ಕುಂದಾಪುರ: ಹಳ್ಳಿಗಾಡಿನ ಈ ಯುವಕ ವಿಶ್ವದ ಗಮನ ಸೆಳೆದ್ರು: ವಿಶ್ವನಾಥ ಗಾಣಿಗರ ಸಾಧನೆಯ ಕತೆ ಕೇಳಿ
-ಶ್ರೀಕಾಂತ ಹೆಮ್ಮಾಡಿ ಬಾಲ್ಯದಲ್ಲಿ ಕಿತ್ತುತಿನ್ನುವ ಬಡತನವೇ ತಮ್ಮ ಸಾಧನೆಗೆ ಅಡ್ಡಿಯಾಯಿತು ಎಂದು ಹೇಳುವ ಮಂದಿ ಹಲವರಿದ್ದಾರೆ. ಆದರೆ ಬಡತನಕ್ಕೆ ಸೆಡ್ಡು ಹೊಡೆದು ಅದ್ಭುತ ಕ್ರೀಡಾಳುವಾಗಿ ರೂಪುಗೊಂಡು ದೇಶದ ಗಮನವನ್ನೇ ಸೆಳೆದ ಈ ಹಳ್ಳಿಗಾಡಿನ ಯುವಕನ ಯಶೋಗಾಥೆಯನ್ನು ಕೇಳಿದರೆ ನೀವೂ ಕೂಡ ಶಹಬ್ಬಾಸ್ ಎನ್ನುತ್ತೀರಿ. ಹಾಗಾದರೆ ಯಾರು ಆ ಸಾಧಕ.. ಆತ ಮಾಡಿರುವ ಸಾಧನೆಯಾದರು ಏನು ಅಂತೀರಾ ಇಲ್ಲಿದೆ ಆ ಸಾಧಕನ ಯಶೋಗಾಥೆ. ಹಳ್ಳಿ ಹುಡುಗನ ಯಶೋಗಾಥೆ: ಇತ್ತೀಚೆಗಷ್ಟೇ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಅಥ್ಲೆಟಿಕ್ಸ್‌ನ ಪವರ್‌ಲಿಫ್ಟಿಂಗ್‌ನಲ್ಲಿ ಎರಡು ಚಿನ್ನ […]
ವೇಷ ಹಾಕಿ ರಂಜಿಸ್ತಾರೆ, ಮಾನವೀಯತೆಗೆ ಮಿಡಿತಾರೆ : ರವಿ ಕಟಪಾಡಿಯ ಮಾನವೀಯ ಮುಖ
(ಉಡುಪಿ XPRESS-ನಮ್ಮೂರ ಸ್ಪೆಷಲ್ ವ್ಯಕ್ತಿ) ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಸುಮಾರು ಮಂದಿ ವೇಷ ಧರಿಸಿ ಜನರನ್ನು ರಂಜಿಸುವುದು ಸರ್ವೇ ಸಾಮಾನ್ಯ. ಆದರೆ ಇದು ಕೇವಲ ಸಂಭ್ರಮಕ್ಕೆ ಸೀಮಿತವಾಗದೇ ಮಾನವೀಯ ನೆಲೆಯಲ್ಲೂ ಆಚರಿಸಬಹುದು ಎಂದು ತೋರಿಸಿಕೊಟ್ಟವರು ಮಾತ್ರ ರವಿ ಕಟಪಾಡಿ ಅನ್ನೋ ಹೆಮ್ಮೆಯ ಕಲಾವಿದ. ರವಿ ಕಟಪಾಡಿ ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವರು. ಕಟ್ಟಡ ಕಾರ್ಮಿಕರಾಗಿರುವ ಇವರು, ಬಡ ಕುಟುಂಬದಲ್ಲೇ ಬೆಳೆದರು. ಮಾನವೀಯತೆಗೆ ಮಿಡಿಯುವ ಈ ಕಲಾವಿದನ ಇನ್ನೊಂದು ಮುಖದ ಪರಿಚಯ ಇಲ್ಲಿದೆ. […]
ಈ ಯುವಕನ ಕೈಯಲ್ಲಿ ಅರಳುವ ಚಿತ್ರ ನೋಡಿದ್ರೆ ಬೆರಗಾಗ್ತೀರಿ! ಕಲೆಯ ಗಣಿ, ಬೈಲೂರಿನ ನಿಖಿತ್ ಆಚಾರ್ಯ
ಕಲೆ ಎನ್ನುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ.ಅದು ಆಸಕ್ತಿಯಿಂದ, ಸತತ ಪರಿಶ್ರಮದಿಂದ ನಮ್ಮಲ್ಲಿ ಹುಟ್ಟಿಕೊಂಡರೆ ಮಾತ್ರ ಅದನ್ನು ಲೋಕಕ್ಕೆ ತೆರೆದಿಡಲು ಸಾಧ್ಯ. ಚಿತ್ರಕಲೆಯೂ ಸಾಮಾನ್ಯವಾದುದಲ್ಲ. ಕಲ್ಪನೆಯಲ್ಲಿದ್ದದ್ದನ್ನು ಕಾಗದದಲ್ಲೋ, ಗೋಡೆಯಲ್ಲೋ ಬಣ್ಣದೊಂದಿಗೆ ಮೂಡಿಸುವ ಪ್ರತಿಭೆಗೆ ಅದರದ್ದೇ ಆದ ಘನತೆ ಇದೆ. ಇಲ್ಲೊಬ್ಬ ಗ್ರಾಮೀಣ ಭಾಗದ ಯುವಕನಿದ್ದಾನೆ. ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಅನ್ನಿಸಿಕೊಂಡು ಕಲೆಯನ್ನು ತನ್ನ ಬದುಕಿನ ಭಾಗವಾಗಿಸಿಕೊಂಡ ಈ ಯುವಕ ತಾನು ಮಾಡುವ ಚೆಂದ ಚೆಂದದ ಚಿತ್ರಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಚಿತ್ರಕಲೆಯ ಅಪ್ಪಟ ಪ್ರತಿಭೆಯೇ ಬೈಲೂರಿನ ನಿಖಿತ್ ಆಚಾರ್ಯ, ಕಾಂತರಗೋಳಿ. […]
ಭರವಸೆ ಮೂಡಿಸ್ತಿದೆ ಶ್ರೀಕಾಂತರ ಯಕ್ಷ ಧೀಂಗಿಣ: ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ ಯುವ ಕಲಾವಿದನ ಕತೆ ಕೇಳಿ.
