ಭಾರತದ ಜಾಹಿರಾತು ಲೋಕದ ದಿಗ್ಗಜ ‘ಪದ್ಮಶ್ರೀ ಪಿಯೂಷ್ ಪಾಂಡೆ’ ನಿಧನ

ಬೆಂಗಳೂರು: 1980ರ ದಶಕದಿಂದ ಭಾರತದ ಜಾಹೀರಾತು ಲೋಕಕ್ಕೆ ವಿಶೇಷ ಮೆರಗು ತುಂಬಿದ್ದ ಪದ್ಮಶ್ರೀ ಪಿಯೂಷ್ ಪಾಂಡೆ ಅವರು ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಂಡೆ ಅವರು ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ರಾಜಸ್ಥಾನದ ಜೈಪುರ ಮೂಲದವರಾಗಿದ್ದ ಪಾಂಡೆ ಅವರು, ಫೇವಿಕೊಲ್, ಡೈರಿ ಮಿಲ್ಕ್, ಕ್ಯಾಡ್‌ಬರಿ, ಏಷಿಯನ್ ಪೇಂಟ್ಸ್, ವೋಡಾಪೋನ್ ZooZoos ಸೇರಿದಂತೆ ಮುಂತಾದ ಜನಪ್ರಿಯ ಟಿವಿ ಜಾಹೀರಾತುಗಳ ಹಿಂದಿನ ರೂವಾರಿಯಾಗಿದ್ದರು. […]

ಆಸ್ತಿ ಮಾರಾಟ: ಪ್ರಾಪ್ತ ವಯಸ್ಸಿನಲ್ಲಿ ಮಕ್ಕಳು ನಿರಾಕರಿಸಬಹುದು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಅಪ್ರಾಪ್ತರಾಗಿದ್ದಾಗ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಪೋಷಕರು ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮಾರಿದ್ದರೆ, ಅಂತಹ ಆಸ್ತಿ ವರ್ಗಾವಣೆಯನ್ನು ಆ ಮಕ್ಕಳು ವಯಸ್ಕರಾದ ಬಳಿಕ ನಿರಾಕರಿಸಲು ಮೊಕದ್ದಮೆ ಹೂಡಬೇಕಾದ ಅಗತ್ಯವೇನಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು, ಪ್ರಾಪ್ತ ವಯಸ್ಕರಾದ ಬಳಿಕ ಸ್ವತಂತ್ರವಾಗಿ ಆ ಆಸ್ತಿಯನ್ನು ಮಾರಾಟ ಮಾಡುವ ಅಥವಾ ವರ್ಗಾಯಿಸುವ ಮೂಲಕ ಹಿಂದಿನ ಆಸ್ತಿ ವರ್ಗಾವಣೆಯನ್ನು ಧಿಕ್ಕರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 7ರ ತೀರ್ಪಿನಲ್ಲಿ ಹೇಳಿದೆ. ಆಸ್ತಿ ಮಾರಾಟ […]

ರಾಜಸ್ಥಾನ: ತಂದೆ ಅಂತ್ಯ ಸಂಸ್ಕಾರದ ವೇಳೆ ಅಣ್ಣನನ್ನೇ ಕೊಚ್ಚಿ ಕೊಂದನು!

ಜೈಪುರ, ರಾಜಸ್ಥಾನ: ತಂದೆಯ ಅಂತ್ಯಸಂಸ್ಕಾರ ಖರ್ಚಿನ ವಿಚಾರಕ್ಕೆ ನಡೆದ ಜಗಳದಲ್ಲಿ ಹಿರಿಯಣ್ಣನನ್ನು ಸಹೋದರನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ರಾಜಸ್ಥಾನದ ಬರ್ಮೇರ್‌ನಲ್ಲಿ ನಡೆದಿದೆ.ಇಲ್ಲಿನ ಬೀಜರಾದ್‌ ‍ಪೊಲೀಸ್‌ ಠಾಣಾ ವ್ಯಾಪ್ತಿಯ ನವತ್ಲಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ‘ಅಂತ್ಯಕ್ರಿಯೆ ಖರ್ಚಿನ ವಿಚಾರವಾಗಿ ಗಣೇಶ್‌ರಾಮ್‌ (35) ಹಾಗೂ ಅವರ ಕಿರಿಯ ಸಹೋದರ ಕಿಶನ್‌ ರಾಮ್‌ (30) ನಡುವೆ ಮಾತಿನ ಚಕಮಕಿ ನಡೆಯಿತು. ಮಾತು ವಿಕೋಪಕ್ಕೆ ತಿರುಗಿದ ಪರಿಣಾಮ, ಕಿಶನ್‌ರಾಮ್‌ ತನ್ನ ಸಹೋದರ ಮೇಲೆ ಕೊಡಲಿಯಿಂದ ಹಿಂದಿನಿಂದ […]

ದೀಪಾವಳಿ ಸಂಭ್ರಮಿಸಿ ಮನೆಗೆ ತೆರಳುತ್ತಿದ್ದಾಗ ರೈಲು ಡಿಕ್ಕಿ; ತಾಯಿ, ಮಗಳು ಸೇರಿ ನಾಲ್ವರು ಮೃತ್ಯು.

ಬೇಗುಸರಾಯ್, (ಬಿಹಾರ): ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿಯಾಗಿ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎಂದು ಸಾಹೇಬ್‌ಪುರ ಕಮಲ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು ರಾಹುವಾ ಎಂಬ ಹಳ್ಳಿಯ ರೀಟಾ ದೇವಿ (40) ಮತ್ತು ಅವರ ಮಗಳು ರೋಶನಿ ಕುಮಾರಿ (14) ಹಾಗೂ ಅದೇ ಊರಿನವರಾದ ಆರೋಹಿ (7) ಹಾಗೂ ಧರ್ಮದೇವ್ ಮೆಹತೋ (36) […]

ಬಾಲಿವುಡ್‌ ಹಿರಿಯ ನಟ ಗೋವರ್ಧನ ಅಸ್ರಾನಿ ನಿಧನ.

ಮುಂಬೈ: ಖ್ಯಾತ ಹಿಂದಿ ಸಿನಿಮಾ ಹಾಸ್ಯನಟ ಮತ್ತು ನಟ ಗೋವರ್ಧನ್ ಅಸ್ರಾನಿ 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಐದು ದಿನಗಳಿಂದ ಅವರನ್ನು ಮುಂಬೈನ ಜುಹುವಿನಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಸ್ರಾನಿ ಅವರ ವ್ಯವಸ್ಥಾಪಕ ಬಾಬುಭಾಯಿ ತಿಬಾ ಅವರ ನಿಧನವನ್ನು ದೃಢಪಡಿಸಿದ್ದು ಅವರ ಅಂತ್ಯಕ್ರಿಯೆಯನ್ನು ಅ.20 ರಂದು ಸಂಜೆ ಸಾಂತಾಕ್ರೂಜ್ ಪಶ್ಚಿಮದಲ್ಲಿರುವ ಶಾಸ್ತ್ರಿನಗರ ಸ್ಮಶಾನದಲ್ಲಿ ನಡೆಸಲಾಯಿತು ಎಂದು ಹೇಳಿದರು. 1941 ಜನವರಿ 1ರಂದು ಜೈಪುರದಲ್ಲಿ ಜನಿಸಿದ ಗೋವರ್ಧನ್ ಅಸ್ರಾನಿ ಕಳೆದ ಆರು ದಶಕಗಳಿಂದ ಬಾಲಿವುಡ್‌ನ ಮುಖವಾಗಿದ್ದರು. 1960ರ […]