ಕೊನೆಯ ಹೆಣ್ಣುಮಗುವಾಗಿರಲೆಂದು ‘ಅಂತಿಮ್’ ಎಂದು ಹೆಸರಿಟ್ಟರೆ ಕುಸ್ತಿಯಲ್ಲಿ ಚಿನ್ನ ಗೆದ್ದ ‘ಮೊದಲ’ ಭಾರತೀಯ ಮಹಿಳೆ ಎಂಬ ಸಾಧನೆ ಮೆರೆದ ಚಿನ್ನದ ಹುಡುಗಿ

ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದ ಹರಿಯಾಣದ ಕುಸ್ತಿಪಟು ಅಂತಿಮ್ ಪಂಗಲ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ. 53 ಕೆಜಿ ವಿಭಾಗದಲ್ಲಿ ಕಜಕಿಸ್ತಾನ್‌ನ ಅಟ್ಲಿನ್ ಶಗಾಯೆವಾ ವಿರುದ್ಧ 8-0 ಅಂತರದಲ್ಲಿ ಜಯ ಗಳಿಸಿ ಈ ಸಾಧನೆ ಮಾಡಿದರು. ಈ ಚಿನ್ನದ ಪದಕವು ತನ್ನದೇ ಆದ ರೀತಿಯಲ್ಲಿ ಐತಿಹಾಸಿಕವಾಗಿದೆ ಏಕೆಂದರೆ ಭಾರತವು ಯು20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿಯಲ್ಲಿ ಯಾವುದೇ ಚಿನ್ನದ ಪದಕವನ್ನು ಗೆದ್ದಿಲ್ಲ. ಹೆಣ್ಣು […]

ಕುಂದಾಪುರ ಗಾಂಧಿ ಮೈದಾನದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ- 2022

ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕ್ರಿಕೆಟ್ ಆಡುವವರಿಗಾಗಿ ಆಗಸ್ಟ್ 21 ರಂದು ಇಂಡಿಪೆಂಡೆನ್ಸ್ ಡೇ ಕಪ್- 2022 ಆಯೋಜಿಸಲಾಗಿದೆ. ಒಟ್ಟು 6 ತಂಡಗಳು ‌ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ವಿಶೇಷವಾಗಿ ತಂಡಗಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮ ಸ್ವಾತಂತ್ರ್ಯ ವೀರರ ಹೆಸರಿಡಲಾಗಿದೆ. ತಂಡಗಳ ವಿವರ: 1)ನೇತಾಜಿ ವಾರಿಯರ್ಸ್ 2)ಸುಖದೇವ್ ವಾರಿಯರ್ಸ್ 3)ಭೋಸ್ ಆರ್ಮಿ 4)ರಾಯಣ್ಣ ವಾರಿಯರ್ಸ್ 5)ರಾಣಿ ಚೆನ್ನಮ್ಮ ವಾರಿಯರ್ಸ್ 6)ಭಗತ್ ಸಿಂಗ್ ವಾರಿಯರ್ಸ್ ಪಂದ್ಯಾವಳಿಯ ವಿಜೇತ ತಂಡಗಳು […]

22ನೇ ಕಾಮನ್‌ವೆಲ್ತ್ ಗೇಮ್ಸ್‌ ಗೆ ವಿದಾಯ: 22 ಚಿನ್ನ ಸೇರಿದಂತೆ 61 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಭಾರತ

ಬರ್ಮಿಂಗ್‌ಹ್ಯಾಮ್‌: ಇಲ್ಲಿನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಸೋಮವಾರ ರಾತ್ರಿ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿತು. 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಂದ 5,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ ಹನ್ನೊಂದು ದಿನಗಳ ಕ್ರೀಡಾ ಚಟುವಟಿಕೆಗಳ ನಂತರ ಆಟಗಳು ಅಧಿಕೃತವಾಗಿ ಮುಕ್ತಾಯಗೊಂಡವು. ಸಮಾರೋಪ ಸಮಾರಂಭದಲ್ಲಿ ಬಾಕ್ಸರ್ ನಿಖತ್ ಝರೀನ್ ಮತ್ತು ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಅವರು ರಾಷ್ಟ್ರಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಿದರು. 2026 ರಲ್ಲಿ ಕ್ರೀಡಾಕೂಟದ ಮುಂದಿನ ಆವೃತ್ತಿಯನ್ನು ಆಯೋಜಿಸಲಿರುವ ಆಸ್ಟ್ರೇಲಿಯಾದ ವಿಕ್ಟೋರಿಯಾ […]

ಚಿನ್ನದ ಹುಡುಗಿ ಪಿ.ವಿ ಸಿಂಧು ಅವರಿಂದ ಅದ್ಭುತ ಪ್ರದರ್ಶನ: ಕಾಮನ್ ವೆಲ್ತ್ ಬ್ಯಾಂಡ್ಮಿಂಟನ್ ನಲ್ಲಿ ಸ್ವರ್ಣ ಪದಕ

ಬರ್ಮಿಂಗ್‌ಹ್ಯಾಮ್‌: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಭಾರತದ ಷಟ್ಲರ್ ಪಿವಿ ಸಿಂಧು ಅವರು ಫೈನಲ್‌ನಲ್ಲಿ ಮಿಚೆಲ್ ಲೀ ಅವರನ್ನು 21-15, 21-13 ಸೆಟ್ ಗಳಿಂದ ಸೋಲಿಸುವ ಮೂಲಕ ದೇಶವೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇದು ಆಕೆಯ ಚೊಚ್ಚಲ ಚಿನ್ನದ ಪದಕವಾಗಿದೆ. ಈ ಹಿಂದೆ 2014 ಗ್ಲಾಸ್ಗೋದಲ್ಲಿ ಕಂಚು ಮತ್ತು 2018 […]

ಕಾಮನ್ ವೆಲ್ತ್ ಗೇಮ್ಸ್: ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯ ತಂಡ; ಇದುವರೆಗೂ ಒಟ್ಟು 40 ಪದಕ ಗೆದ್ದ ಕ್ರೀಡಾಪಟುಗಳು

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವು ತನ್ನ ಸಾರ್ವಕಾಲಿಕ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿದ್ದು, ಆಗಸ್ಟ್ 5 ರವರೆಗೆ ಚಿನ್ನ, ಬೆಳ್ಳಿ ಮತ್ತು ಕಂಚು ಸೇರಿದಂತೆ ಒಟ್ಟು 40 ಪದಕಗಳನ್ನು ಗಳಿಸಿದೆ. ಮೊನ್ನೆವರೆಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕಗಳ ಸುರಿಮಳೆಗೈದ ಭಾರತೀಯ ಪಟುಗಳು, ಈಗ ಕುಸ್ತಿಯಲ್ಲಿಯೂ ಚಿನ್ನದ ಬೇಟೆಯನ್ನು ನಿರಂತರವಾಗಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ, ವಿನೇಶ್ ಫೋಗಟ್ ಮತ್ತು ನವೀನ್ ಆಯಾ ವಿಭಾಗಗಳಲ್ಲಿ ಹ್ಯಾಟ್ರಿಕ್ ಚಿನ್ನದ ಪದಕಗಳೊಂದಿಗೆ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. […]