ದೋಸ್ತಿಯಲ್ಲಿ ಮಸ್ತಿ ಜಾಸ್ತಿ ಆದ್ರೆ ಏನಾಗ್ತದೆ ಗೊತ್ತಾ?: ಮಧುರ ಸ್ನೇಹದ ಕತೆ ಹೇಳ್ತಿದೆ “ದೋಸ್ತಿ ಮಸ್ತಿ”

ಕರಾವಳಿಯ ಕನಸು ಕ್ರಿಯೇಷನ್ ನಿಂದ ಮತ್ತೊಂದು ಕಿರು ಚಿತ್ರ ಬಿಡುಗಡೆಯಾಗಿ ಯುಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಪ್ರದೀಪ್ ಶೆಟ್ಟಿ ನಿರ್ದೇಶನದ, ಶ್ರೀಶಾ ನಾಯಕ್ ಚಿತ್ರ ಕಥೆವುಳ್ಳ ಈ ತುಳು ಕಿರುಚಿತ್ರವೇ “ದೋಸ್ತಿ ಮಸ್ತಿ”. ಈಗಾಗಲೇ ಕೆಲವೊಂದು ಉತ್ತಮ ಕಿರುಚಿತ್ರಗಳನ್ನು, ವಿಡಿಯೋ ಹಾಡುಗಳನ್ನು ನೀಡಿ ಯುಟ್ಯೂಬ್ ನಲ್ಲಿ ಸದ್ದು ಮಾಡಿದ ಕನಸು ಕ್ರಿಯೇಷನ್ ಇದೀಗ “ದೋಸ್ತಿ ಮಸ್ತಿಯ”ಮೂಲಕ ಗಮನಸೆಳೆಯುವ ಕೆಲಸ ಮಾಡಿದೆ. ದೋಸ್ತಿಯಲ್ಲಿ ಮಸ್ತಿ ಜಾಸ್ತಿಯಾದರೆ ಆಗುವ ಪರಿಣಾಮವೇನು, ಆ ಮಸ್ತಿ ಹೇಗೆ ಒಬ್ಬ ಯುವಕನ ಜೀವನವನ್ನು […]
ತಮಿಳ್‌ರಾಕರ್ಸ್ ಎಂಬ ಸಿನಿಮ ಕಳ್ಳರು ಡಾರ್ಕ್‌ವೆಬ್ ದಂದೆಯ ಕರಾಳಮುಖ; ಕೋಟಿ ಕೋಟಿ ರೂ. ಹಣ ಸಂಪಾದನೆ

‘ತಮಿಳ್‌ರಾಕರ್ಸ್’ ಈ ಶಬ್ಧ ಕೇಳಿದೊಡನೇ ಭಾರತೀಯ ಚಿತ್ರರಂಗ ತಲ್ಲಣಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ಚಿತ್ರದೋದ್ಯಮಕ್ಕೆ ನಡುಕ ಹುಟ್ಟಿಸಿದೆ. ತಮಿಳ್‌ರಾಕರ್ಸ್ ವೆಬ್‌ಸೈಟ್ ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೆ ಹೊಸ ಚಿತ್ರ ಬಿಡುಗಡೆಗೊಂಡರು ತನ್ನ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿಬಿಡುತ್ತದೆ. ಚಿತ್ರದ ಎಚ್‌ಡಿ ಪ್ರಿಂಟ್, ಥಿಯೇಟರ್ ಪ್ರಿಂಟ್‌ಗಳನ್ನು ಈ ವೆಬ್‌ಸೈಟ್ ಪೈರಸಿ ಮಾಡುತ್ತದೆ. ತಮಿಳ್‌ರಾಕರ್ಸ್ ಒಂದೆಡೇ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನುಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ತಮಿಳ್‌ರಾಕರ್ಸ್‌ಗೆ ದೊಡ್ಡ ಅಭಿಮಾನಿ ಪಡೆ ಹುಟ್ಟಿಕೊಂಡಿರುವುದು ಆತಂಕಕಾರಿ ಬೆಳವಣಿಗೆ. ಹಾಲಿವುಡ್, ತೆಲುಗು, ತಮಿಳು, ಮಲೆಯಾಳಂ, ಕನ್ನಡ, ಹಿಂದಿ […]
ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟನೆಯ “ಸಾಹೋ” ಚಿತ್ರದ ಟೀಸರ್ ಮಾಡಿದೆ ಸಖತ್ ಸದ್ದು

ಭಾರತೀಯ ಚಿತ್ರರಂಗದಲ್ಲಿ ಅತೀ ನಿರೀಕ್ಷೆ ಹುಟ್ಟಿಸುತ್ತಿರುವ “ಸಾಹೋ” ಟೀಸರ್ ಬಿಡುಗಡೆಯಾಗಿದ್ದು. ಯೂ ಟ್ಯೂಬ್ ನಲ್ಲಿ ಸದ್ದು ಮಾಡಿದೆ. ಹಿಂದಿ, ತೆಲುಗು, ಮಲೆಯಾಳಂ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಪ್ರಭಾಸ್ ಅಭಿನಯದ “ಸಾಹೋ” ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಟೀಸರ್ ನಲ್ಲಿ ಹೇಳಿರುವ ಹಾಗೆ ಇದು ಭಾರತದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರದ ಕ್ವಾಲಿಟಿ, ಆಕ್ಷನ್, ಮೇಕಿಂಗ್ ಸ್ಟೈಲ್, ಲೊಕೇಶನ್, ಹಿನ್ನಲೆ ಸಂಗೀತ, ಅದ್ದೂರಿ ತನ ಎಲ್ಲವನ್ನು ನೋಡುತ್ತಿದ್ದರೆ ಹಾಲಿವುಡ್ ಚಿತ್ರವನ್ನು ವೀಕ್ಷಿಸುತ್ತಿರುವ […]
ಸೂಪರ್ ಸ್ಟಾರ್ ರಜನಿಕಾಂತ್ ‘2.0’ ಚೀನಾದ 55 ಸಾವಿರ ಸ್ಕ್ರೀನ್ ನಲ್ಲಿ ಬಿಡುಗಡೆ

ಮುಂಬಯಿ: ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾ ದೊಡ್ಡ ಸದ್ದು ಮಾಡಿಲ್ಲ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಗಳಿಕೆಯಲ್ಲಿ ಹಿಂದೆ ಬೀಳದ ರೋಬೋ 2 ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಮಾಡಿದೆ. 543 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಸುಮಾರು 800 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. 2018ರ ಸೆಪ್ಟೆಂಬರ್ 29 ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ರಜನಿ ಎದುರು ಅಬ್ಬರಿಸಲಿದ್ದಾರೆ ಇಬ್ಬರು ಖಡಕ್ ಖಳನಾಯಕರು ಇದೀಗ, 2.0 […]
ಯಶ್ ಕೆಜಿಎಫ್-2 ನಲ್ಲಿ ಬಾಲಿವುಡ್ ನಟಿ ಅಭಿನಯ ಖಚಿತ.!

ಬೆಂಗಳೂರು: ಈಗಾಗಲೇ ಕೆಜಿಎಫ್ ಚಿತ್ರದಲ್ಲಿ ಮಿಂಚಿರುವ ಯಶ್ ಮುಂದಿನ ವಾರದಿಂದ ‘ಕೆಜಿಎಫ್ 2’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ‘ಕೆಜಿಎಫ್ 2’ ಶೂಟಿಂಗ್ ಆರಂಭವಾಗಿದ್ದು, ಜೂ. 6ರಂದು ಯಶ್ ಕೆಜಿಎಫ್ ತಂಡವನ್ನ ಸೇರಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೆ ಕೆಜಿಎಫ್ 2 ಚಿತ್ರಕ್ಕಾಗಿ ಬಾಲಿವುಡ್ ನ ಈ ನಟಿ ಬರೋದು ಬಹುತೇಕ ಖಚಿತ ಎನ್ನಲಾಗಿದೆ. ಕೆಜಿಎಫ್ ಚಾಪ್ಟರ್-2 ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬರೋದು ಖಚಿತ ಎನ್ನಲಾಗಿದೆ. 1970-80 ಕಾಲಘಟ್ಟದ ಪ್ರಧಾನಮಂತ್ರಿ ಪಾತ್ರದಲ್ಲಿ ರವೀನಾ ನಟಿಸಲಿದ್ದಾರಂತೆ. […]