ಕಾಶ್ಮೀರದ ಭಯೋತ್ಪಾದಕ ಬೆಂಗಳೂರಿನಲ್ಲಿ ಬಂಧನ: ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಕಾಶ್ಮೀರದ ಭಯೋತ್ಪಾದಕ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. “ಬೆಂಗಳೂರಿನಲ್ಲಿ ಆತನಿಗೆ ಯಾರು ಆಶ್ರಯ ನೀಡಿದ್ದಾರೆ, ಆತ ಎಲ್ಲಿ ಉಳಿದುಕೊಂಡಿದ್ದಾನೆ ಮತ್ತು ಯಾವ ಸಂಘಟನೆಗಳು ಅಥವಾ ಜನರು ಆತನನ್ನು ಬೆಂಬಲಿಸುತ್ತಿದ್ದಾರೆ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಭದ್ರತಾ ಕಾರಣಗಳಿಗಾಗಿ ನಡೆಯುತ್ತಿರುವ ತನಿಖೆಯ ವಿವರಗಳನ್ನು […]
ಸರ್ಕಾರ ಶೀಘ್ರದಲ್ಲೇ ಲೋಕಾಯುಕ್ತರ ನೇಮಕ ಮಾಡಲಿದೆ: ಸಿಎಂ ಬೊಮ್ಮಾಯಿ

ಮೈಸೂರು: ರಾಜ್ಯ ಸರ್ಕಾರವು ಶೀಘ್ರವೇ ಲೋಕಾಯುಕ್ತರನ್ನು ನೇಮಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದ್ದಾರೆ. ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಲೋಕಾಯುಕ್ತರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಜ್ಯಸಭಾ ಚುನಾವಣೆಯಲ್ಲಿ ಎಲ್ಲಾ ಮೂರು ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲಲಿದ್ದಾರೆ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಆಫರ್‌ಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು: ನಗರದ ಸಮಸ್ಯೆಗಳ ಕುರಿತು ಬಿಬಿಎಂಪಿ ಅಧಿಕಾರಿಗಳ ಜೊತೆ ನಟ ಅನಿರುದ್ದ್ ಚರ್ಚೆ

ಬೆಂಗಳೂರು: ಶನಿವಾರ ನಮ್ಮ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಅವರ ತಂಡದೊಡನೆ ಚಿತ್ರನಟ ಅನಿರುದ್ದ್ ಚರ್ಚೆ ನಡೆಸಿದ್ದಾರೆ. ಬೆಂಗಳೂರು ನಗರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಅನಿರುದ್ದ್, ಬಿಬಿಎಂಪಿ ಎದುರು ಕೆಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ. ಘನತ್ಯಾಜ್ಯ ನಿರ್ವಹಣೆ, ಸುರಕ್ಷತೆ, ಹಸಿರು ಹೊದಿಕೆಯ ಹೆಚ್ಚಳ ಮತ್ತು ಆರೋಗ್ಯ ಹಾಗೂ ನೈರ್ಮಲ್ಯ, ಕೆರೆಗಳ ಪುನರುಜ್ಜೀವನ ಮುಂತಾದ ವಿಷಯಗಳ ಕುರಿತು ಸಮಾನ ಸಂಖ್ಯೆಯ ಮಹಿಳೆಯರನ್ನೊಳಗೊಂಡ ವಿಜ್ಞಾನಿಗಳು, ಇಂಜಿನಿಯರ್ ಗಳು, ನಗರ ಯೋಜಕರು, […]
ಮೂಲಮಂದಿರ ಚಲೋ ಅಭಿಯಾನ: ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಮಂಡ್ಯ: ಹಿಂದೂ ಸಂಘಟನೆಗಳು ಶನಿವಾರ ಕರೆ ನೀಡಿರುವ “ಮೂಲಮಂದಿರ ಚಲೋ” ಅಭಿಯಾನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸೆಕ್ಷನ್ 144 ಸಿಆರ್‌ಪಿಸಿ ಜಾರಿಯಾಗಿದ್ದು, ಜಾಮಿಯಾ ಮಸೀದಿಯ ಆವರಣದ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಎಂದು ಹೇಳಲಾಗುತ್ತಿರುವ ಜಾಮಿಯಾ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಹಿಂದೂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ “ಮೂಲಮಂದಿರ ಚಲೋ” ಎನ್ನುವ ಅಭಿಯಾನವನ್ನು ಕೈಗೊಂಡಿವೆ. ಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ […]
ಚರ್ಮರೋಗ ಪೀಡಿತನ ಆಧಾರ್ ಕಾರ್ಡ್ ಸಮಸ್ಯೆಗೆ ಒಂದೇ ಟ್ವೀಟ್ ನಿಂದ ದೊರಕಿತು ನಾಲ್ಕೇ ದಿನಗಳಲ್ಲಿ ಪರಿಹಾರ!

ಮಂಡ್ಯ : ಬಗೆಯರಿಯದೇ ಉಳಿದಿದ್ದ ಆಧಾರ್ ಕಾರ್ಡ್ ಸಮಸ್ಯೆಯೊಂದು ಕೇವಲ ಒಂದೇ ಟ್ವೀಟ್ ನಿಂದ ನಾಲ್ಕೇ ದಿನಗಳಲ್ಲಿ ಬಗೆಹರಿದಿದೆ. ಮಂಡ್ಯದ ತಂಡಸನಹಳ್ಳಿಯ ನೂತನ್ ಎನ್ನುವ ಯುವಕ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದು, ಆತನ ಆಧಾರ್ ಕಾರ್ಡ್ ಲಭ್ಯವಿರಲಿಲ್ಲವಾದ್ದರಿಂದ ಆತನಿಗೆ ಸರಕಾರದ ಯಾವುದೇ ಸವಲತ್ತುಗಳು ದೊರೆಯುತ್ತಿರಲಿಲ್ಲ. ನೂತನ್ ನ ಈ ಸಮಸ್ಯೆಯ ಬಗ್ಗೆ ಯುವ ರೈತ ಮುಖಂಡ, ‘ಸಾವಯವ ಮಂಡ್ಯ’ದ ಸಿಇಒ ಮತ್ತು ಸಂಸ್ಥಾಪಕ ಮಧುಚಂದನ್ ಎಸ್ ಸಿ ಗಮನಹರಿಸಿದ್ದಾರೆ. ಮಧುಚಂದನ್ ಈ ಬಗ್ಗೆ ಟ್ವೀಟ್ ಮಾಡಿ ನೂತನ್ […]