ರಾಜ್ಯಾದ್ಯಂತ ಇ-ಚಲನ್ ದಂಡ ವ್ಯವಸ್ಥೆಗೆ ಚಾಲನೆ ನೀಡಿದ ಸಂಚಾರಿ ಪೊಲೀಸ್ ಇಲಾಖೆ

ಬೆಂಗಳೂರು: ರಾಜ್ಯಾದ್ಯಂತ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಸಂಚಾರಿ ಪೊಲೀಸ್ ಇನ್ನು ಮುಂದೆ ಪೆನ್ನು-ಪೇಪರು ಹಿಡಿದು ದಂಡ ವಿಧಿಸುವ ಬದಲಿಗೆ ಹೈಟೆಕ್ ದಂಡ ಪಾವತಿಯನ್ನು ಅಳವಡಿಸ್ಕೊಂಡಿದೆ. ಹೈಟೆಕ್ ದಂಡ ಪಾವತಿ ಬಗ್ಗೆ ಕರ್ನಾಟಕ ಟ್ರಾಫಿಕ್ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲೆಡೆ ಇನ್ಮುಂದೆ ಇ-ಚಲನ್ ಮೂಲಕ ದಂಡ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಶೇ.100 ರಷ್ಟು ಪೇಪರ್‌ಲೆಸ್ ದಂಡ ಪಾವತಿ ವ್ಯವಸ್ಥೆ ಜಾರಿಯಾಗಿದೆ. ದೇಶದಲ್ಲೆ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಸಂಚಾರ ನಿರ್ವಹಣೆಯಲ್ಲಿ […]
ಬೊರಿವಿಲಿ-ದಹಿಸರ್ ಬಿಲ್ಲವರ ಅಸೋಸಿಯೇಶನ್ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

ಬೊರಿವಿಲಿ: ಹಳದಿ ಕುಂಕುಮ ಸುಮಂಗಲೆಯರ ಬರೇ ಸಂಕೇತವೆಂದು ತಿಳಿಯದೆ ಅದರ ಇತಿಹಾಸ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಹುಟ್ಟು ಜನ್ಮದಿಂದ ಜೀವನಪೂರ್ತಿ ಹಳದಿ ಕುಂಕುಮ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುವ ವಸ್ತುವಾಗಿದೆ. ದೇವತಾ ಕಾರ್ಯಕ್ರಮದಲ್ಲಿ ತೀರ್ಥ ಪ್ರಸಾದದ ಅರಿವಾಣದಲ್ಲಿ ಯಾವಾಗಲೂ ಅರಸಿನ ಕುಂಕುಮ ಎರಡನ್ನು ಒಟ್ಟಿಗೆ ಇರುವುದು ಪ್ರತಿ ಧಾರ್ಮಿಕ ಸ್ಥಳಗಳಲ್ಲಿ ಇದನ್ನು ಕಾಣ ಬಹದು. ಧಾರ್ಮಿಕತೆಯ ಪ್ರತಿ ಹಂತದಲ್ಲೂ ಅರಿಶಿನ ಕುಂಕುಮ ವಿಶೇಷ ಮಹತ್ವ ಪಡೆದೆ ಎಂದು ಸಮಾಜ ಸೇವಕಿ ಸರಸ್ವತಿ ರಾವ್ […]
ಮೀರಾ ಡಹಾಣೂ ಬಂಟ್ಸ್ ವಾರ್ಷಿಕ ಟರ್ಫ್ ಫುಟ್ ಬಾಲ್ ಪಂದ್ಯಾವಳಿ

ಬೊಯಿಸರ್: ಸ್ಪರ್ಧೆಗಳು ನಮ್ಮಲ್ಲಿನ ಕ್ರೀಡಾಮನೋಭಾವವನ್ನು ಹುರಿದುಂಬಿಸುತ್ತವೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇಂತಹ ಕ್ರೀಡೆಗಳಲ್ಲಿ ಸ್ಪರ್ಧಿಸುವಲ್ಲಿನ ಹುಮ್ಮಸ್ಸು ನಮ್ಮಲ್ಲಿನ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸುತ್ತದೆ ಎಂದು ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಹಾಗೂ ಮಾಜಿ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ ಹೇಳಿದರು. ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲಾ ಬೊಯಿಸರ್ ಪೂರ್ವದಲ್ಲಿನ ಸ್ಕೋರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರವಿವಾರ ಜರಗಿದ ಮೀರಾ ಡಹಾಣೂ ಬಂಟ್ಸ್ (ರಿ) ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್ ಉದ್ಘಾಟನೆಯ ಸಮಾರಂಭದಲ್ಲಿ […]
2,000 ಮರಗಳನ್ನು ಕಡಿಯಲು 48 ಗಂಟೆಯಲ್ಲಿ ಅರ್ಜಿ ಸಲ್ಲಿಸಿದ ಬೆಂಗಳೂರು ನಾಗರಿಕರು!!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಪಾಯ ಹಾಗೂ ಅಡೆತಡೆಗಳನ್ನು ಉಂಟುಮಾಡುವ ಮರಗಳನ್ನು ಕಡಿಯಲು ಸಾರ್ವಜನಿಕರಿಗೆ ಅರ್ಜಿ ಹಾಕುವಂತೆ ಹೇಳಿತ್ತು. ಆಶ್ಚರ್ಯವೆಂದರೆ ಬರೀ 48 ಗಂಟೆಯಲ್ಲಿ 2,000 ಮರಗಳನ್ನು ಕಡಿಯಲು ಅರ್ಜಿಗಳು ಬಂದಿವೆ.ಆದರೆ ಈ ಎಲ್ಲ ಮರಗಳನ್ನು ಕಡಿಯುವುದಿಲ್ಲ. ಸಂಚಾರಿ ಇಲಾಖೆಯೊಂದಿಗೆ ಸಮೀಕ್ಷೆ ಹಾಗೂ ಸಮಾಲೋಚನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. ಮರಗಳನ್ನು ಕಡಿಯುವ ಬದಲು, ಕೆಲ ಕೊಂಬೆಗಳನ್ನು ಕಡಿದು ಮರಗಳನ್ನು ಉಳಿಸುಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಸತ್ತ ಮರಗಳು […]
ಬಿಜೆಪಿ ನಾಯಕರ ಫೋಟೋ ವಿರೂಪ ಪ್ರಕರಣ: ಡಿ.ಕೆ.ಶಿವಕುಮಾರ್ ವಿರುದ್ದ ಪ್ರಕರಣ ದಾಖಲಿಸಲು ವಿಶೇಷ ನ್ಯಾಯಾಲಯದ ಸೂಚನೆ

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಬಿ.ಆರ್ ನಾಯ್ಡು ಇಬ್ಬರೂ ಸೇರಿ ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆಯ ನಕಲಿ ಫೋಟೋವನ್ನು ಬಳಸಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಇಬ್ಬರ ಮೇಲೆ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156 (3) ರ ಅಡಿಯಲ್ಲಿ ಪ್ರಕರಣ ದಾಖಲಿಸಿ 2024ರ ಮಾರ್ಚ್ 30ರೊಳಗೆ ವರದಿ ಸಲ್ಲಿಸಲು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ […]