರಿಯಾ ಕ್ರಮವಾಗಿ 1,2,3 ನೇ ಸ್ಥಾನ ಅಲಂಕರಿಸಿವೆ.ಬಾಂಗ್ಲಾದೇಶವನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದ ಭಾರತದ ಪುರುಷರ ರಿಕರ್ವ್ ತಂಡ […]

ಫೈನಲ್ ಲಗ್ಗೆಯಿಟ್ಟ ಭಾರತ ಮಹಿಳಾ ಸಂಯುಕ್ತ ಆರ್ಚರಿ ತಂಡ : ಏಷ್ಯನ್ ಗೇಮ್ಸ್ 2023

ಹ್ಯಾಂಗ್‌ಝೌ (ಚೀನಾ): ವಿಶ್ವ ಚಾಂಪಿಯನ್ ಆಗಿರುವ ಭಾರತದ ಮಹಿಳಾ ಸಂಯುಕ್ತ ಆರ್ಚರಿ ತಂಡವು ಗುರುವಾರ ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಹ್ಯಾಂಗ್‌ಝೌ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಬಿಲ್ಲುಗಾರಿಕೆಯಲ್ಲಿ ಭಾರತದ ಮಹಿಳಾ ಸಂಯುಕ್ತ ತಂಡ ಫೈನಲ್​ ಪ್ರವೇಶಿಸಿದೆ. ಇದಕ್ಕೂ ಮುನ್ನ ಕೆಳ ಶ್ರೇಯಾಂಕದ ಹಾಂಕಾಂಗ್‌ಗೆ 231-220 ಅಂಕಗಳ ಗುರಿಯನ್ನು ನೀಡಿ ಸೆಮಿಫೈನಲ್‌ನಲ್ಲಿ ಬೆವರು ಹರಿಸಿತು.ಜ್ಯೋತಿ, ಅದಿತಿ ಮತ್ತು ಪರಿಣಿತಿ ಬಿಲ್ಲುಗಾರಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ […]

ಜೈಸ್ವಾಲ್ ಶತಕ, ಬಿಷ್ಣೋಯ್, ಅವೇಶ್​ ಮಿಂಚು.. ನೇಪಾಳ ವಿರುದ್ಧ ಗೆದ್ದ ಟೀಂ ಇಂಡಿಯಾ : ಏಷ್ಯನ್ ಗೇಮ್ಸ್‌ ಕ್ರಿಕೆಟ್‌

ವನಿತೆಯರ ತಂಡ ಇತ್ತೀಚೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ಇಂದು ರುತುರಾಜ್ ಗಾಯಕ್ವಾಡ್​ ನಾಯಕತ್ವದ ಭಾರತ ತಂಡ ಏಷ್ಯಾಡ್​ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನೇಪಾಳ ವಿರುದ್ಧ 23 ರನ್​ಗಳ ಗೆಲುವು ಸಾಧಿಸಿದೆ.ಹ್ಯಾಂಗ್​ಝೌ, ಚೀನಾ: ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಿಸಿಸಿಐ ವನಿತೆಯರ ಮತ್ತು ಪುರುಷರ ತಂಡವನ್ನು ಚೀನಾದ ಹ್ಯಾಂಗ್‌ಝೌಗೆ ಕಳುಹಿಸಿದೆ.ಏಷ್ಯನ್​ ಗೇಮ್ಸ್​ ಕ್ರಿಕೆಟ್​ನ ಮೊದಲ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದೆ. ವರ್ಮಾ ಔಟಾದ ಬೆನ್ನೆಲ್ಲೇ ಬಂದ […]

ಬ್ಯಾಡ್ಮಿಂಟನ್​ನಲ್ಲಿ ಶುಭಾರಂಭ: ಏಷ್ಯನ್​ ಗೇಮ್ಸ್: ಟೇಬಲ್​ ಟೆನಿಸ್​ನಲ್ಲಿ ಭಾರತಕ್ಕೆ ಚೊಚ್ಚಲ ಪದಕ

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯಾಡ್​ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪದಕ ಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. 13 ಚಿನ್ನ, 21 ಬೆಳ್ಳಿ ಮತ್ತು 22 ಕಂಚಿನ ಪದಕ ಸೇರಿದಂತೆ 56 ಪದಕಗಳನ್ನು ಭಾರತೀಯ ಸ್ಪರ್ಧಿಗಳು ಗೆದ್ದಿದ್ದು, ಪದಕಗಳ ಶತಕ ಬಾರಿಸುವ ಉತ್ಸಾಹದಲ್ಲಿದ್ದಾರೆ. ಏಷ್ಯನ್​ ಗೇಮ್ಸ್​ನಲ್ಲಿ ಟೇಬಲ್​​ ಟೆನಿಸ್​ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಉತ್ತರ ಕೊರಿಯಾದ ಸುಯೋಂಗ್ ಚಾ ಮತ್ತು ಸುಗ್ಯಾಂಗ್ ಪಾಕ್ ವಿರುದ್ಧ 4-3 ಅಂತರದಲ್ಲಿ ಸೋಲನುಭವಿಸಿ […]