ಶ್ರೀ ದೊಡ್ಡಮ್ಮದೇವಿ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ

ಚಿಕ್ಕಮಗಳೂರು: ಬುಧವಾರದಂದು ನಗರದ ದಂಟರಮಕ್ಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೊಡ್ಡಮ್ಮದೇವಿ ದೇವಾಲಯದ ಪ್ರವೇಶೋತ್ಸವ ಹಾಗೂ ಶಿಲಾಮೂರ್ತಿ ಪುನಃ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ನೂರಾರು ಗ್ರಾಮಸ್ಥರೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು. ಮಹೋತ್ಸವವು ಎರಡು ದಿನಗಳಿಂದ ಆಚರಿಸಲಾಗುತ್ತಿದ್ದು ಕೊನೆಯ ದಿನವಾದ ಇಂದು ಬೆಳಿಗ್ಗೆ 4 ರಿಂದ ಶ್ರೀ ದೊಡ್ಡಮ್ಮದೇವಿ ಶಿಲಾವಿಗ್ರಹ ಮತ್ತು ಪರಿವಾರ ದೇವತೆಗಳ ಪುನಃ ಪ್ರಾಣ ಪ್ರತಿಷ್ಟಾಪನಾ ಅಭಿಷೇಕ, ಹೋಮಾದಿಗಳು ನಡೆಯಿತು. ಬೆಳಿಗ್ಗೆ 10 ರಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಶಿಖರ ಕಳಸಾರೋಹಣ ನೆರವೇರಿಸಿದರು. ಅದಾದ ಬಳಿಕ ಪೂರ್ಣಾಹುತಿ, […]
ಒತ್ತುವರಿ ತಡೆಯಲು ಡ್ರೋನ್‌ಗಳ ಮೂಲಕ ಮುಜರಾಯಿ ಮತ್ತು ವಕ್ಫ್ ಆಸ್ತಿಗಳ ಸಮೀಕ್ಷೆ

ಬೆಂಗಳೂರು: ಇದೇ ಮೊದಲ ಬಾರಿಗೆ ಮುಜರಾಯಿ ಮತ್ತು ವಕ್ಫ್ ಆಸ್ತಿಗಳನ್ನು ಡ್ರೋನ್‌ಗಳ ಮೂಲಕ ಸಮೀಕ್ಷೆ ನಡೆಸಲಾಗುವುದು. ಧಾರ್ಮಿಕ ಸಂಸ್ಥೆಗಳನ್ನು ಅತಿಕ್ರಮಣಗಳಿಂದ ರಕ್ಷಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರದ ಆದೇಶದ ಪ್ರಕಾರ, ವಕ್ಫ್ ಆಸ್ತಿ ಸಮೀಕ್ಷೆಗಾಗಿ ಕರ್ನಾಟಕ ರಾಜ್ಯ ದೂರ ಸಂವೇದಿ ಅಪ್ಲಿಕೇಶನ್ ಕೇಂದ್ರ (KSRSAC) ಮೂಲಕ ಡ್ರೋನ್ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ. ಮುಜರಾಯಿ ದೇವಸ್ಥಾನಗಳನ್ನು ಕಂದಾಯ ಇಲಾಖೆ ಮೂಲಕ ಆಸ್ತಿ ಸಮೀಕ್ಷೆಯ ವ್ಯಾಪ್ತಿಗೆ ತರಲಾಗುವುದು. ವಕ್ಫ್ ಆಸ್ತಿಗಳ ಒಂದು ಹಂತದ ಸಮೀಕ್ಷೆ ನಡೆದಿದ್ದು, ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. […]
ಸದ್ಯಕ್ಕಿಲ್ಲ ಮುಖ್ಯಮಂತ್ರಿ ಬದಲಾವಣೆ: ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ?

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಕಾರ್ಯತಂತ್ರದ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿ ಸದ್ಯಕ್ಕಂತೂ ಯಾವುದೇ ಫಲಿತಾಂಶವನ್ನು ನೀಡಿದಂತೆ ಕಾಣುತ್ತಿಲ್ಲ. ರಾಜ್ಯ ಬಿಜೆಪಿ ಕೋರ್ ಕಮಿಟಿ ಮತ್ತು ಪಕ್ಷದ ನಾಯಕರೊಂದಿಗೆ ನಿಗದಿಪಡಿಸಲಾಗಿದ್ದ ಸಭೆ ರದ್ದುಗೊಂಡಿರುವುದು ಬೊಮ್ಮಾಯಿ ಅವರೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನುವ ಸೂಚನೆ ಎಂದು ಬಲ್ಲ ಮೂಲಗಳು ತಿಳಿಸುತ್ತಿವೆ. ಅಮಿತ್ ಶಾ ಅವರ ಬೆಂಗಳೂರು ಭೇಟಿ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಪುಟ […]
ಕಾರ್ಮಿಕ ದಿನಾಚರಣೆ ಉಡುಗೊರೆ: ಕೆಎಸ್‌ಆರ್‌ಟಿಸಿಯ 7,200 ನೌಕರರ ವಿರುದ್ಧದ ಶಿಸ್ತು ಪ್ರಕರಣ ರದ್ದು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕಾರ್ಮಿಕ ದಿನದಂದು ತನ್ನ ಕಾರ್ಮಿಕರಿಗೆ ಉಡುಗೊರೆಯನ್ನು ನೀಡಿದೆ. ಸಂಸ್ಥೆಯ 7,200 ನೌಕರರ ವಿರುದ್ಧ ದಾಖಲಾಗಿದ್ದ ಶಿಸ್ತು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯಿಸುವಂತೆ ರದ್ದು ಮಾಡಿ ಆದೇಶ ಹೊರಡಿಸಿ ಇತಿಹಾಸ ನಿರ್ಮಿಸಿದೆ. ಕೆಎಸ್‌ಆರ್‌ಟಿಸಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಈ ಆದೇಶವನ್ನು ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 10 ತಿಂಗಳಿಗಿಂತ ಕಡಿಮೆ ಅವಧಿಯ ಒಳಗಿನ ಗೈರು ಹಾಜರಿಯನ್ನು […]
ಪಿ.ಎಸ್.ಐ ಪರೀಕ್ಷೆ ನೇಮಕಾತಿ ರದ್ದು, ಮರು ಪರೀಕ್ಷೆಗೆ ತೀರ್ಮಾನ

ಬೆಂಗಳೂರು: 545 ಪಿ.ಎಸ್.ಐ ಹುದ್ದೆಗಳಿಗೆ ನಡೆಸಲಾಗಿದ್ದ ಪರೀಕ್ಷಾ ನೇಮಕಾತಿಯನ್ನು ರದ್ದುಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆರೋಪಿಗಳನ್ನು ಹೊರತುಪಡಿಸಿ, ಉಳಿದವರಿಗೆ ಶೀಘ್ರವೇ ಮರು ಪರೀಕ್ಷೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಇದಲ್ಲದೆ ಇನ್ನಿತರ ಆರೋಪಿಗಳಾದ ಅರ್ಚನಾ, ದಿವ್ಯಾ, ಚಾಲಕ ಸದ್ದಾಂ, ಸುನಂದಾರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇವರೆಲ್ಲರನ್ನೂ ರಾಜ್ಯಕ್ಕೆ ಕರೆತರಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಅವ್ಯವಹಾರ ನಡೆದಿರುವುದು […]