ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ; ದೇಶಾದ್ಯಂತ ಸಂಭ್ರಮಾಚರಣೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿದ ಭಾರತ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಪ್ರಬಲ ಆಸ್ಟ್ರೇಲಿಯಾದ ದಾಖಲೆ ಮುರಿದಿದೆ. ಮಾ.9 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 252 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಭಾರತ ತಂಡ 49 ಓವರ್ ನಲ್ಲೇ 6 ವಿಕೆಟ್ ಕಳೆದುಕೊಂಡು 254 ರನ್ […]

ಸಂಕಷ್ಟದಲ್ಲಿ ಭಾರತದ ಈ ಕ್ರಿಕೆಟ್ ಆಟಗಾರರು! ಕೋಟಿ ಹಗರಣದ ಆರೋಪ

ಭಾರತ ತಂಡದ ಖ್ಯಾತ ಆಟಗಾರ ಸದ್ಯ  ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶುಭ್​ಮನ್​ ಗಿಲ್​ಗೆ ಭಾರತದಲ್ಲಿ  ಸಂಕಷ್ಟ ಎದುರಾಗಿದ್ದು  450 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಭಾರತ ತಂಡದ ಸ್ಟಾರ್ ಆಟಗಾರರಾದ   ಗುಜರಾತ್ ಟೈಟಾನ್ಸ್ ತಂಡದ ಆಟಗಾರರಾದ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಅವರಿಗೂ ಗುಜರಾತ್ ಅಪರಾಧ ತನಿಖಾ  ಇದೇ ಆರೋಪದ ಮೇಲೆ ಸಮನ್ಸ್ ಕಳುಹಿಸಿದೆ. ಭೂಪೇಂದ್ರಸಿನ್ಹ್ ಝಾಲಾ ನೇತೃತ್ವದ BZ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನ ಕಂಪೆನಿ ಬ್ಯಾಂಕುಗಳಿಗಿಂತ ಜಾಸ್ತಿ […]

ಕಣ್ಣೀರಿಟ್ಟ ವಿನೇಶ್‌ ಫೋಗಟ್‌ : ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ ಎಂದು ಹೇಳಿಕೆ

ಹೊಸದಿಲ್ಲಿ: “ಫೆಡರೇಷನ್‌ ಅಧ್ಯಕ್ಷರಾಗಿ ಸಂಜಯ ಸಿಂಗ್‌ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ,” ಎಂದು ವಿನೇಶ್‌ ಫೋಗಟ್‌ ಹೇಳಿದರು. “ದೇಶದಲ್ಲಿ ನ್ಯಾಯ ಹೇಗೆ ಪಡೆದುಕೊಳ್ಳುವುದು ಎಂದು ತಿಳಿದಿಲ್ಲ,” ಎಂದು ಕಾಮನ್ವೆಲ್ತ್ ಮತ್ತು ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆಯಾಗಿರುವ ಫೋಗಟ್‌ ಹೇಳಿದರು. ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ ಕುಸ್ತಿಪಟು ವಿನೇಶ್‌ ಫೋಗಟ್‌, ಗುರುವಾರ ಫೆಡರೇಷನ್‌ಗೆ ನಡೆದ ಚುನಾವಣೆಯಲ್ಲಿ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಗೆಲುವು […]

ತೈಲ ಬೆಲೆ ಹೆಚ್ಚಳ ಸಾಧ್ಯತೆ : ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ

ಲಂಡನ್(ಬ್ರಿಟನ್​) : ಯೆಮೆನ್ ನ ಹೌತಿ ಬಂಡುಕೋರರು ಹಡಗುಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿರುವುದರಿಂದ ಹಲವಾರು ಶಿಪ್ಪಿಂಗ್ ಕಂಪನಿಗಳು ಈ ಮಾರ್ಗದ ಮೂಲಕ ಸಾಗಣೆಯನ್ನು ಸ್ಥಗಿತಗೊಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದಾಗಿ ತೈಲ ಮತ್ತು ಇತರ ಸರಕುಗಳ ಬೆಲೆಗಳು ಹೆಚ್ಚಾಗುವ ಅಪಾಯವಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ ವಿಶ್ವದ ಎರಡನೇ ಅತಿದೊಡ್ಡ ಹಡಗು ಸಾರಿಗೆ ಕಂಪನಿ ಮೆರ್ಸ್ಕ್ ಮಂಗಳವಾರ ತನ್ನ ಕೆಲವು ಹಡಗುಗಳನ್ನು […]

ಯು ಮುಂಬಾ ಪಲ್ಟಿ ಹೊಡಿಸಿದ ಪುಣೇರಿ ಪಲ್ಟನ್​ಗೆ ಎರಡನೇ ಗೆಲುವು : ಪ್ರೊ ಕಬಡ್ಡಿ 10ನೇ ಆವೃತ್ತಿ

ಬೆಂಗಳೂರು: ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 17 ರೈಡಿಂಗ್‌ಗಳಲ್ಲಿ 12 ಅಂಕಗಳನ್ನು ಗಳಿಸಿದ ಮೋಹಿತ್‌ ಗೋಯತ್ ಅವರು, ಪಲ್ಟನ್‌ ತಂಡದ ಅದ್ಭುತ ಜಯಕ್ಕೆ ಕಾರಣರಾದರು. ಯು ಮುಂಬಾ ತಂಡವನ್ನು 43- 32 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ತಂಡ ತನ್ನ ಎರಡನೇ ಗೆಲುವು ದಾಖಲಿಸಿದೆ.ಪ್ರೊ ಕಬಡ್ಡಿ 10ನೇ ಆವೃತ್ತಿಯ ನಿನ್ನೆ (ಶುಕ್ರವಾರ) ನಡೆದ ಪಂದ್ಯದಲ್ಲಿ ಯು ಮುಂಬಾ ಮಣಿಸಿ ಪುಣೇರಿ ಪಲ್ಟನ್ ತಂಡವು […]