ವರ್ಷಾಂತ್ಯಕ್ಕೆ ಕಳೆಗಟ್ಟುತ್ತಿದೆ ಕಡಲ ಕಿನಾರೆ : ಪಣಂಬೂರು ಬೀಚ್‌ನಲ್ಲಿ ಜನವೋ ಜನ

ಹೊಸ ಆಕರ್ಷಣೆಯಾಗಿ ಪಣಂಬೂರು ಕಡಲ ಕಿನಾರೆಗೆ ಫ್ಲೋಟಿಂಗ್ ಬ್ರಿಡ್ಜ್, ಬೋಟಿಂಗ್, ಪ್ಯಾರಚೂಟ್, ಸ್ಪೀಡ್ ಬೋಟ್‌ಗಳು ಬಂದಿದೆ. ಪ್ರವಾಸಿಗರು ವರ್ಷಾಂತ್ಯಕ್ಕೆ ಬೀಚ್‌ಗೆ ಆಗಮಿಸಿ ಈ ಎಲ್ಲದರ ಮೂಲಕ ಕಡಲ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಅಲ್ಲದೇ ಒಂಟೆಗಳ, ಕುದುರೆಗಳ ಬೆನ್ನೇರಿ ಕಡಲ ತೀರದುದ್ದಕ್ಕೂ ಸವಾರಿ ಮಾಡುವ, ಮಕ್ಕಳು ಗಾಳಿಪಟಗಳನ್ನು ಹಾರಿಸುತ್ತಿರುವ, ಜಾರುಬಂಡಿಯಲ್ಲಿ ಜಾರುತ್ತಾ, ಮೇಲಕ್ಕೆ ಕೆಳಗೆ ಹಗ್ಗದಲ್ಲಿ ಜೀಕಾಡುತ್ತಾ, ಸ್ಪೋಟ್ಸ್ ಕಾರು ಸವಾರಿ ಮಾಡುತ್ತಾ ಮಜಾ ಮಾಡುತ್ತಿರುವ ದೃಶ್ಯ ಕಡಲ ಕಿನಾರೆಯಲ್ಲಿ ಕಂಡು ಬಂದಿದೆ. ಪ್ರವಾಸಿಗರು ಸೂರ್ಯಾಸ್ತದ ಸೌಂದರ್ಯವನ್ನು ಆಸ್ವಾದಿಸುತ್ತಾ ಸೆಲ್ಫಿಗಳಲ್ಲಿ […]

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 158 ಕೋವಿಡ್ ಪ್ರಕರಣಗಳು ವರದಿ

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಗಮನದಲ್ಲಿಟ್ಟುಕೊಂಡು, ಸಕಾರಾತ್ಮಕ ಪ್ರಕರಣಗಳ ರೋಗಲಕ್ಷಣದ ಸಂಪರ್ಕವಿದ್ದವರನ್ನು ಪರೀಕ್ಷೆಗೊಳಪಡಿಸುವುದು, ಟೆಲಿ ಐಸಿಯು ಬಳಕೆ ಮತ್ತು ಸೋಂಕಿನಿಂದಾಗಿ ಸಾವನ್ನಪ್ಪಿದವರ ಲೆಕ್ಕವಿಟ್ಟುಕೊಳ್ಳುವುದು ಮುಂತಾದ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರ ಗುರುವಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 158 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 69 ಮಂದಿ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು ಒಟ್ಟು 568 ಮಂದಿ ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಗುರುವಾರ ಸಂಜೆ ಆರೋಗ್ಯ ಇಲಾಖೆ ವರದಿ ಮಾಡಿದೆ.568 ಮಂದಿಯ ಪೈಕಿ 514 […]

ಜನಪ್ರಿಯ ತಮಿಳು ನಟ ವಿಜಯಕಾಂತ್ ನಿಧನ

ಚೆನ್ನೈ: ಡಿಎಂಡಿಕೆ ಸಂಸ್ಥಾಪಕ ನಾಯಕ ಮತ್ತು ಜನಪ್ರಿಯ ತಮಿಳು ನಟ ವಿಜಯಕಾಂತ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಚೆನ್ನೈನಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಪಕ್ಷದ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮೂಲಕ ವಿಜಯಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ನಂತರ ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ ಎಂದು ಪಕ್ಷವು ತಿಳಿಸಿತ್ತು. ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಡಿಎಂಡಿಕೆ ಕಚೇರಿಗೆ ಕೊಂಡೊಯ್ಯಲಾಗುವುದು. ‘ಕ್ಯಾಪ್ಟನ್’ ಎಂದು ವ್ಯಾಪಕವಾಗಿ ಕರೆಯಲ್ಪಡುವ ವಿಜಯಕಾಂತ್ […]

ಸಚಿವ ಮಧು ಬಂಗಾರಪ್ಪ : 5500 ದೈಹಿಕ ಶಿಕ್ಷಕರು ಹಾಗೂ 40,000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ

ಇಂದು ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದೊಂದಿಗೆ ಸೊರಬದ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿ ತಾಲೂಕಿಗೆ 4-6ರಂತೆ ರಾಜ್ಯದ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯದಾದ್ಯಂತ ಸುಮಾರು 3000 ಕೆ.ಪಿ.ಎಸ್. ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು […]

ದೂರದ ಅಮೇರಿಕಾದಲ್ಲಿ ಹೃದಯಾಘಾತದಿಂದ ಮೃತ ಪಟ್ಟ ಮಗ: 3 ಗಂಟೆಗಳಲ್ಲಿ ಹೆತ್ತವರ ಪಾಸ್ ಪೋರ್ಟ್ ನವೀಕರಿಸಿದ ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ

ಬೆಂಗಳೂರು: ದೂರದ ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮಗ ಹೃದಯಾಘಾತದಿಂದ ಮೃತಪಟ್ಟಿದ್ದು, ಬೆಂಗಳೂರಿನಲ್ಲಿದ್ದ ಆತನ ಹೆತ್ತವರಿಗೆ 3 ಗಂಟೆಗಳಲ್ಲಿ ಪಾಸ್ ಪೋರ್ಟ್ ನೀಡಿದ ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿ ಕ್ಷಿಪ್ರ ಕಾರ್ಯಾಚರಣೆಗೆ ಮಾದರಿಯಾಗಿದೆ. 70 ವರ್ಷದ ಯಲಹಂಕಾ ನಿವಾಸಿಗಳಾದ ರಂಗರಾಜು ಮತ್ತು ಗೀತಾ ದಂಪತಿ ತಮ್ಮ ಪುತ್ರನ ಅಂತ್ಯಕ್ರಿಯೆ ನಡೆಸಲು ಬುಧವಾರ ಬೆಳಿಗ್ಗೆ ಕೆಐಎಎಲ್ ನಿಂದ ಟೆಕ್ಸಾಸ್ ಗೆ ಪ್ರಯಾಣಿಸಿದ್ದಾರೆ. ವೃದ್ಧ ದಂಪತಿಯ ಸಂಬಂಧಿ ಹಾಗೂ ಪಾಸ್ ಪೋರ್ಟ್ ಪಡೆಯಲು ಸಹಕರಿಸಿದ ಆರ್ ಎನ್ […]