ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ವಾಪಾಸ್ ಕಳುಹಿಸಿದ ರಾಜ್ಯಪಾಲರು!

ಬೆಂಗಳೂರು: ರಾಜ್ಯದಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಹೊರಟಿತ್ತು. ಆದರೆ, ಇದೀಗ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರವೇ ಗಮನ ಹರಿಸಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಕಾಣಿಸುತ್ತಿಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಮೈಕ್ರೋ ಫೈನಾನ್ಸ್ 3 ಲಕ್ಷಕ್ಕಿಂತ ಜಾಸ್ತಿ ಸಾಲ ಕೊಡುವುದಿಲ್ಲ. ನೀವು ಐದು ಲಕ್ಷ ದಂಡ ಹೇಗೆ ಹಾಕುತ್ತೀರಾ ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ 10 ವರ್ಷಗಳ ಶಿಕ್ಷೆ ಮತ್ತು […]
ಪ್ರವಾಸಿಗರೇ ದಯವಿಟ್ಟು ಗಮನಿಸಿ: ಮಡಿಕೇರಿಯಲ್ಲಿ ಇನ್ಮುಂದೆ ವಾಟರ್ ಬಾಟಲ್ ಕೊಡಲ್ಲ

ಮಡಿಕೇರಿ, ಫೆಬ್ರವರಿ 07: ಪ್ರವಾಸಿಗರ ಸ್ವರ್ಗವಾದ ಮಡಿಕೇರಿಯಲ್ಲಿ ವಾರಾಂತ್ಯದಲ್ಲಿ ರಜಾದಿನದಲ್ಲಿ ಹಲವರ ನೆಚ್ಚಿನ ಸ್ಪಾಟ್. ಈ ಪ್ರವಾಸಿಗರ ಕಾರಣಕ್ಕಾಗಿಯೇ ಇದೀಗ ಮಡಿಕೇರಿಯ ಅಂದ ಹಾಳಾಗಿದ್ದು ವಿಪರೀತ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯಗಳು ಒಟ್ಟಾಗಿದೆ. ಪರಿಸರಕ್ಕೂ ಹಾನಿಕಾರಕವಾಗಿದೆ. ಇದನ್ನು ವಿಲೇವಾರಿ ಮಾಡುವುದೇ ನಗರಸಭೆಗೆ ತಲೆನೋವಾಗಿದ್ದು. ಈಗ ನಗರಸಭೆ ಹೊಸ ಯೋಜನೆ ರೂಪಿಸಿದೆ. ಈ ಕುರಿತು ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಮಡಿಕೇರಿ ನಗರದಲ್ಲಿ ಎರಡು ಲೀಟರ್ವರೆಗಿನ ಪ್ಲಾಸ್ಟಿಕ ವಾಟರ್ ಬಾಟಲಿಗಳ ಮಾರಾಟವನ್ನ ನಿಷೇಧಿಸಿ ಆದೇಶ ಹೊರಡಿಸಿದೆ. ಮಡಿಕೇರಿಯ ವರ್ತಕರು, ಹೋಮ್ […]
ಹಳ್ಳಿ ಹೈದ ಹನುಮಂತ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್.

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ತೆರೆಬಿದ್ದಿದೆ. ಹಳ್ಳಿ ಹೈದ ಹನುಮಂತ ಬಿಗ್ ಬಾಸ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಹನುಮಂತ್ ವಿನ್ನರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟರು. ಮನೆಯ ಜಗಳ ನೋಡಿ ಹನುಮಂತು ಬೆಚ್ಚಿಬಿದ್ದಿದ್ದರು. ಆದರೂ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು. ಈಗ ಪರಾಕ್ರಮ ಮೆರೆದ […]
ಹೊಸ ವರ್ಷಕ್ಕೆ ಸರಕಾರಿ ಬಸ್ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರ ಹೆಚ್ಚಳ ಬೇಡಿಕೆಗೆ ಒಪ್ಪಿಗೆ

ಸರಕಾರದ ನಾಲ್ಕು ನಿಗಮದವರು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಲ್ಲಿಸಿದ ಬೇಡಿಕೆಗೆ ಸರಕಾಋ ಕೊನೆಗೂ ಒಪ್ಪಿಗೆ ನೀಡಿದ್ದು ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ […]
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ: ಡಿ.27 ರಂದು ಸರಕಾರಿ ರಜೆ ಘೋಷಣೆ.

ಬೆಂಗಳೂರು: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ, ಹಾಗೂ ಇಂದು (ಡಿ.27) ಸರಕಾರಿ ರಜೆ ಘೋಷಿಸಲಾಗಿದೆ. ಭಾರತ ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರು ಹಾಗೂ ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಗುರುವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 2004 ರಿಂದ 2014 ರವರೆಗೆ ಅವರು ದೇಶದ ಪ್ರಧಾನಿಯಾಗಿದ್ದರು.