ತೆರೆಮರೆಯ ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಬೆಂಗಳೂರು: ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿದ್ದು, ಪದ್ಮ ಪ್ರಶಸ್ತಿ ಮಾದರಿಯಲ್ಲಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲೂ ಹೊಸತನವನ್ನು ಮೆರೆದಿದ್ದು, ಸಾಮಾನ್ಯರಾಗಿದ್ದುಕೊಂಡು ಅಸಾಮಾನ್ಯ ಕೆಲಸ ಮಾಡಿದವರು, ಸಮಾಜದ ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದವರು, […]

ಹಿರಿಯ ಕಲಾವಿದೆ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ

ಬೆಂಗಳೂರು: ಹಿರಿತೆರೆ ಮತ್ತು ಕಿರುತೆರೆಯ ಹಿರಿಯ ಕಲಾವಿದೆ ವಿನಯ್ ಪ್ರಸಾದ್ ಮನೆಯಲ್ಲಿ ಕಳ್ಳತನವಾಗಿರುವುದಾಗಿ ವರದಿಯಾಗಿದೆ. ವಿನಯ್ ಪ್ರಸಾದ್ ಮತ್ತು ಅವರ ಪರಿವಾರದವರು ಮನೆಯಲ್ಲಿಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ಕಳ್ಳರುಮಲಗುವ ಕೋಣೆಯಲ್ಲಿಟ್ಟಿದ್ದ 7 ಸಾವಿರ ರೂಪಾಯಿನಗದು ಎಗರಿಸಿದ್ದಾರೆ. ಇತರ ವಸ್ತುಗಳು ಕಳವಾಗಿರುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದ್ದು, ಕಳ್ಳತನಕ್ಕೆ ಸಂಬಂಧಿಸಿ ನಟಿ ವಿನಯ ಪ್ರಸಾದ್ ರವರು ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಪಿಗೆ ತೆರಳಿದ್ದ ವೇಳೆ ಕಳ್ಳತನ ನಟಿ ವಿನಯ್ ಪ್ರಸಾದ್ ಮತ್ತು ಪತಿ ಜ್ಯೋತಿ […]

ಅಕ್ಷತಾ ಮೂರ್ತಿ: ಇನ್ಫೋಸಿಸ್ ನಿಂದ ಇಂಗ್ಲೆಡ್ ನ ಪ್ರಥಮ ಮಹಿಳೆಯವರೆಗಿನ ಪಯಣ

ಭಾರತೀಯ ಬಿಲಿಯನೇರ್ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸಮಾಜ ಸೇವಕಿ ಹಾಗೂ ಲೇಖಕಿ ಸುಧಾ ಮೂರ್ತಿ ದಂಪತಿಗಳ ಮಗಳಾದ ಅಕ್ಷತಾ ಮೂರ್ತಿ 1980 ರಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು. ಅಕ್ಷತಾ ಮೂರ್ತಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸಾಧಾರಣ ಹುಡಿಗಿಯಂತೆಯೆ ಬೆಳೆದರು. ಮೂರ್ತಿ ದಂಪತಿಗಳು ಮುಂಬೈನಲ್ಲಿ ತಮ್ಮ ವೃತ್ತಿಜೀವನವನ್ನು ನಿರ್ಮಿಸುವುದರಲ್ಲಿ ವ್ಯಸ್ತವಾದ್ದರಿಂದ ಅಕ್ಷತಾ ಆರಂಭದ ದಿನಗಳನ್ನು ತನ್ನ ಅಜ್ಜಿ ಮನೆಯಲ್ಲಿಯೆ ಕಳೆದಿದ್ದಾರೆ. ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ ಅಕ್ಷತಾ, ಉನ್ನತ […]

ಹಾಸನ: ನೆಲಕ್ಕುರುಳಿದ ಮೋಟಾರ್ ಬೈಕ್; ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರದಂದು ಮೋಟರ್ ಬೈಕ್ ಹಿಂಬದಿ ಸವಾರಳಾಗಿದ್ದ 11 ವರ್ಷದ ಶಾಲಾ ಬಾಲಕಿಯೊಬ್ಬಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಗುರುವಾರ ಸಂಭವಿಸಿದೆ. ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಹೆಗ್ಗದಗೆರೆ ನಿವಾಸಿ ರಂಜಿತಾ ತನ್ನ ಸಂಬಂಧಿಯೊಬ್ಬರ ಬೈಕಿನಲ್ಲಿ ಹಿಂಬದಿ ಸವಾರಳಾಗಿ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರೀ ಮಳೆಯ ಕಾರಣದಿಂದ ಇಲ್ಲಿನ ದಡ್ಡಿಹಳ್ಳಿಯ ಕೆರೆಯ ನೀರು ಉಕ್ಕೇರಿ ಹರಿದ ಪರಿಣಾಮ ಬೈಕ್ ನೆಲಕ್ಕೆ ಉರುಳಿದೆ. ಇದನ್ನು ಕಂಡ ಗ್ರಾಮಸ್ಥರು ಬೈಕ್ ಚಾಲಕನನ್ನು ರಕ್ಷಿಸಿದ್ದಾರೆ ಆದರೆ ದುರಾದೃಷ್ಟವಶಾತ್ ಬಾಲಕಿ […]

ಆಗ ಪೇಸಿಎಂ; ಈಗ ಸೇಸಿಎಂ: ಸರಕಾರದ ವಿರುದ್ದ ಕಾಂಗ್ರೆಸ್ ನಿಂದ ಮತ್ತೊಂದು ಅಸ್ತ್ರ

ಬೆಂಗಳೂರು: ‘ಪೇಸಿಎಂ’ ಅಭಿಯಾನದ ನಂತರ, ಕಾಂಗ್ರೆಸ್‌ನ ಕರ್ನಾಟಕ ಘಟಕವು ಪ್ರತಿಪಕ್ಷಗಳು ಕೇಳಿದ 50 ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳಿಂದ ಉತ್ತರವನ್ನು ಕೋರಿ ‘ಸೇಸಿಎಂ’ ಅಭಿಯಾನವನ್ನು ಪ್ರಾರಂಭಿಸಿದೆ. ಕ್ಯೂಆರ್ ಕೋಡ್ ಸ್ವರೂಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಛಾಯಾಚಿತ್ರದೊಂದಿಗೆ ಪೇಸಿಎಂ ಅಭಿಯಾನದ ಅದೇ ಗ್ರಾಫಿಕ್ ಅನ್ನು ಪ್ರಚಾರಕ್ಕೆ ಬಳಸಲಾಗಿದೆ. “ಸೇಸಿಎಂ 90% ಈಡೇರಿಸಲಾಗಿಲ್ಲ”, “ಸಿಎಂ ಮಾತನಾಡಲು ನಾವು ಪೇಸಿಎಂ ಮಾಡಬೇಕೇ” ಎಂದು ಪ್ರಶ್ನಿಸಲಾಗಿದೆ. ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳಲ್ಲಿ ಶೇ 10 ರಷ್ಟನ್ನು ಕೂಡಾ ಈಡೇರಿಸಲು […]