ಕರಾವಳಿಯ ಗಂಡುಕಲೆಯಾದ ಯಕ್ಷಗಾನವು ಇತರ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿದ್ದು ತನ್ನದೇ ಆದ ವೈಶಿಷ್ಟ್ಯತೆಯಿಂದ ಎಲ್ಲರ ಮನದಲ್ಲಿ ಹಾಸು ಹೊಕ್ಕಾಗಿದೆ. ಎಲೆಮರೆಕಾಯಿಯಂತಿರುವ ಅನೇಕ ಪ್ರತಿಭೆಗಳು ಯಕ್ಷಗಾನದ ಮೂಲಕವೇ ವೇದಿಕೆಗೆ ಅಡಿ ಇಡುತ್ತಿವೆ. ಇಂತದ್ದೇ ನಮ್ಮ ದೇಶಿ ಸೊಗಡಿನ ಅಪ್ಪಟ ಕಲಾ ಪ್ರತಿಭೆ ಶ್ರೀಕಾಂತ್ ಪೆಲತ್ತೂರು. ಬಾಲ್ಯದಲ್ಲಿಯೇ ಯಕ್ಷಗಾನದ ವೇಷಭೂಷಣ, ಗೆಜ್ಜೆ, ಹೆಜ್ಜೆಗೆ ಸೋತು ಅದನ್ನು ಹಿಂಬಾಲಿಸಿ ಯಕ್ಷಗಾನದ ಕಲೆಯ ಗೀಳಿಗೆ ತೆರೆದು ಕೊಂಡವರು ಶ್ರೀಕಾಂತ್. ಯಕ್ಷಗಾನ ರಂಗದಲ್ಲಿ ಹತ್ತುವರ್ಷಗಳ ಸುಧೀರ್ಘ ಪಯಾಣ ಇವರದ್ದು. ರವೀಂದ್ರನಾಯಕ್ ಮತ್ತು ರಂಜಿತಾ ನಾಯಕ್ […]
ಬಾಲ್ಯದಲ್ಲೇ ಯಕ್ಷರಂಗದಲ್ಲಿ ಗೆಜ್ಜೆ ಕಟ್ಟಿದ್ರು ಕಾರ್ಕಳದ ಎಳ್ಳಾರೆ ಹುಡ್ಗ: ಈ ಬಾಲ ಪ್ರತಿಭೆಯ ಕತೆ ಕೇಳಿ
ಯಕ್ಷಗಾನ “ಯಕ್ಷಗಾನಂ ವಿಶ್ವಗಾನಂ” ಎನ್ನುವಂತೆ ಯಕ್ಷಗಾನ ಕಲೆಯು ವಿಶ್ವದಲ್ಲಿ ಅತ್ಯಂತ ಪ್ರಸಿದ್ದವಾಗಿದೆ. ಯಕ್ಷಗಾನದ ಉಭಯ ತಿಟ್ಟುಗಳಲ್ಲಿ ಹಲವಾರು ಬಾಲ ಕಲಾವಿದರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಂತಹ ಕಲಾವಿದರಲ್ಲಿ ಅನುಜಿತ್ ನಾಯಕ್ ಎಳ್ಳಾರೆ ಕೂಡ ಒಬ್ಬರು. ಬಾಲ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಮಿಂಚುತ್ತಿರುವ ಅನುಜಿತ್ ಕನಸು ಕಂಗಳ ಹುಡುಗ. ಕನಸುಕಂಗಳ ಹುಡುಗ: ಕಾರ್ಕಳ ತಾಲೂಕಿನ ಎಳ್ಳಾರೆಯ ಶ್ರೀ ನಿವಾಸ್ ನಾಯಕ್, ಜ್ಯೋತಿ ನಾಯಕ್ ದಂಪತಿಗಳ ಪುತ್ರ ಅನುಜಿತ್, ತನ್ನ ಅಣ್ಣ ಮುಂಬೈ ಯಕ್ಷರಂಗದ ಶ್ರೇಷ್ಠ ಕಲಾವಿದ […]