ಕಾಡಾನೆ ದಾಳಿಗೆ ರೈತ ಬಲಿ, ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪರಿಶೀಲನೆ :ಮೈಸೂರು

ಮೈಸೂರು: ಜಿಲ್ಲೆಯಲ್ಲಿ ಮಾನವ-ಕಾಡುಪ್ರಾಣಿಗಳ ಸಂಘರ್ಷ ಮುಂದುವರೆದಿದೆ. ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಘಟನೆ ಗುರುವಾರ ಸರಗೂರು ತಾಲೂಕಿನ ನಡಹಾಡಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.ಕಾಡಾನೆ ದಾಳಿಗೆ ರೈತ ಸಾವಿಗೀಡಾಗಿರುವ ಘಟನೆ ಮೈಸೂರಿನ ಸರಗೂರು ತಾಲೂಕಿನ ನಡಹಾಡಿ ಗ್ರಾಮದಲ್ಲಿ ನಡೆದಿದೆ. ಪದೇ ಪದೇ ಕಾಡು ಪ್ರಾಣಿಗಳ ದಾಳಿಯಿಂದ ಗ್ರಾಮಸ್ಥರು ನಲುಗಿ ಹೋಗಿದ್ದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೇಗೌಡರ ಕುಟುಂಬಕ್ಕೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಡಿವೈಎಸ್ಪಿ ಗೋಪಾಲಕೃಷ್ಣ, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ಸ್ಥಳದಲ್ಲಿದ್ದರು.ರೈತ ಚಿಕ್ಕೇಗೌಡ ಮೃತಪಟ್ಟಿದ್ದಾರೆ. ಬೆಳಿಗ್ಗೆ ತಮ್ಮ ಜಮೀನಿನ […]

ಶಿವಣ್ಣನ ಹಾಡಿನ ಮೋಡಿಗೆ ಕುಣಿದು ಕುಪ್ಪಳಿಸಿದ ಯುವಕರು : ಮೈಸೂರು ಯುವ ದಸರಾ

ಮೈಸೂರು : ಝಗಮಗಿಸುವ ಬೆಳಕಿನ ನಡುವೆ ಡಾ. ಶಿವರಾಜ್ ಕುಮಾರ್ ಅವರ ಓಂ ಚಿತ್ರದ ಮಾಸ್ ಡೈಲಾಗ್, ಮನಮೋಹಕ ನೃತ್ಯ, ಶರಣ್ ಅವರ ಗಾಯನ, ಚಿತ್ರ ನಟ ಸಾಧು ಕೋಕಿಲ ಹಾಸ್ಯಕ್ಕೆ ಯುವ ಸಮೂಹ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಶರಣ್, ದಿವ್ಯ ರಾಮಚಂದ್ರ, ಬಿಗ್​ಬಾಸ್ ಖ್ಯಾತಿಯ ಕಿಶನ್, ಹಾಸ್ಯ ನಟ ಸಾಧುಕೋಕಿಲ ಯುವ ಸಮೂಹಕ್ಕೆ ಮನರಂಜನೆ ನೀಡಿದರು. ನಟ ಶಿವರಾಜ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಯುವ ದಸರಾವನ್ನು […]

ಸೋಮನಾಥ ದೇವಾಲಯದಲ್ಲಿ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಪತ್ತೆ ; ಮಂಗಳೂರು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೋಮೇಶ್ವರದ ಸೋಮೇಶ್ವರ ದೇವಾಲಯದಲ್ಲಿ ಆಳುಪ ಚಕ್ರವರ್ತಿ ಮೊದಲನೇ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಕಂಡು ಬಂದಿದೆ ಎಂದು ಕರಾವಳಿಯ ಪುರಾತತ್ವ ವಿದ್ವಾಂಸ ಪ್ರೊ.ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಮಂಗಳೂರಿನ ಸೋಮೇಶ್ವರ ದೇವಾಲಯದಲ್ಲಿ ಆಳುಪ ಚಕ್ರವರ್ತಿ ಮೊದಲ ಕುಲಶೇಖರ ಆಳುಪೇಂದ್ರನ ಮರಣ ಶಾಸನ ಪತ್ತೆಯಾಗಿದೆ ಶಾಸನದ ಚಿತ್ರಿತ ಪಟ್ಟಿಕೆಗಳು : ಶಾಸನದ ಮೇಲ್ಭಾಗದಲ್ಲಿ ಆಕರ್ಷಕವಾದ ಎರಡು ಚಿತ್ರಪಟ್ಟಿಕೆಗಳಿದ್ದು ಕೆಳಗಿನ ಪಟ್ಟಿಕೆಯಲ್ಲಿ ಕುಲಶೇಖರ ಆಳುಪೇಂದ್ರನನ್ನು ಬಲಗೈಯಲ್ಲಿ ಖಡ್ಗವನ್ನು […]

ವಿಜ್ಞಾನಿಗಳ ಪಟ್ಟಿಯಲ್ಲಿ ವಿಶ್ವದ ಉತ್ತಮ ಪ್ರಾಧ್ಯಾಪಕರಿಗೆ ಜಾರ್ಖಂಡ್​ನ​ 47 ಸ್ಥಾನ

ರಾಂಚಿ (ಜಾರ್ಖಂಡ್‌): ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರು ಹೆಸರು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ 47 ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. ರಾಜ್ಯದ ವಿವಿಧ ಸಂಸ್ಥೆಗಳ 47 ಪ್ರಾಧ್ಯಾಪಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಒಟ್ಟಾರೆ ಈ ಪಟ್ಟಿಯಲ್ಲಿರುವ ವಿಜ್ಞಾನಿಗಳಲ್ಲಿ ಶೇ.2ರಷ್ಟು ಜಾರ್ಖಂಡ್​ನಿಂದಲೇ ಪ್ರತಿನಿಧಿಸುತ್ತಿದ್ದಾರೆ ಎಂಬುವುದೇ ಗಮನಾರ್ಹವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಪಟ್ಟಿಯಲ್ಲಿ ಜಾರ್ಖಂಡ್‌ನಿಂದ 47 ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. […]

ದಸರಾ : ಆಹಾರ ದಸರಾದಲ್ಲಿ ಬುಡಕಟ್ಟು ಜನಾಂಗದ ‘ಬಂಬೂ ಬಿರಿಯಾನಿ’ ಘಮ

ಮೈಸೂರು: ದಸರಾ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದ ಬಂಬೂ ಬಿರಿಯಾನಿ ಜನರ ಗಮನ ಸೆಳೆಯುತ್ತಿದೆ. ಇದು ಆರೋಗ್ಯಕ್ಕೆ ಹೇಗೆ ಉಪಕಾರಿ ಎಂಬ ಬಗ್ಗೆ ಬುಡಕಟ್ಟು ಜನಾಂಗದ ಕೃಷ್ಣಯ್ಯ ಬುಡಕಟ್ಟು ಜನಾಂಗದ ಮೂಲ ಆಹಾರ ಬಂಬೂ ಬಿರಿಯಾನಿ. ಹೇಗೆ ತಯಾರು ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ. ಬಂಬೂ ಬಿರಿಯಾನಿ ತಯಾರಿಕೆ: ರೆಡಿ ಮಾಡಿಕೊಂಡ ಬಿದಿರಿನ ಬಂಬನ್ನು ಸ್ವಚ್ಛವಾಗಿ ತೊಳೆದಕೊಳ್ಳಬೇಕು. ಅಕ್ಕಿ, ಚಿಕನ್, ಮಾಸಾಲೆ, ಕಾಡು ಅರಿಶಿಣ, ಕಾಡು ಶುಂಠಿ, ಕಾಡು ಕೊತ್ತಂಬರಿ, ಕಾಡು ಕರಿಬೇವಿನಸೊಪ್ಪು ಮಿಶ್ರಣ ಮಾಡಬೇಕು. ನಂತರ […]