ಡ್ರಗ್ಸ್ ಪ್ರಕರಣ: ನಟಿ ರಿಯಾ ಚಕ್ರವರ್ತಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ

ಮುಂಬೈ: ಡ್ರಗ್ಸ್ ಆರೋಪದಡಿ ಎನ್ ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅಕ್ಟೋಬರ್‌ 6ರ ವರೆಗೆ ವಿಸ್ತರಣೆಗೊಂಡಿದೆ. ಮುಂಬೈನ ಎನ್‌ಡಿಪಿಎಸ್‌ ವಿಶೇಷ ಕೋರ್ಟ್‌ ರಿಯಾ ಅವರ ನ್ಯಾಯಾಂಗ ಬಂಧನ ವಿಸ್ತರಿಸಿ ಇಂದು ಆದೇಶ ನೀಡಿದೆ. ಡ್ರಗ್ಸ್ ಆರೋಪದಡಿ ರಿಯಾಳನ್ನು ಎನ್ ಸಿಬಿ ಸೆ. 9ರಂದು ಬಂಧಿಸಿದ್ದು, ನ್ಯಾಯಾಲಯವು 14 ದಿನಗಳ ಕಾಲ (ಸೆ.22 ರವರೆಗೆ ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನ್ಯಾಯಾಂಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಮತ್ತೆ […]

ನನಗೆ ಗಾಂಜಾ ಬೇಡ, ಮಾಲ್ ಬೇಕೆಂದಿದ್ದ ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿನ ಸುತ್ತ ಗಿರ್ಕಿ ಹೊಡೆಯುತ್ತಿದ್ದ ಡ್ರಗ್ಸ್ ದಂಧೆ ಪ್ರಕರಣ ಇದೀಗ ನಟಿ ದೀಪಿಕಾ ಪಡುಕೋಣೆಯ ಕೊರಳಿಗೂ ಸುತ್ತಿಕೊಂಡಿದೆ. ಬಾಲಿವುಡ್‌ ಗೆ ಅಂಟಿರುವ ಡ್ರಗ್ಸ್ ಜಾಲದ ಬಗ್ಗೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆಯನ್ನು ತೀವ್ರಗೊಳಿಸಿದ್ದು, 2017ರಲ್ಲಿ ದೀಪಿಕಾ ಮಾಡಿರುವ ವಾಟ್ಸ್ಆ್ಯಪ್‌ ಸಂದೇಶ ವಿನಿಮಯ ಈಗ ಬಹಿರಂಗಗೊಂಡಿದೆ. ‘ಡಿ’ ಮತ್ತು ‘ಕೆ’ ಎಂಬ ಅಕ್ಷರದಲ್ಲಿ ಸಂದೇಶ ವಿನಿಮಯವಾಗಿದ್ದು, ‘ಡಿ’ ಎಂದರೆ ದೀಪಿಕಾ ಪಡುಕೋಣೆ ಮತ್ತು ‘ಕೆ’ ಎಂದರೆ ಕರೀಷ್ಮಾ ಪ್ರಕಾಶ್‌ ಎಂದು ಹೇಳಲಾಗಿದೆ. […]

ಮತ್ತೆ ಬೆಳ್ಳಿತೆರೆಯ ಮೇಲೆ ಬರ್ತಿದ್ದಾರೆ ಕಮಲ್ ಹಾಸನ್: ಯಾವುದು ಕಮಲ್ ಹೊಸ ಚಿತ್ರ?

ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಮತ್ತೆ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಇಷ್ಟು ದಿನ  ಚಿತ್ರರಂಗದಿಂದ ಒಂದಷ್ಟು ದೂರವಿದ್ದ ಕಮಲ್, ಈಗ ಮತ್ತೆ ಬಣ್ಣ ಹಚ್ಚುತ್ತಿರುವ ಚಿತ್ರದ ಹೆಸರಿನ್ನೂ ಬಯಲಾಗಿಲ್ಲ. ಆದರೆ ಕಮಲ್ ಟ್ವೀಟ್ ನಲ್ಲಿ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಮಲ್ ಈ ಬಗ್ಗೆ ಟ್ವೀಟ್ ಮಾಡುತ್ತಾ “ಮತ್ತೊಂದು ಪ್ರಯಾಣ ಪ್ರಾರಂಭವಾಗುತ್ತಿದೆ” ಎಂದು ಹೇಳಿದ್ದಾರೆ. ಅವರು ಹಂಚಿಕೊಂಡಿರೋ ಪೋಸ್ಟರ್‌ನಲ್ಲಿ ಬಂದೂಕುಗಳಿಂದ ಮಾಡಿದ ಚಿತ್ರವಿದೆ. ಜತೆಗೆ […]

ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ಸಹಿತ ಐವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿ ಆರೋಪದಡಿ ಬಂಧಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಸಹಿತ ಐವರು ಆರೋಪಿಗಳಿಗೆ ನಗರದ 1ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ನಡಿ ಸಂಜನಾಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಡ್ರಗ್ಸ್ ಪ್ರಕರಣ ಸಂಬಂಧ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಅದರ ಅವಧಿ ಅಂತ್ಯಗೊಂಡಿದ್ದರಿಂದ ಇಂದು ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಆರೋಪಿಗಳಾದ ರಾಗಿಣಿ, ಪ್ರಶಾಂತ್ […]

ಸ್ಟಾರ್ ನಟ ಕಮ್ ನಿರ್ದೇಶಕನೊಂದಿಗೆ ನಟಿ ಸಂಜನಾಗೆ ನಂಟು: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ, ಬಹುಭಾಷಾ ನಟನೊಂದಿಗೆ ನಂಟು ಇತ್ತು ಎಂಬ ವಿಚಾರ ಈಗ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ. ಪೊಲೀಸರು ಸಿದ್ಧಪಡಿಸಿರುವ ಬಂಧಿತ ನಟಿಯರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಲಿಸ್ಟ್ ನಲ್ಲಿ ಈ ಸ್ಟಾರ್ ನಿರ್ದೇಶಕನ ಹೆಸರಿದೆ. ಈ ಸ್ಟಾರ್ ನಿರ್ದೇಶಕ ಸಂಜನಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಗೆ ಹೆಚ್ಚು ಆಪ್ತನಾಗಿದ್ದ. ಅಲ್ಲದೆ, ಆಕೆಗೆ ಸ್ಯಾಂಡಲ್ ವುಡ್ ನಲ್ಲಿ ಗಾಢ್ ಫಾದರ್ ನಂತಿದ್ದ. […]