ಅಮೆರಿಕಾದಿಂದ ಸುಮಾರು 2,417 ಮಂದಿ ಭಾರತೀಯರು ಗಡಿಪಾರು: ವಿದೇಶಾಂಗ ಇಲಾಖೆ ಹೇಳಿಕೆ

ಹೊಸದಿಲ್ಲಿ: ಈ ವರ್ಷದ ಜನವರಿ ತಿಂಗಳಿನಿಂದೀಚೆಗೆ 2,417 ಭಾರತೀಯ ಪ್ರಜೆಗಳು ಅಮೆರಿಕದಿಂದ ಗಡಿಪಾರಾಗಿದ್ದಾರೆ ಅಥವಾ ಸ್ವದೇಶಕ್ಕೆ ವಾಪಸಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ ಜೈಸ್ವಾಲ್ ಶುಕ್ರವಾರ ತಿಳಿಸಿದ್ದಾರೆ. ಕಾನೂನಾತ್ಮಕ ಮಾರ್ಗಗಳ ಮೂಲಕ ವಲಸೆಯನ್ನು ಭಾರತ ಉತ್ತೇಜಿಸುತ್ತದೆ. ಭಾರತವು ಅಕ್ರಮ ವಲಸೆಗೆ ವಿರುದ್ಧವಾಗಿದೆ ಎಂದು ಜೈಸ್ವಾಲ್‌ ಹೇಳಿದರು. ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲ್ಪಟ್ಟವರ ರಾಷ್ಟ್ರೀಯತೆಯನ್ನು ಸರಕಾರವು ದೃಢೀಕರಿಸಿಕೊಳ್ಳಲಿದೆ ಎಂದವರು ಹೇಳಿದ್ದಾರೆ.

ಡಿಜಿಟೆಲ್ ಪಾವತಿಗೆ RBI ನಿಂದ ಬಂತು ಹೊಸ ರೂಲ್ಸ್!

ಡಿಜಿಟಲ್​ ಪಾವತಿ ವ್ಯವಸ್ಥೆಯಲ್ಲಿ ಒಟಿಪಿಯಲ್ಲದೇ ಎರಡು ಹಂತದ ದೃಢೀಕರಣದ ಮಾನದಂಡವನ್ನು ಅನುಸರಿಸುವಂತೆ 2026ರ ಏಪ್ರಿಲ್​ 1ರಂದು ಜಾರಿಗೊಳಿಸುವುದಾಗಿ ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ(ಆರ್​ಬಿಐ) ಗುರುವಾರ(ಸೆ.24) ಘೋಷಿಸಿದೆ. ಇದೀಗ ಪ್ರಸ್ತುತ, ಸದ್ಯದ ಎಲ್ಲಾ ಡಿಜಿಟಲ್ ಪಾವತಿಗಳು ಹೆಚ್ಚುವರಿ ಅಂಶವಾಗಿ SMS ಆಧಾರಿತ ಒಂದು-ಬಾರಿ ಪಾಸ್‌ವರ್ಡ್‌ಗಳನ್ನು (OTP ಗಳು) ಮಾತ್ರ ಅವಲಂಬಿಸಿವೆ. 2026ರ ಏಪ್ರಿಲ್​ 1ರಿಂದ ಒಟಿಪಿ ಜತೆ ಎರಡು ಹಂತದ ದೃಢೀಕರಣವನ್ನು ಕಡ್ಡಾಯಗೊಳಿಸಲಿದೆ. ಆರ್‌ಬಿಐ ನಿರ್ದಿಷ್ಟ ವಿಧಾನಗಳನ್ನು ಕಡ್ಡಾಯಗೊಳಿಸದಿದ್ದರೂ, ಸಾಮಾನ್ಯವಾಗಿ ಬಳಕೆದಾರರಿಗೆ ತಿಳಿದಿರುವ ಪಾಸ್‌ವರ್ಡ್, ಪಿನ್‌, ಕಾರ್ಡ್, ಫಿಂಗರ್‌ಪ್ರಿಂಟ್ […]

ಸೆಪ್ಟೆಂಬರ್ 28 ರಿಂದ ಕನ್ನಡದಲ್ಲಿ ‘ಬಿಗ್ ಬಾಸ್’ ಅಬ್ಬರ: ಈ ಬಾರಿ ಕಿಚ್ಚ ಸುದೀಪ್‌ ನಿರೂಪಣೆ!

