ಸುಮ್ ಸುಮ್ನೆ ಮನೆಯಿಂದ ಆಚೆ ಹೋಗುವವರಿಗೆ ಈ ಹುಡುಗ ಹೇಗೆ ಜಾಡಿಸಿದ್ದಾನೆ: ನೋಡಿ ಈ ವಿಡಿಯೋ
ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಸುಮ್ಮ ಸುಮ್ಮನೆ ಆಚೆ ಹೋಗುವವರಿಗೆ ತುಮಕೂರಿನ ನಿಹಾಲ್ ರಾಜ್ ಹೇಗೆ ಬುದ್ದಿ ಹೇಳಿದ್ದಾನೆ ನೋಡಿ. ಇವನ್ನಿಲ್ಲಿ ಅಪ್ಪನಿಗೆ ಪಾಠ ಹೇಳಿದ್ದರೂ ಇದು ನಮಗೆಲ್ಲಾ ಪಾಠವೆ, ಇದೊಂದು ಜಾಗೃತಿಗೋಸ್ಕರ ಹರ್ಷರಾಜ್ ,ನಿಹಾಲ್ ರಾಜ್ ,ಗಾನ ಶ್ರುತಿ ಅವರು ಮಾಡಿದ ಪುಟ್ಟ ವಿಡಿಯೋ ತುಣುಕು.
ಕಾರ್ಕಳದ ಈ ಯುವಕನ ಕೈಯಲ್ಲರಳುತ್ತೆ ಬೆರಗಿನ ಚಿತ್ರಗಳು: “ಅನುಷ್” ಚಿತ್ರಕಲೆಯಲ್ಲೇ ಯಾವತ್ತೂ ಖುಷ್
ಈ ಯುವಕನ ಕೈಯಲ್ಲರಳುವ ಚಿತ್ರಗಳನ್ನು ನೋಡಿದರೆ ಮನಸ್ಸು ಬೆರಗಾಗುತ್ತದೆ. ವ್ಹಾ ವ್ಹಾ ಎಂತಹ ಚೆಂದ ಚಿತ್ರ ಬಿಡಿಸ್ತಾನಪ್ಪ ಈ ಹುಡುಗ ಎಂದು ನಮ್ಮ ಹುಬ್ಬೇರಿಬಿಡುತ್ತದೆ. ನಮ್ಮ ನಡುವೆಯೇ ಹಿತವಾದ ಕನಸು ಕಂಡು ಬದುಕುತ್ತಿರುವ ಪ್ರತಿಭೆಗಳು ತುಂಬಾ ಮಂದಿ ಇದ್ದರೂ, ಕೆಲವರಷ್ಟೇ ತಮ್ಮ ಕಠಿಣ ಪರಿಶ್ರಮದಿಂದ ಆ ಪ್ರತಿಭೆಯನ್ನು ಇನ್ನಷ್ಟು ಕರಗತ ಮಾಡಿಕೊಂಡಿರುತ್ತಾರೆ. ಅಂತಹ ಕೆಲವರಲ್ಲಿ ಕಾರ್ಕಳದ ಈ ಯುವಕ ಕೂಡ ಒಬ್ಬರು. ಇವರೇ ಚಿತ್ರ ಕಲಾವಿದ ಅನುಷ್. ಈ ಕಲಾವಿದನ ಪ್ರತಿಭೆಯನ್ನು ನೇೂಡಿದ್ರೆ ನೀವು ಬೆರಗಾಗುವುದು ಮಾತ್ರ […]
ಪೆರ್ಡೂರಿನ ಈ ಮಿಠಾಯಿ ಅಂಗಡಿಯ ಸಿಹಿತಿಂಡಿ ಬಲು ರುಚಿ: ದೇಶಿ ಸ್ವಾದ ಸಖತ್ ಟೇಸ್ಟ್
ಪೆರ್ಡೂರಿನಲ್ಲಿ ಸುಮಾರು 80 ವರ್ಷಗಳಿಂದ ಸಿಹಿ ತಯಾರಿಸುತ್ತಿರುವ ಜೋಗರಾಯ ಶೇಟ್, ರವಿ ಶೇಟ್, ಶಂಕರ್ ಶೇಟ್ ಇವರ ಶ್ರೀ ಅನಂತಪದ್ಮನಾಭ ಸ್ವೀಟ್ ಸ್ಟಾಲ್ ನ ಸಿಹಿ ತಿಂಡಿಗಳು ದೇಶಿ ಸ್ವಾದದಿಂದ ಜನರ ಬಾಯನ್ನು ಸೆಳೆಯುತ್ತಿವೆ. ಈ ಮೂವ್ವರೂ ತಮ್ಮ ತಂದೆಯ ಕಾಲದಿಂದಲೂ ಸಿಹಿತಿಂಡಿಯ ಉದ್ಯೋಗವನ್ನು ಅವಲಂಬಿಸಿ ಜನಗಳಿಗೆ ಸಿಹಿಯನ್ನು ಹಂಚುತ್ತಿದ್ದಾರೆ. ಸಕ್ಕರೆ ಮಿಠಾಯಿ, ಬೆಂಡು, ಜಿಲೇಬಿ, ಅತ್ರಾಸ, ಚಕ್ಕುಲಿ ಮುಂದಾದ ಸಿಹಿ ತಿಂಡಿಯನ್ನು ತಯಾರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶಿ ಸ್ವಾದವಿರುವ ಇವರ ಸಿಹಿತಿಂಡಿಗಳು ಸ್ವಾದಿಷ್ಟ ಮತ್ತು […]
