ನಡೆದಾಡುವ ಪರಿಸರ ಮಾತೆ, ತುಳಸೀ ಗೌಡ ಇನ್ನಿಲ್ಲ: ಹಸಿರಿನಲ್ಲಿ ಕೊನೆಯುಸಿರೆಳೆದ ಹಿರಿಯ ಜೀವ

ನಡೆದಾಡುವ ಪರಿಸರ ಮಾತೆ, ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ವೃಕ್ಷಮಾತೆ, ನಡೆದಾಡುವ ಜ್ಞಾನಕೋಶ ಎಂದೇ ಖ್ಯಾತರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಗಟ್ಟಲೇ ಗಿಡಗಳಿಗೆ ಜೀವ ನೀಡಿ ಮರವಾಗಿಸಿದ್ದರು. ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮರಗಳ ಜೊತೆಗೆ ನಿತ್ಯ ಬದುಕುತ್ತಿದ್ದ, ಅವುಗಳನ್ನು ಮಕ್ಕಳಂತೆ […]

ಮಂಗಳೂರು-ಕಾರ್ಕಳ ರಸ್ತೆಗಿಳಿಯಿತು‌ ಸರಕಾರಿ ಬಸ್ಸು: ಜನತೆಯಿಂದ ಭರ್ಜರಿ ಸ್ವಾಗತ: ಇಲ್ಲಿದೆ ಬಸ್ ವೇಳಾಪಟ್ಟಿ!

ಮಂಗಳೂರು-ಕಾರ್ಕಳ: ಕಾರ್ಕಳ-ಮಂಗಳೂರು ದಾರಿಯಲ್ಲಿ ಸರಕಾರಿ ಬಸ್ಸು ಓಡಾಡಬೇಕು ಎನ್ನುವುದು ಇಲ್ಲಿನ ಜನರ, ವಿದ್ಯಾರ್ಥಿಗಳ ಬಹು ವರ್ಷಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆ ಬಂದ ಮೇಲಂತೂ ಸರಕಾರಿ ಬಸ್ಸನ್ನು ಈ ದಾರಿಯಲ್ಲಿ ಬಿಡಲೇಬೇಕು ಎನ್ನುವ ಆಗ್ರಹ ಜಾಸ್ತಿಯಾಗಿತ್ತು. ಈಗ ಸರಕಾರಿ ಬಸ್ಸಿನ ಕನಸು ಈಡೇರಿದೆ. ಡಿ.12 ಗುರುವಾರದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.ಇಷ್ಟು ದಿನ ಖಾಸಗಿ ಬಸ್ ಗಳ ಒತ್ತಡದಿಂದ ಸರಕಾರಿ ಬಸ್ಸು ರಸ್ತೆಗಿಳಿಯದೇ ಜನರು ಸಮಸ್ಯೆ ಅನುಭವಿಸಿದ್ದರು. ಖಾಸಗಿ ಬಸ್ಸು ಮಾಲೀಕರು ಶಾಸಕರಿಗೆ, […]

SM Krishna: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್ ಎಂ ಕೃಷ್ಣ ನಿಧನ

ಬೆಂಗಳೂರು: ಮಾಜಿ ಸಿಎಂ ಎಸ್.‌ ಎಂ ಕೃಷ್ಣ  (92)  ಮಂಗಳವಾರ (ಡಿ.10 ರಂದು) ನಸುಕಿನ ಜಾವ 2:30ರ ವೇಳೆಗೆ ವಿಧಿವಶರಾಗಿದ್ದಾರೆ. ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಉಳ್ಳಾಲ: ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ಯುವತಿಯರು ಮೃತ್ಯು..!

ಉಳ್ಳಾಲ: ಖಾಸಗಿ ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಕೀರ್ತನಾ ಎನ್ (21), ನಿಶಿತಾ ಎಂ.ಡಿ. (21) ಹಾಗೂ ಪಾರ್ವತಿ ಎಸ್‌. (20) ಎಂದು ಗುರುತಿಸಲಾಗಿದೆ. ಈ ಮೂವರು ಮೈಸೂರು ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ. ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್‌ ಎಂಬಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ. ಮೈಸೂರಿನ ಈ ಮೂವರು […]

ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ವಿಧಿವಶ.

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಭಾನುವಾರ ನಿಧನರಾಗಿದ್ದಾರೆ. ಅನಾರೋಗದ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಜೆಪಿ ನಗರ ನಿವಾಸಕ್ಕೆ ತರಲಾಗುವುದು, ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ. ಸುದೀಪ್ ಅವರ ತಾಯಿಯವರು ಕಳೆದ ಕೆಲ ದಿನಗಳಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಸಂಬಂಧ […]