ರಾಜ್ಯ ಸರ್ಕಾರ ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ: ಸಂಸದ ಕೋಟ

ಉಡುಪಿ: ಕಾಂತರಾಜ್ ವರದಿಯನ್ನು ಈ ಸರ್ಕಾರ ತಿರಸ್ಕರಿಸಲೂ ಇಲ್ಲ‌.. ಅಂಗೀಕರಿಸಿಯೂ ಇಲ್ಲ, ಈಗ ಮತ್ತೊಮ್ಮೆ ಹೊಸ ವರದಿಗೆ ಸಿದ್ದರಾಮಯ್ಯ ಸರ್ಕಾರ ಹೊರಟಿದೆ. 42 ರಿಂದ 50 ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದಾರೆ. ಇದರ ಬಗ್ಗೆ ನಮ್ಮ ಕಠಿಣವಾದ ವಿರೋಧ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲಿಂಗಾಯಿತ ಕ್ರಿಶ್ಚಿಯನ್ ,ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ,ಈಡಿಗ ಕ್ರಿಶ್ಚಿಯನ್ ,ಮಡಿವಾಳ ಕ್ರಿಶ್ಚಿಯನ್‌..ಹೀಗೆ ಜಾತಿಯ ಜೊತೆ […]

ಉಡುಪಿ:ಒಮಾನ್, ಮಸ್ಕತ್ ನಲ್ಲಿ ಪ್ರಪ್ರಥಮ ಬಾರಿಗೆ ಪ್ರಥಮ್ ಕಾಮತ್ ಜಾದೂ ಪ್ರದರ್ಶನ

ಉಡುಪಿ:ಕಟಪಾಡಿ ಯ ಯುವ ಕಲಾವಿದ, ಜಾದೂಗಾರ ಪ್ರಥಮ್ ಕಾಮತ್ ಇವರ ಜಾದೂ ಪ್ರದರ್ಶನ ಮಸ್ಕತ್ ನಲ್ಲಿ ಸೆಪ್ಟೆಂಬರ್ 19 ರಂದು ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಒಮಾನ್ ಮಸ್ಕತ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿದೆ.ಒಮಾನ್ ಘಟಕದ ಅಧ್ಯಕ್ಷರಾದ ಶ್ರೀ ಶಿವಾನಂದ ಕೋಟ್ಯಾನ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಥಮ್ ಕಾಮತ್ ಪ್ರಸ್ತುತ MAHE ಯಲ್ಲಿ optometry ಕಲಿಯುತ್ತಿದ್ದು,ಇವರು ಜಾದೂ ಕಲೆಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಸತೀಶ್ ಹೆಮ್ಮಾಡಿ ಬಳಿ ಕಲಿಯುತ್ತಿದ್ದಾರೆ.ಮಸ್ಕತ್ ಘಟಕದ ಉದ್ಘಾಟನಾ ಸಮಾರಂಭ ಬಳಿಕ ಮಧ್ಯಾಹ್ನ 3ಗಂಟೆಗೆ ಸ್ಕೂಲ್ ಲೀಡರ್ […]

ವಿಜಯಪುರ: ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಕೋಟಿಗಟ್ಟಲೇ ಲೂಟಿ!

ವಿಜಯಪುರ: ನೆರೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಅಂದಾಜು ₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಬ್ಯಾಂಕಿನ ಸಿಬ್ಬಂದಿ, ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.ಆದರೆ, ಖಚಿತ ಮಾಹಿತಿ ಇನ್ನೂ ಲಭಿಸಿಲ್ಲ. ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ […]

ವಿರೋಧ ಪಕ್ಷದ ಸದಸ್ಯರ ಕ್ಷೇತ್ರ ಅಭಿವೃದ್ದಿಗೆ ರೂ.25 ಕೋಟಿ ಬಿಡುಗಡೆಗೊಳಿಸಿದ ರಾಜ್ಯ ಸರಕಾರ

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ಸದಸ್ಯರ ಕ್ಷೇತ್ರದ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗುತ್ತಿದ್ದು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಡಿ ಬರುವ ರಸ್ತೆ, ಸೇತುವೆ ಹಾಗೂ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ನಗರ ಪ್ರದೇಶ ಕಾಮಗಾರಿಗಳಿಗೆ 18.75 ಕೋಟಿ ರೂ. ಬಿಡುಗಡೆ. ಅದೇ ರೀತಿ, ವಿವೇಚನಾಧಿಕಾರದಡಿ ವಿಧಾನಸಭೆ ಸದಸ್ಯರು ಆಯ್ಕೆ ಮಾಡಬಹುದಾದ ಇತರ ಇಲಾಖೆ ಕಾಮಗಾರಿಗಳಿಗೆ 6.25 ಕೋಟಿ ರೂ. […]

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು (ಸೆ.16) ಕೊನೆಯ ದಿನ; ಕೂಡಲೇ ಸಲ್ಲಿಸಿ!

ಆದಾಯ ತೆರಿಗೆ ಇಲಾಖೆಯು 2025-26 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಅಂತಿಮ ದಿನ ಮತ್ತು ಗಡುವನ್ನು ಒಂದು ದಿನಕ್ಕೆ ವಿಸ್ತರಣೆ ಮಾಡಿದೆ. ಜ.31 ರಂದು ನಿಗದಿಯಾಗಿದ್ದ ದಿನಾಂಕವನ್ನು 2025ರ ಸೆಪ್ಟೆಂಬರ್ 15 ರವರೆಗೆ ಈ ಹಿಂದೆ ವಿಸ್ತರಿಸಲಾಗಿದೆ. ಇದೀಗ ಸೆ.16ರಂದು ಅಂದರೆ ಇಂದು ಮಂಗಳವಾರ ಅಂತಿಮ ದಿನಾಂಕ ಎಂದು ಇಲಾಖೆ ತಿಳಿಸಿದೆ. ಇನ್ನು ಈ ಕುರಿತು ಆದಾಯ ತೆರಿಗೆ ಇಲಾಖೆಯ ತಮ್ಮ ಎಕ್ಸ್​ ಹ್ಯಾಂಡಲ್​ನಲ್ಲಿ ಸೆ.15 ರಾತ್ರಿ 11.48ಕ್ಕೆ ಪೋಸ್ಟ್ ಹಂಚಿಕೊಂಡಿದೆ. ಆದಾಯ […]