ಏಷ್ಯಾಕಪ್ ಟಿ20: ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಭಾರತ

ನಿನ್ನೆ ರಾತ್ರಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಟ್ವೆಂಟಿ-20 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ 19.5 ಓವರ್ ಗಳಲ್ಲಿ147 ರನ್‌ಗಳಿಗೆ ಆಲೌಟ್ ಆಯಿತು, ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರ 43 ರನ್‌ಗಳು ತಂಡದ ಗರಿಷ್ಠ ಸ್ಕೋರ್ ಆಗಿದ್ದವು. ಭಾರತದ ಪರ ಭುವನೇಶ್ವರ್ ಕುಮಾರ್ ನಾಲ್ಕು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮೂರು ಮತ್ತು ಅರ್ಷದೀಪ್ ಸಿಂಗ್ […]

ವಿಶ್ವ ಕೆಡೆಟ್ ಜೂಡೋ ಚಾಂಪಿಯನ್‌ಶಿಪ್‌: ಭಾರತದ 15 ವರ್ಷದ ಲಿಂಥೋಯ್ ಚನಂಬಮ್ ಐತಿಹಾಸಿಕ ಗೆಲುವು

ಸರಜೆವೊದಲ್ಲಿ ನಡೆದ ವಿಶ್ವ ಕೆಡೆಟ್ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 15 ರ ಹರೆಯದ ಲಿಂಥೋಯ್ ಚನಂಬಮ್ ಚಿನ್ನ ಗೆದ್ದು ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಜೂಡೋ ಪಂದ್ಯಾವಳಿಯಲ್ಲಿ ಯಾವುದೇ ವಯಸ್ಸಿನ ಗುಂಪಿನಲ್ಲಿ ಪದಕ ಗೆದ್ದ ಮೊದಲ ಭಾರತೀಯರಾಗಿ ಲಿಂಥೋಯ್ ಹೊರಹೊಮ್ಮಿದ್ದಾರೆ. ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ನಡೆದ ಮಹಿಳೆಯರ 57 ಕೆಜಿ ಸ್ಪರ್ಧೆಯಲ್ಲಿ ಬ್ರೆಜಿಲ್‌ನ ಬಿಯಾಂಕಾ ರೀಸ್ ಅವರನ್ನು ಸೋಲಿಸಿದ ಮಣಿಪುರದ ಬಾಲಕಿ ಚಿನ್ನ ಗೆದ್ದು ಬೀಗಿದ್ದಾರೆ.  

ಚಿನ್ನದ ಹುಡುಗನಿಂದ ಇತಿಹಾಸ ಸೃಷ್ಟಿ: ಲೌಸಾನೆ ಡೈಮಂಡ್ ಲೀಗ್ ಮೀಟ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ನೀರಜ್ ಚೋಪ್ರಾ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 89.08 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಪ್ರಶಸ್ತಿ ಗೆದ್ದಿದ್ದಾರೆ. ಈವೆಂಟ್‌ನಲ್ಲಿ ಅವರ ಅತ್ಯುತ್ತಮ ಎಸೆತದೊಂದಿಗೆ, ನೀರಜ್ ಪ್ರತಿಷ್ಠಿತ ಡೈಮಂಡ್ ಲೀಗ್ ಮೀಟ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರೆನ್ನುವ ಇತಿಹಾಸ ಸೃಷ್ಟಿಸಿದ್ದಾರೆ. ನೀರಜ್ ಅವರು ಸೆಪ್ಟೆಂಬರ್ 7 ಮತ್ತು 8 ರಿಂದ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ಈಗ 2023 ರ ವಿಶ್ವ […]

ಏಷ್ಯಾ ಕಪ್ 2022: ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ

ನವದೆಹಲಿ: 2022ರ ಏಷ್ಯಾಕಪ್‌ಗೆ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಲಕ್ಷ್ಮಣ್ 2022 ರ ಏಷ್ಯಾ ಕಪ್‌ಗಾಗಿ ದುಬೈನಲ್ಲಿ ಟೀಮ್ ಇಂಡಿಯಾದ ಹಂಗಾಮಿ ಮುಖ್ಯ ಕೋಚ್ ಆಗಿ ಸೇರಿಕೊಂಡಿದ್ದಾರೆ. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೋವಿಡ್-19 ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ತಂಡದೊಂದಿಗೆ ಪ್ರಯಾಣಿಸಿಲ್ಲ ಎಂದು ಬಿಸಿಸಿಐ ದೃಢೀಕರಣದ ಒಂದು ದಿನದ ಬಳಿಕ ವಿವಿಎಸ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ […]

ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಗೆ ಕೋವಿಡ್ : ಏಷ್ಯಾ ಕಪ್ 2022 ಗೂ ಮುನ್ನ ಭಾರತಕ್ಕೆ ಆಘಾತ

ನವದೆಹಲಿ: ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಭಾರತದ ಬಹುನಿರೀಕ್ಷಿತ ಆರಂಭಿಕ ಪಂದ್ಯಕ್ಕೂ ಕೆಲವು ದಿನಗಳ ಮೊದಲೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಕೋವಿಡ್ -19 ದೃಢಪಟ್ಟಿದೆ. ಕೋಚ್ ರಾಹುಲ್ ದ್ರಾವಿಡ್ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರಿಂದ ಅವರು ತಂಡದ ಜೊತೆ ದುಬೈಗೆ ತೆರಳುವುದು ಸಾಧ್ಯವಿಲ್ಲ. ಇದರಿಂದ ಏಷ್ಯಾ ಕಪ್ 2022 ಗೂ ಮುನ್ನವೆ ಭಾರತವು ದೊಡ್ಡ ಆಘಾತವನ್ನು ಅನುಭವಿಸಿದೆ. ಟಿ20 ವಿಶ್ವಕಪ್‌ಗೆ ಮುನ್ನ ಯುಎಇಗೆ ತೆರಳಿ ಕಾಂಟಿನೆಂಟಲ್ ಪಂದ್ಯಾವಳಿಯನ್ನು ಆಡಲಿರುವ ಭಾರತ […]