ಹೊಸ ವರ್ಷಕ್ಕೆ ಸರಕಾರಿ ಬಸ್ ಪ್ರಯಾಣಿಕರಿಗೆ ಶಾಕ್: ಟಿಕೆಟ್ ದರ ಹೆಚ್ಚಳ ಬೇಡಿಕೆಗೆ ಒಪ್ಪಿಗೆ

ಸರಕಾರದ ನಾಲ್ಕು ನಿಗಮದವರು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಲ್ಲಿಸಿದ ಬೇಡಿಕೆಗೆ ಸರಕಾಋ ಕೊನೆಗೂ ಒಪ್ಪಿಗೆ ನೀಡಿದ್ದು ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ […]
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ: ಡಿ.27 ರಂದು ಸರಕಾರಿ ರಜೆ ಘೋಷಣೆ.

ಬೆಂಗಳೂರು: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ, ಹಾಗೂ ಇಂದು (ಡಿ.27) ಸರಕಾರಿ ರಜೆ ಘೋಷಿಸಲಾಗಿದೆ. ಭಾರತ ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞರಲ್ಲಿ ಒಬ್ಬರು ಹಾಗೂ ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಗುರುವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 2004 ರಿಂದ 2014 ರವರೆಗೆ ಅವರು ದೇಶದ ಪ್ರಧಾನಿಯಾಗಿದ್ದರು.
ನಡೆದಾಡುವ ಪರಿಸರ ಮಾತೆ, ತುಳಸೀ ಗೌಡ ಇನ್ನಿಲ್ಲ: ಹಸಿರಿನಲ್ಲಿ ಕೊನೆಯುಸಿರೆಳೆದ ಹಿರಿಯ ಜೀವ

ನಡೆದಾಡುವ ಪರಿಸರ ಮಾತೆ, ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ವೃಕ್ಷಮಾತೆ, ನಡೆದಾಡುವ ಜ್ಞಾನಕೋಶ ಎಂದೇ ಖ್ಯಾತರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಗಟ್ಟಲೇ ಗಿಡಗಳಿಗೆ ಜೀವ ನೀಡಿ ಮರವಾಗಿಸಿದ್ದರು. ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮರಗಳ ಜೊತೆಗೆ ನಿತ್ಯ ಬದುಕುತ್ತಿದ್ದ, ಅವುಗಳನ್ನು ಮಕ್ಕಳಂತೆ […]
ಮಂಗಳೂರು-ಕಾರ್ಕಳ ರಸ್ತೆಗಿಳಿಯಿತು ಸರಕಾರಿ ಬಸ್ಸು: ಜನತೆಯಿಂದ ಭರ್ಜರಿ ಸ್ವಾಗತ: ಇಲ್ಲಿದೆ ಬಸ್ ವೇಳಾಪಟ್ಟಿ!

ಮಂಗಳೂರು-ಕಾರ್ಕಳ: ಕಾರ್ಕಳ-ಮಂಗಳೂರು ದಾರಿಯಲ್ಲಿ ಸರಕಾರಿ ಬಸ್ಸು ಓಡಾಡಬೇಕು ಎನ್ನುವುದು ಇಲ್ಲಿನ ಜನರ, ವಿದ್ಯಾರ್ಥಿಗಳ ಬಹು ವರ್ಷಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆ ಬಂದ ಮೇಲಂತೂ ಸರಕಾರಿ ಬಸ್ಸನ್ನು ಈ ದಾರಿಯಲ್ಲಿ ಬಿಡಲೇಬೇಕು ಎನ್ನುವ ಆಗ್ರಹ ಜಾಸ್ತಿಯಾಗಿತ್ತು. ಈಗ ಸರಕಾರಿ ಬಸ್ಸಿನ ಕನಸು ಈಡೇರಿದೆ. ಡಿ.12 ಗುರುವಾರದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.ಇಷ್ಟು ದಿನ ಖಾಸಗಿ ಬಸ್ ಗಳ ಒತ್ತಡದಿಂದ ಸರಕಾರಿ ಬಸ್ಸು ರಸ್ತೆಗಿಳಿಯದೇ ಜನರು ಸಮಸ್ಯೆ ಅನುಭವಿಸಿದ್ದರು. ಖಾಸಗಿ ಬಸ್ಸು ಮಾಲೀಕರು ಶಾಸಕರಿಗೆ, […]
SM Krishna: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್ ಎಂ ಕೃಷ್ಣ ನಿಧನ

ಬೆಂಗಳೂರು: ಮಾಜಿ ಸಿಎಂ ಎಸ್. ಎಂ ಕೃಷ್ಣ (92) ಮಂಗಳವಾರ (ಡಿ.10 ರಂದು) ನಸುಕಿನ ಜಾವ 2:30ರ ವೇಳೆಗೆ ವಿಧಿವಶರಾಗಿದ್ದಾರೆ. ಕೆಲಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.