ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಬೇಡಿಕೆ ಸಲ್ಲಿಸಿದ ಕುಪ್ಮಾ ಆಡಳಿತ ಮಂಡಳಿ ಪದಾಧಿಕಾರಿಗಳು

ಬೆಂಗಳೂರು: ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಪ.ಪೂ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾಡಬೇಕಾದ ಕೆಲವು ಬದಲಾವಣೆಗಳು ಹಾಗೂ ಇನಿತರ ವಿಷಯಗಳ ಕುರಿತಂತೆ ಬೆಂಗಳೂರಿನ ಸಮಗ್ರ ಶಿಕ್ಷಣದ ಸಭಾಂಗಣದಲ್ಲಿ ಸುದೀರ್ಘ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಹೆಚ್ಚುವರಿ ಕಾರ್ಯದರ್ಶಿ ಚಂದ್ರಶೇಖರ್, ಪಪೂ ಶಿಕ್ಷಣಾ ಇಲಾಖೆಜಂಟಿ […]
ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಸಮಿತಿಯ ಕಾರ್ಯಕಾರಿಣಿ ಸಭೆಯು ಕೆ.ಪಿ.ಸಿ.ಸಿ ಕಛೇರಿ ರೇಸ್ ಕೋರ್ಸ್ ಬೆಂಗಳೂರು ಇಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಮಾತನಾಡಿ, ರಾಜ್ಯದಲ್ಲಿ ಮುಂಬರುವ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಪ್ರತಿ ಕುಟುಂಬಕ್ಕೂ ಮಾಸಿಕ ಕರೆಂಟ್ 200 ಯುನಿಟ್ ಉಚಿತವಾಗಿ ನೀಡುವುದು ಹಾಗೂ ಪ್ರತಿ ತಿಂಗಳು ಮನೆಯ ಹೆಣ್ಣು ಮಕ್ಕಳಿಗೆ ಸಂಸಾರ ನಡೆಸಲು 2000 […]
ಸಾಹಸಸಿಂಹ ಕನ್ನಡ ಚಿತ್ರ ರಸಿಕರ ನೆಚ್ಚಿನ ನಟ ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ

ಮೈಸೂರು: ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಡಾ.ವಿಷ್ಣುವರ್ಧನ್ ಸ್ಮಾರಕ ಭವನದ ಉದ್ಘಾಟನೆಯು ಭಾನುವಾರ ನಡೆಯಿತು. ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸ್ವಭಾವತಃ ಭಾವುಕ ಹಾಗೂ ಮಾನವೀಯತೆಯ ಗುಣಗಳುಳ್ಳ ಜೀವಿಯಾಗಿದ್ದ ವಿಷ್ಣುವರ್ಧನ್, ತೆರೆಯ ಮೇಲಿನ ಅವರ ಚಿತ್ರಗಳಲ್ಲಿಯೂ ಸಹ ಅದೇ ಗುಣಗಳುಳ್ಳ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಮಾನವೀಯತೆಯ ಗುಣಗಳನ್ನು ತುಂಬಿದ್ದ ಯಜಮಾನರಾಗಿರಾದ್ದರು. ಅವರು ಸ್ಮಾರಕ ವಿಚಾರದಲ್ಲಿ ಹಲವಾರು ಅಡೆತಡೆಗಳು ಬಂದರೂ, ಕೊನೆಗೂ ವಿಷ್ಣುವರ್ಧನ್ ರವರ ಹುಟ್ಟೂರು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಗೊಂಡು ಲೋಕಾರ್ಪಣೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು. […]
ಬೆಂಗಳೂರಿನ 8 ರ ಪೋರನಿಗೆ ನಾವೀನ್ಯತೆ ಕ್ಷೇತ್ರಕ್ಕಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ

ನವದೆಹಲಿ: ಅತ್ಯಂತ ಕಿರಿಯ ವಯಸ್ಸಿನ 180 ರ ಅಸಾಧಾರಣ ಐಕ್ಯೂ ಹೊಂದಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್ ಹಾಗೂ “ಎಲಿಮೆಂಟ್ ಆಫ್ ಅರ್ಥ್” ಪುಸ್ತಕದ ಲೇಖಕ, ಕರ್ನಾಟಕದ ಬೆಂಗಳೂರಿನ ಬಾಲ ಪ್ರತಿಭೆ ರಿಷಿ ಶಿವ ಪ್ರಸನ್ನ, ಭಾರತದ 40 ಯುವ ಐಕಾನ್ ಗಳಲ್ಲಿ ಒಬ್ಬರಾಗಿ ಭಾರತದ ಸಂಸ್ಕೃತಿ ಸಚಿವಾಲಯದಿಂದ ಆಯ್ಕೆಯಾಗಿದ್ದಾರೆ. ನಾವೀನ್ಯತೆ ಕ್ಷೇತ್ರಕ್ಕಾಗಿ ರಿಷಿ ಶಿವ ಪ್ರಸನ್ನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ -2023 ಅನ್ನು ಪಡೆದುಕೊಂಡಿದ್ದಾರೆ. ರಿಷಿ ಅತ್ಯಂತ ಕಿರಿಯ ಯೂಟ್ಯೂಬರ್ ಆಗಿದ್ದಾರೆ ಮತ್ತು ಪ್ರತಿ ಸಂಚಿಕೆಯಲ್ಲಿ […]
ಬೆಂಗಳೂರು: ಕೆಆರ್ ಮಾರುಕಟ್ಟೆ ಫ್ಲೈಓವರ್ ಮೇಲಿಂದ 10 ರೂ ಮುಖಬೆಲೆ ನೋಟು ಎಸೆದ ವ್ಯಕ್ತಿ; ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಇಲ್ಲಿನ ಕೆಆರ್ ಮಾರುಕಟ್ಟೆಯ ಫ್ಲೈಓವರ್ ಮೇಲಿನಿಂದ ವ್ಯಕ್ತಿಯೊಬ್ಬ ಹಣ ಎಸೆದಿರುವ ಘಟನೆ ಮಂಗಳವಾರದಂದು ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಕಪ್ಪು ಶರ್ಟ್ ಧರಿಸಿರುವ ಫ್ಲೈಓವರ್‌ನಲ್ಲಿದ್ದ ಅರುಣ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಹಣವನ್ನು ಎಸೆಯುತ್ತಿರುವುದು ಕಂಡುಬಂದಿದೆ. ಆತ ಎಸೆದ ಹಣದಲ್ಲಿ 10 ರೂಪಾಯಿ ಮುಖಬೆಲೆಯ ನೋಟುಗಳಿದ್ದವು. ಕೂಡಲೇ ಫ್ಲೈಓವರ್ ಕೆಳಗೆ ಜಮಾಯಿಸಿದ ಜನರು ನೋಟುಗಳನ್ನು ಹೆಕ್ಕಲು ಆರಂಭಿಸಿದರು. ಹಣ ಹೆಕ್ಕುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಇದರಿಂದಾಗಿ ಕೆಲ ನಿಮಿಷಗಳ ಕಾಲ ವಾಹನ […]