ರೋಹಿಣಿ ಸಿಂಧೂರಿ ಮಾನಹಾನಿ ಪ್ರಕರಣ: ಪ್ರಕರಣ ರದ್ದು ಕೋರಿ ರೂಪಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ತನ್ನ ವಿರುದ್ದ ಮಿಥ್ಯಾರೋಪ ಮಾಡಿರುವ ಕಾರಣ ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲು ಮಾಡಿದ್ದ ಮಾನಹಾನಿ ಕೇಸ್​​​ ವಿಚಾರದಲ್ಲಿ ಐಪಿಎಸ್​ ಅಧಿಕಾರಿ ಡಿ. ರೂಪಾ‌ ಮೌದ್ಗಿಲ್ ಗೆ ಹಿನ್ನಡೆಯಾಗಿದೆ. ಪ್ರಕರಣ ರದ್ದು ಕೋರಿ ರೂಪಾ ಹೈಕೋರ್ಟ್​​ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. 2023 ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಿದ್ದ ಮಾನಹಾನಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದ ಡಿ ರೂಪಾ ಅವರ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಾನನಷ್ಟ ಪ್ರಕರಣ ದಾಖಲು […]

ತೃತೀಯಲಿಂಗಿಗೆ ಮೊದಲ ಬಾರಿಗೆತೆಲಂಗಾಣದಲ್ಲಿ ಲಭಿಸಿದ ಪಿಜಿ ವೈದ್ಯಕೀಯ ಸೀಟು

ಹೈದರಾಬಾದ್:ತೆಲಂಗಾಣದ ತೃತೀಯಲಿಂಗಿ, 29 ವರ್ಷದ ಡಾ.ರುತ್ಪಾಲ್ ಜಾನ್ ತುಂಬಾ ಕಷ್ಟಪಟ್ಟು ಅಧ್ಯಯನ ಮಾಡಿದ್ದರಿಂದ ಮೊದಲ ಬಾರಿಗೆ ಸ್ನಾತಕೋತ್ತರ ಪದವಿಯ ವೈದ್ಯಕೀಯ ಸೀಟು ಲಭಿಸಿದೆ. ಖಮ್ಮಂ ನಿವಾಸಿ 29 ವರ್ಷದ ಡಾ.ರುತ್ಪಾಲ್ ಜಾನ್ ತುಂಬಾ ಕಷ್ಟಪಟ್ಟು ಅಧ್ಯಯನ ಮಾಡಿದರು. ಕಠಿಣ ಪರಿಶ್ರಮದಿಂದ ಎಂಬಿಬಿಎಸ್ ಮುಗಿಸಿ ಸದ್ಯ ಹೈದರಾಬಾದ್​ನ ಉಸ್ಮಾನಿಯಾ ಮೆಡಿಕಲ್ ಕಾಲೇಜಿನ ಎಆರ್​ಟಿ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹೊಂದಿರುವ ಬಡ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.ವೈದ್ಯಕೀಯ ಶಿಕ್ಷಣದಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಪಿಜಿ […]

ಗ್ರಾಮೀಣ ಬ್ಯಾಂಕ್ ಗಳಿಂದ ಸಾಲ ಪಡೆದ ರೈತರ ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಳ್ಳಾರಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಬೆಳೆಸಾಲ ಪಡೆದು ಸುಸ್ತಿದಾರರಾಗಿರುವ ರೈತರಿಗೆ ಓ.ಟಿ.ಎಸ್. (One Time Settlement) ಯೋಜನೆಯಡಿ ಅನುಕೂಲ ಕಲ್ಪಿಸುವ ಕುರಿತು ಬ್ಯಾಂಕಿನ ಮುಖ್ಯಸ್ಥರು, ನಬಾರ್ಡ್‌ ಹಾಗೂ ಪ್ರವರ್ತಕ ಬ್ಯಾಂಕ್‌ ಆದ ಕೆನರಾ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಅವರು ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕ ಬಿ.ಆರ್. ಪಾಟೀಲ ಹಾಗೂ ದರ್ಶನ್‌ ಪುಟ್ಟಣ್ಣಯ್ಯ […]

‘ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್​ ಪಾರ್ಕ್ ಡಿಸಿಎಂ ಡಿಕೆಶಿ, ನಟ ಶಿವ ರಾಜ್​ಕುಮಾರ್​​ ಅವರಿಂದ ಉದ್ಘಾಟನೆ

ಇದೀಗ ಈ ಇನ್ನೋವೇಟಿವ್​ ಫಿಲ್ಮ್​ ಸಿಟಿ ಸಂಪೂರ್ಣವಾಗಿ ಬದಲಾವಣೆ ಆಗುವ ಮೂಲಕ ಹೊಸ ರೂಪದಲ್ಲಿ ಜಾಲಿವುಡ್​ ಆಗಿ ಬದಲಾಗಿದೆ. ಈ ಪಾರ್ಕ್​ನಲ್ಲಿ 33 ಮುಖ್ಯ ಆಕರ್ಷಣೆಗಳಿವೆ. ವಾಟರ್​ ರೈಡ್​ಗಳಲ್ಲದೇ, ಡೈನೋ ಪಾರ್ಕ್​, 5 ರೆಸ್ಟೋರೆಂಟ್​ಗಳು, 2 ರೆಸ್ಟ್ರೋ ಪಬ್​ಗಳು..ಹೀಗೆ ಮನೆ ಮಂದಿಯೆಲ್ಲಾ ಜೊತೆಯಾಗಿ ಒಟ್ಟಿಗೆ ಕಾಲ ಕಳೆಯಲು ಸೂಕ್ತವಾದ ಸುಂದರ ತಾಣವಾಗಿದೆ. ಇನ್ನೋವೇಟಿವ್​ ಫಿಲ್ಮ್​ ಸಿಟಿ ಅಂದಾಕ್ಷಣ ನೆನಪಾಗುವುದು ವೀಕೆಂಡ್​ನಲ್ಲಿ ಫ್ಯಾಮಿಲಿ ಸಮೇತ ಅಡ್ವೆಂಚರ್ಸ್​, ಮಕ್ಕಳಿಗೆ ಮನರಂಜನೆ ಸಿಗುವ ಎಂಟರ್​ಟೈನ್​ಮೆಂಟ್​ ತಾಣ.’ಜಾಲಿವುಡ್ ಸ್ಟುಡಿಯೋಸ್ ಆಯಂಡ್ ಅಡ್ವೆಂಚರ್ಸ್’ ಥೀಮ್​ […]

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣ ರದ್ದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರವು ಭಾರತೀಯ ಸಂವಿಧಾನಕ್ಕೆ ಅನುಗುಣವಾಗಿ ಶಿಕ್ಷಣ ನೀತಿಯನ್ನು ಬದಲಾಯಿಸುತ್ತದೆ ಮತ್ತು ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ಪರಿಚಯಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಎನ್‌ಇಪಿ ಮೂಲಕ ಶಿಕ್ಷಣದಲ್ಲಿ ಆರ್‌ಎಸ್‌ಎಸ್ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ […]