ಜ.02 ರಿಂದ 3 ನೇ ಸುತ್ತಿನ ಕೋವಿಡ್ ಲಸಿಕಾ ಅಭಿಯಾನ ಆರಂಭ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನ JN.1 ರೂಪಾಂತರಿ ಸೋಂಕು ಹೆಚ್ಚಳವಾಗುತ್ತಿದ್ದು, ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಜ.02 ರಿಂದ ರಾಜ್ಯದಲ್ಲಿ ಕೋರ್ಬಿವ್ಯಾಕ್ಸ್ ಲಸಿಕೆಯನ್ನು ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಮುನ್ನೆಚ್ಚರಿಕಾ ಲಸಿಕೆ(ಬೂಸ್ಟರ್ ಡೋಸ್) ಯನ್ನು ಶೇ. 27% ಜನರು ಮಾತ್ರ ಪಡೆದಿದ್ದಾರೆ. ರಾಜ್ಯದಲ್ಲಿ 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅಹರ್ತೆ ಹೊಂದಿದ್ದಾರೆ. ಇವರ್ಯಾರೂ […]
ಹೊಸ ವರ್ಷದ ಸಂಭ್ರಮ : ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ

ಬೆಂಗಳೂರು ಹೊಸ ವರುಷದ ಆಚರಣೆ ಹಾಗೂ 25ನೇ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ತನ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಹಿಸುದ್ದಿ ನೀಡಿದೆ. ಹೌದು, ಬೆಂಗಳೂರು ಮಹಾನಗರ ಸಾರಿಗೆ ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್ಗಳು ಖುಲಾಸೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ […]
ಬೆಂಗಳೂರಲ್ಲಿ ಹುಚ್ಚುನಾಯಿ ಹಾವಳಿಗೆ ಬಾಲಕರು ಸೇರಿ 7 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಬೆಂಗಳೂರಿನ ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದ್ದು, ಜನರನ್ನು ಭಯಗೊಳಿಸಿದೆ. ಹುಚ್ಚುನಾಯಿಗಳ ಹಾವಳಿ ಜನರ ನಿದ್ದೆಗೆಡಿಸಿದೆ. ಹುಚ್ಚುನಾಯಿಗಳ ದಾಳಿಗೆ ಬಾಲಕರು ಸೇರಿ 7 ಮಂದಿ ಗಾಯಗೊಂಡಿದ್ದಾರೆ. ಸಂಜೆ ವಾಕಿಂಗ್ ಹೋಗುವವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಸಿಕ್ಕ ಸಿಕ್ಕ ಕಡೆ ದಾಳಿ ನಡೆಸುತ್ತಿರುವ ಹುಚ್ಚು ನಾಯಿಯನ್ನು ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ. ಹುಚ್ಚು ನಾಯಿಗಳು ಹೆಚ್ಚಾಗಿ ಮಕ್ಕಳನ್ನೇ ಕಚ್ಚುತ್ತಿದ್ದು, ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಹುಚ್ಚುನಾಯಿ ಕಚ್ಚಿ […]
ತೆಲುಗು ಪ್ರಕಾಶನಕ್ಕೆ ದಂಡ : ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೃತಿ ಅನಧಿಕೃತ ಅನುವಾದ

ಮೈಸೂರು: ಡಾ.ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕೃತಿಯನ್ನು ಅವರ ಅನುಮತಿಯಿಲ್ಲದೆ ಅನಧಿಕೃತವಾಗಿ ತೆಲುಗು ಭಾಷೆಗೆ ಅನುವಾದ ಮಾಡಿ ಪ್ರಕಟಿಸಿ ಕಾಪಿ ರೈಟ್ ಉಲ್ಲಂಘಿಸಿದ್ದ ಹೈದರಾಬಾದಿನ ಪ್ರಿಯದರ್ಶಿನಿ ಪ್ರಚುರಣಾಲು ಪ್ರಕಾಶನದ ವತ್ಸಲಾ ಅವರು ರೂ.5,05,000 ನಷ್ಟ ಪರಿಹಾರ ನೀಡಬೇಕೆಂದು ನಿರ್ದೇಶಿಸಿ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಕರಣದ ವಿವರ: ಕನ್ನಡದ ಖ್ಯಾತ ಸಾಹಿತಿ,ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರು 1960 ರ ದಶಕದಲ್ಲಿ ಪ್ರಕಟವಾದ ವಂಶವೃಕ್ಷ ಸೇರಿದಂತೆ 25 ಪ್ರಸಿದ್ಧ ಕಾದಂಬರಿಗಳನ್ನು ರಚಿಸಿದ್ದಾರೆ. ವಂಶವೃಕ್ಷ ಕಾದಂಬರಿಯು ಕಾದಂಬರಿಯು ಕನ್ನಡ […]
ಮೈಸೂರು ಏರ್‌ಪೋರ್ಟ್ : ರನ್‌ವೇ ವಿಸ್ತರಣೆಗೆ ಭೂಸ್ವಾಧೀನ ತೊಡಕು

ಮೈಸೂರು : ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರನ್ ವೇ ವಿಸ್ತರಣೆಗೆ ಏರ್ ಪೋರ್ಟ್ ಅಥಾರಿಟಿಯೂ 534 ಕೋಟಿ ರೂ. ಅನುದಾನ ನೀಡಲಿದೆ. ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿ ಪರಿಣಮಿಸಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು. ಆದರೆ ಭೂ ಸ್ವಾಧೀನ ಪ್ರಕ್ರಿಯೆ ನಾನಾ ಕಾರಣಗಳಿಗೆ ತಡವಾಗುತ್ತಿದೆ. ಹೀಗಾಗಿ ಅನುದಾನ ದೊರೆತಿದ್ದರೂ ರನ್ ವೇ ವಿಸ್ತರಣೆ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಎಂದರು. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 […]