‘ಬಿಗ್‌ಬಾಸ್‌’ ಕನ್ನಡ ಸೀಸನ್‌ 12 ಸೆಪ್ಟೆಂಬರ್‌ 28ರಿಂದ ಶುರುವಾಗಲಿದೆ ಎಂದು ಕಲರ್ಸ್‌ ಕನ್ನಡ ಈಗಾಗಲೇ ದೃಢಪಡಿಸಿದೆ. ಕಿಚ್ಚ ಸುದೀಪ್‌ ಅವರೇ ಈ ಬಾರಿಯೂ ನಿರೂಪಣೆ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಯಾವೆಲ್ಲಾ ಕಂಟೆಸ್ಟೆಂಟ್‌ ಈ ಬಾರಿ ಬಿಗ್‌ ಬಾಸ್‌ ಮನೆಗೆ ಹೋಗಬಹುದು ಎಂಬ ಪ್ರಶ್ನೆ ಮಾತ್ರ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಇದರ ನಡುವೆ ಈ ಬಾರಿ ಬಿಗ್‌ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್‌ ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಇದೀಗ ಕಲರ್ಸ್​ ಕನ್ನಡ ಬುಧವಾರ […]

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನ

ಬೆಂಗಳೂರು: ಹಿರಿಯ ಸಾಹಿತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ(94) ಬುಧವಾರ ಅಪರಾಹ್ನ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಂಶ ವೃಕ್ಷ, ನಾಯಿ ನೆರಳು, ಪರ್ವ, ಗೃಹಭಂಗ, ಗ್ರಹಣ, ಉತ್ತರಾಖಂಡ ಸೇರಿದಂತೆ 25 ಕಾದಂಬರಿಗಳನ್ನು ಬರೆದಿರುವ ಭೈರಪ್ಪನವರು, ಪದ್ಮಭೂಷಣ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಭೈರಪ್ಪರ ಕೃತಿಗಳುಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ […]

ಅಧಿಕಾರಿಗಳ ಫಾರಿನ್ ಟೂರ್ ಗೆ ರಾಜ್ಯ ಸರ್ಕಾರದಿಂದ ಬ್ರೇಕ್!

ಬೆಂಗಳೂರು: ಸರಕಾರಿ ಖರ್ಚಿನಲ್ಲಿ ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅದರ ವರದಿ ಸಲ್ಲಿಸದ ಕಾರಣಕ್ಕಾಗಿ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ರಾಜ್ಯ ಸರಕಾರ ಬ್ರೇಕ್‌ ಹಾಕಿದೆ. 2024ರ ಆಗಸ್ಟ್‌ ನಿಂದ 2025ರ ಜುಲೈವರೆಗೆ ರಾಜ್ಯ ಸರಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಅಧಿಕೃತ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ, ಕಲಿಕೆ ಹಾಗೂ ಶಿಫಾರಸುಗಳೊಂದಿಗೆ ಸರಕಾರಕ್ಕೆ ಅಧ್ಯಯನ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸುವಂತೆ ಸಿಎಂ ಸೂಚಿಸಿದ್ದರು. ಆದರೆ ಹಲವು ಅಧಿಕಾರಿಗಳು ಕೈಗೊಂಡಿರುವ ಅಧಿಕೃತ ವಿದೇಶ ಪ್ರವಾಸದ ವರದಿಗಳನ್ನು ಸಲ್ಲಿಸದಿರುವುದು ಸರಕಾರದ ಗಮನಕ್ಕೆ […]