ದೊಡ್ಡವರ ಹರಕೆ, ಮಕ್ಕಳ ಆಟಿಕೆ ಈ ಸೌತಡ್ಕದ ಗಂಟೆ: ಒಮ್ಮೆ ಬನ್ನಿ ಸೌತಡ್ಕ ಅನ್ನೋ ಗಣಪನ ಊರಿಗೆ
ಚಿತ್ರ ಬರಹ: ಚೈತನ್ಯ ಕುಡಿನಲ್ಲಿ ಭಾರತದಂತಹ ಧಾರ್ಮಿಕ ನೆಲೆಗಟ್ಟಿನ ದೇಶದಲ್ಲಿ ಪ್ರಸಿದ್ಧ ದೇವಸ್ಥಾನಗಳು ಹಾಗೂ ತೀರ್ಥಕ್ಷೇತ್ರಗಳು ಸದಾ ಜನಜಂಗುಳಿಯಿಂದ ಕೂಡಿರುವುದು ಸರ್ವೇಸಾಮಾನ್ಯ. ಅದರಲ್ಲೂ ರಜೆ ದಿವಸಗಳಲ್ಲಂತೂ ದೇವರಿಗೆ ಫುಲ್ ಡಿಮ್ಯಾಂಡ್. ಪತ್ರಿಕೆಯ ಪರಿಭಾಷೆಯಲ್ಲಿ ಹೇಳುವುದಾದರೆ ಜನಸಾಗರವೇ ಹರಿದು ಬಂದಿರುತ್ತದೆ. ಈ ಜನಸಾಗರದ ಭೋರ್ಗರೆತ, ಘಂಟೆ-ಜಾಗಟೆಗಳ ಪ್ರತಿಧ್ವನಿ ಹಾಗೂ ಅರ್ಚಕರುಚ್ಛರಿಸುವ ವೇದಮಂತ್ರದ ನಡುವೆ ಪುಟಾಣಿ ಮಕ್ಕಳ ಅಳುವಿನ ಧ್ವನಿಯೂ ದೇವಸ್ಥಾನದ ಪರಿಸರವನ್ನು ಆವರಿಸಿರುತ್ತದೆ. ಜನದಟ್ಟನೆಯಿಂದ ಉಂಟಾದ ಗಾಬರಿ ಹಾಗೂ ತಾಳಲಾರದ ಸೆಕೆಯಿಂದ ಅಳುವ ಎಳೆಯ ಕೂಸುಗಳಿಗೆ ಗಾಳಿ ಹಾಕುತ್ತಾ […]
ಶ್ರೀನಿವಾಸ್ ಗೌಡ ದಾಖಲೆ ಉಡೀಸ್ ಮಾಡಿದ ನಿಶಾಂತ್ ಶೆಟ್ಟಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಬೋಲ್ಟ್ ನ ಉದಯ
ಉಡುಪಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಹುಸೇನ್ ಬೋಲ್ಟ್ ಉದಯವಾಗಿದ್ದು, ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಕಾರ್ಕಳ ತಾಲ್ಲೂಕಿನ ಬಜೆಗೋಳಿಯ ನಿವಾಸಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಶ್ರೀನಿವಾಸ್ ಗೌಡ ಈಚೆಗೆ ಮೂಡುಬಿದಿರೆ ಮಿಜಾರಿನಲ್ಲಿ ನಡೆದ ಕಂಬಳದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಆ ದಾಖಲೆಯನ್ನು ನಿಶಾಂತ್ ಉಡೀಸ್ ಮಾಡಿದ್ದಾರೆ. ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 13.62 ಸೆಕೆಂಡ್ ನಲ್ಲಿ 142.5 ಮೀಟರ್ ಕ್ರಮಿಸಿದ್ದರು. ನಿಶಾಂತ್ 13.61 ಸೆಕೆಂಡ್ ನಲ್ಲಿ 143 ಮೀಟರ್ […]