ವೀಲಿಂಗ್ ಮಾಡಿ ತೊಂದರೆ ಮಾಡುವವರ ಮೇಲೆ ಸರ್ಕಾರ ಕಣ್ಗಾವಲು!

ಬೆಂಗಳೂರು: ರಸ್ತೆಗಳಲ್ಲಿ ರಾತ್ರಿವೇಳೆ ಹಾಗೂ ಮುಂಜಾನೆಯ ಸಮಯದಲ್ಲಿ ವ್ಹೀಲಿಂಗ್ ಮಾಡುವವರನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದ ಯುವಕರ ಪೋಷಕರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರು ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರೆ ನಗರಗಳಲ್ಲಿ ವ್ಹೀಲಿಂಗ್ ಹಾವಳಿಯಿಂದ ಅಪಘಾತಗಳು ಸಂಭವಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ವ್ಹೀಲಿಂಗ್ ಮಾಡುವವರ ಮೇಲೆ ರಾತ್ರಿ ಹಾಗೂ ಬೆಳಗಿನ ಜಾವ […]
ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್: ಬೀದಿ ನಾಯಿಗಳ ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬೀದಿ ನಾಯಿಗಳನ್ನು ಆಶ್ರಯ ತಾಣದಲ್ಲಿ ಬಂಧಿಸದೇ ಕೇವಲ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಿ ಬಿಡುಗಡೆ ಮಾಡುವ ಮೂಲಕ ಶ್ವಾನ ಪ್ರಿಯರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್ ನೀಡಿದೆ. ಆದರೆ ರೇಬಿಸ್ ನಾಯಿಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಈ ಹಿಂದಿನ ಆದೇಶವನ್ನು ಪರಿಶೀಲಿಸಿ, ಬೀದಿ ನಾಯಿಗಳ ವಿಷಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಅನೇಕ ವಿಷಯಗಳನ್ನು […]
ಪತ್ನಿ ಕಾಯಂ ಜೀವನಾಂಶ ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶ!

ನವದೆಹಲಿ: ವಿಚ್ಛೇದಿತ ಮಹಿಳೆಗೆ ಜೀವನಾಂಶ ಒದಗಿಸುವಾಗ ಪತಿಯ ಸಾಮರ್ಥ್ಯ ಹಾಗೂ ಪತ್ನಿಯ ಅಗತ್ಯಗಳ ನಡುವೆ ಸಮತೋಲಿತ ಧೋರಣೆ ಅನುಸರಿಸುವುದಕ್ಕೆ ಸುಪ್ರೀಂ ಕೋರ್ಟ್ ಒಲವು ತೋರಿದೆ. ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಇದ್ದ ಪೀಠ, ವೈದ್ಯ ಪತಿಯು ಎಂಟೆಕ್ (ಕಂಪ್ಯೂಟರ್ ಸೈನ್ಸ್) ಮತ್ತು ಎಲ್ಎಲ್ಬಿ ಪದವಿಗಳನ್ನು ಹೊಂದಿರುವ ಪತ್ನಿಗೆ ನೀಡಬೇಕಾದ ಕಾಯಂ ಪರಿಹಾರ ವನ್ನು 15 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಸುವ ಸಂದರ್ಭ, ಪತಿಗೆ ಹೆಚ್ಚಿನ ಮೊತ್ತ ಪಾವತಿಸುವ ಸಾಮರ್ಥ್ಯವಿದೆ ಎಂಬುದನ್ನು ಗಮನಿಸಿತು. […]
ನಕಲಿ ಪ್ರಕರಣ ದಾಖಲಿಸಿದ ವಕೀಲನಿಗೆ ಜೀವಾವಧಿ ಶಿಕ್ಷೆ; ನ್ಯಾಯಾಲಯ ತೀರ್ಪು

ಲಖನೌ: ದಲಿತ ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡು ಎದುರಾಳಿಗಳ ವಿರುದ್ಧ ನಕಲಿಪ್ರಕರಣಗಳನ್ನು ದಾಖಲಿಸಿದ ವಕೀಲನಿಗೆ ಲಖನೌನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡ ವಿಧಿಸಿದೆ. ವಿಶೇಷ ನ್ಯಾಯಾಧೀಶ (ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ) ವಿವೇಕಾನಂದ ಶರಣ್ ತ್ರಿಪಾಠಿ ವಕೀಲ ಪರಮಾನಂದ ಗುಪ್ತಾ ಎಂಬ ವಕೀಲನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಿಚಾರಣೆ ವೇಳೆ ವಿಷಯ ಬೆಳಕಿಗೆ: ರಾವತ್ ಎಂಬಾತನೊಂದಿಗೆ ಶಾಮೀಲಾಗಿದ್ದ ಗುಪ್ತಾ ತನ್ನ ಎದುರಾಳಿ ಪಕ್ಷದ ವಿರುದ್ಧ ತಾನು 18 ಪ್ರಕರಣಗಳನ್ನು […]
ಧರ್ಮಸ್ಥಳ: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

ಬೆಳ್ತಂಗಡಿ: 2003ರಲ್ಲಿ ಧರ್ಮಸ್ಥಳ ದೇವಸ್ಥಾನದ ಆವರಣದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಇದೀಗ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಸ್ತಾಂತರಿಸಲಾಗಿದೆ. ಯುವತಿಯ ತಾಯಿ 2025ರ ಜುಲೈ 15ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಪ್ರಕರಣವನ್ನು ಕೇಸ್ ನಂ. 175/PTN/DPS/2025 ಅಡಿಯಲ್ಲಿ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ, ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) 2025ರ ಆಗಸ್ಟ್ 19ರಂದು ಪ್ರಕರಣವನ್ನು ವಿವರವಾದ ತನಿಖೆಗಾಗಿ […]