ಕಳೆದುಹೋದ ಮೊಬೈಲ್ ವಾಪಸಾತಿ: ದೇಶದಲ್ಲೇ ಕರ್ನಾಟಕಕ್ಕೆ ಅಗ್ರಸ್ಥಾನ

ಬೆಂಗಳೂರು: ಕಳೆದುಹೋದ ಮೊಬೈಲ್ ಫೋನ್ಗಳನ್ನು ಕಂಡುಹಿಡಿಯುವಲ್ಲಿ ಮತ್ತು ಮರುಪಡೆಯುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. CEIR ಪೋರ್ಟಲ್ನಲ್ಲಿ ಮೊಬೈಲ್ ಸಾಧನಗಳ ನವೀಕರಣದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. CEIR (ಸೆಂಟ್ರಲ್ ಈಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟ್ರಿ) ಪೋರ್ಟಲ್ನಲ್ಲಿ 2,06,905 ಲಕ್ಷ ಮೊಬೈಲ್ ಫೋನ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 89,794 ಸೆಲ್ ಫೋನ್ಗಳ ಉಲ್ಲೇಖಗಳು ಕಂಡುಬಂದಿವೆ. ಪೊಲೀಸರು 29,550 ಮೊಬೈಲ್ ಗಳನ್ನು ಪತ್ತೆ ಮಾಡಿದ್ದಾರೆ. ಇದರಿಂದ ಕದ್ದ ಮೊಬೈಲ್ ಫೋನ್ ಗಳನ್ನು ವಾಪಸ್ ಪಡೆಯುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ.
ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜಧಾನಿಯು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವಾಗಲೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂಬ ವಿರೋಧ ಪಕ್ಷದ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಪ್ರತಿಪಕ್ಷಗಳ ಆರೋಪ ಸುಳ್ಳು ಎಂದ ಸಿದ್ದರಾಮಯ್ಯ, ತಮಿಳುನಾಡಿಗೆ ಒಂದು ಹನಿ ನೀರು ಬಿಟ್ಟಿಲ್ಲ ಎಂದಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಹೇಳಿಕೆಗಳೆಲ್ಲವೂ ಸುಳ್ಳು. ಈ ಪರಿಸ್ಥಿತಿಯಲ್ಲಿ ನೀರನ್ನು ಯಾರು ಬಿಡುತ್ತಾರೆ? ತಮಿಳುನಾಡಿಗೆ ಒಂದು ಹನಿ ನೀರು ಕೊಡಲು ಸಾಧ್ಯವಿಲ್ಲ. ತಮಿಳುನಾಡು ನೀರು ಬಿಡುವಂತೆ ಕೇಳಿಲ್ಲ, ಕರ್ನಾಟಕಕ್ಕೆ ಯಾರೂ ಸೂಚನೆ ನೀಡಿಲ್ಲ […]
ರಾಜ್ಯದಲ್ಲಿ ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿಗೆ ನಿಷೇಧ; ಗೋಬಿ ಮಂಚೂರಿಗೆ ಬಣ್ಣ ಬಳಸಿದರೆ ಕಾನೂನು ಕ್ರಮ

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನಲ್ಲಿ ರೋಡಮೈನ್-ಬಿ ಆಹಾರ ಬಣ್ಣ ಏಜೆಂಟ್ ಅನ್ನು ನಿಷೇಧಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟನ್ ಕ್ಯಾಂಡಿ ಮಾರಾಟ, ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು […]
ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದ ಸ್ನೇಹ ಸಮ್ಮಿಲನ

ಮುಂಬೈ: ಬಂಟರ ಪ್ರತಿಷ್ಟಿತ ಸಂಸ್ಥೆ ಮೀರಾ ಡಹಾಣೂ ಬಂಟ್ಸ್ ಇದರ ಪಾಲ್ಘರ್ ಬೊಯಿಸರ್ ವಿಭಾಗದಿಂದ ಮಾ. 09 ಮಾರ್ಚ್ ರಂದು ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು. ಬೊಯಿಸರ್ ನ ಪ್ರೀಮಿಯಮ್ ಹೋಟೆಲ್ ರೆಯಾಂಶ್ ಪ್ರೈಡ್ ನಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ವಿರಾರ್ ನಲ್ಲಿ ಕಳೆದ ತಿಂಗಳು ಜರಗಿದ ಸಂಸ್ಥೆಯ ಕ್ರೀಡಾ ಉತ್ಸವದಲ್ಲಿನ ವಿಜೇತ ಸದಸ್ಯರನ್ನು ಗೌರವಿಸಲಾಯಿತು ಹಾಗೂ ಇತ್ತೀಚೆಗೆ ಸರಾವಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದಲತಾ ಜಗದೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟೀ […]
ಬಾಂಬೆ ಮಿಠಾಯಿ ಬಳಿಕ ಕೃತಕ ರಾಸಾಯನಿಕ ಬಳಸಿದ ಗೋಬಿ ಮಂಚೂರಿ ಮಾರಾಟಕ್ಕೂ ನಿಷೇಧ? ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ನೆರೆಯ ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಿಷೇಧಿಸಲಾಗಿರುವ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ರಾಜ್ಯದಲ್ಲೂ ನಿಷೇಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದ್ದು ವರದಿ ಆರೋಗ್ಯ ಇಲಾಖೆ ಕೈ ಸೇರಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್-ಬಿ’ ಹಾಗೂ ಗೋಬಿ ಮಂಚೂರಿಯಲ್ಲಿ’ಸನ್ಸೆಟ್ ಯೆಲ್ಲೊ’ ಬಣ್ಣ ಮತ್ತು ‘ಟಾಟ್ರಾಜಿನ್’ ರಾಸಾಯನಿಕ ಅಂಶ […]