ಬಘೀರಾ, ಸಲಾರ್, ಎನ್ಟಿಆರ್31, ಕೆಜಿಎಫ್ 3….. ಅಬ್ಬಬ್ಬಾ… ಕೆ.ಜಿ.ಎಫ್ ತಂಡದಿಂದ ಸಾಲು ಸಾಲು ಸಿನಿಮಾ… ಸಿನಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ….
ಬೆಂಗಳೂರು: ಕೆಜಿಎಫ್ ನಿರ್ಮಾಪಕರ ತಂಡದಿಂದ ಶ್ರೀಮುರಳಿ ಅಭಿನಯದ ಮತ್ತೊಂದು ಅದ್ದೂರಿ ಚಿತ್ರ “ಬಘೀರ”ಗೆ ಚಾಲನೆ ದೊರೆತಿದೆ. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2ರ ಉತ್ತರಭಾಗ ಕೆಜಿಎಫ್ 3 ತೆರೆ ಮೇಲೆ ಮೂಡಿ ಬರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಕೆಜಿಎಫ್ ಸಿನಿಮಾಗಳಿಗೆ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ತಮ್ಮ ಮುಂದಿನ ಪ್ರಾಜೆಕ್ಟ್, ಪ್ರಭಾಸ್ ನಾಯಕ ನಟನಾಗಿರುವ ಸಲಾರ್ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಾದ ಬಳಿಕ ಕೆ.ಜಿ.ಎಫ್- 3 ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಶುಕ್ರವಾರ, ಮೇ 20 ರಂದು […]
ಉಡುಪಿ: ಕೆಜಿಎಫ್-2 ಯಶಸ್ವಿ ಪ್ರದರ್ಶನದಿಂದ ಚಿತ್ರಮಂದಿರ ಚೇತರಿಕೆ
ಉಡುಪಿ: ಕೋವಿಡ್ ನಿಂದಾಗಿ ಎರಡು ವರ್ಷ ಸಾಕಷ್ಟು ನಷ್ಟಕ್ಕೆ ಸಿಲುಕಿದ್ದ ಚಿತ್ರಮಂದಿರಗಳು, ಕೆಜಿಎಫ್-2 ಸಿನಿಮಾದ ಯಶಸ್ವಿ ಪ್ರದರ್ಶನದಿಂದ ಮರುಚೇತರಿಕೆ ಕಂಡಿದೆ ಎಂದು ಅಲಂಕಾರ್ ಚಿತ್ರಮಂದಿರದ ವ್ಯವಸ್ಥಾಪಕ ಜಗದೀಶ್ ಕುಡ್ವ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಲ್ಟಿಫ್ಲೆಕ್ಸ್ ಅಬ್ಬರದ ನಡುವೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆದಾದ ಬಳಿಕ ಕೋವಿಡ್ ಲಾಕ್‌ಡೌನ್ ನಿಂದ ಚಿತ್ರಮಂದಿರದ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬಿದ್ದಿತ್ತು. ಕೋವಿಡ್ ಲಾಕ್‌ಡೌನ್ ಮುಗಿದ ಬಳಿಕ ಚಿತ್ರಮಂದಿರಗಳು ತೆರೆದರೂ ಜನರು ಮಾತ್ರ ಚಿತ್ರಮಂದಿರದತ್ತ ಬರುತ್ತಿರಲಿಲ್ಲ. ಇದರ […]
ರಿಲೀಸ್ ಆಗುತ್ತಲೇ ವೈರಲ್ ಆಯ್ತು ‘ಎಲ್ಲಿಂದ ಬರ್ತಿರೋ ನೀವೆಲ್ಲ?’- ಎಪಿಸೋಡ್ 2
ಎಪಿಸೋಡ್-1 ಕ್ಕೆ ಮನಸೋತ ವೀಕ್ಷಕರೆಲ್ಲಾ ಎಪಿಸೋಡ್ 2 ಗೂ ಫುಲ್ ಫಿದಾ!! ಬರೋಬ್ಬರಿ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿರುವ ಯೂಟ್ಯೂಬ್ ಕಿರುಚಿತ್ರ ‘ಎಲ್ಲಿಂದ ಬರ್ತಿರೋ ನೀವೆಲ್ಲ?’- ಎಪಿಸೋಡ್-1 ಈಗಾಗಲೇ ಸಿನಿರಸಿಕರ ಮನ ಸೂರೆಗೊಂಡಿದೆ. ಎಪಿಸೋಡ್ 1ರಲ್ಲಿ ತಾರ್ಕಿಕ ಅಂತ್ಯ ಕಾಣದ ಸಿನಿಮಾ ಎಪಿಸೋಡ್ 2ರಲ್ಲಿ ಮುಂದುವರಿದ ಭಾಗವಾಗಿ ಹೊರ ಬಂದಿದೆ. ಎಲ್ಲಿಂದ ಬರ್ತಿರೋ ನೀವೆಲ್ಲಾ ಮೊದಲನೆ ಎಪಿಸೋಡ್ ನೋಡಿದವರಿಗೆ ಆ ನಾಲ್ಕು ಜನರಲ್ಲಿ ಯಾರನ್ನ ನಂಬೋದು? ಕಾರ್ತಿ ಜೀವನದಲ್ಲಿ ಪ್ರತೀಕ್ ಬೆನ್ನ ಹಿಂದೆ ಚುಚ್ಚೊ ಕಟ್ಟಪ್ಪ ಆಗಿದ್ದು […]
ನನ್ನನ್ನು ಅಫೋರ್ಡ್ ಮಾಡಲು ಬಾಲಿವುಡ್ ಗೆ ಸಾಧ್ಯವಿಲ್ಲ ಎಂದ ತೆಲುಗಿನ ಸೂಪರ್ ಸ್ಟಾರ್!! ಬಾಲಿವುಡ್ ಗೆ ನೋ ಎಂದ ಮಹೇಶ್ ಬಾಬು!
ನವದೆಹಲಿ: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು, ತಮ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಮೇಜರ್’ ಚಿತ್ರದ ಟ್ರೇಲರ್ ಲಾಂಚ್‌ನಲ್ಲಿ ‘ಬಾಲಿವುಡ್‌ಗೆ ನನ್ನನ್ನು ಅಫೋರ್ಡ್ ಮಾಡಲು ಸಾಧ್ಯವಿಲ್ಲ, ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಹಿಂದಿ ಚಿತ್ರರಂಗದಿಂದ ಹಲವಾರು ಆಫರ್ ಗಳು ಬರುತ್ತಿದ್ದರೂ ತಾನದನ್ನು ತಿರಸ್ಕರಿಸುತ್ತಿದ್ದೇನೆ ಎಂದ ಬಾಬು, ತೆಲುಗು ನಟನಾಗಿ ತಾನು ಅನುಭವಿಸುವ ಸ್ಟಾರ್‌ಡಮ್ ಮತ್ತು ಪ್ರೀತಿ ಅಪಾರವಾಗಿರುವುದರಿಂದ ಇತರ ಚಲನಚಿತ್ರೋದ್ಯಮಗಳಲ್ಲಿ ಸಾಹಸ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಅವರು […]
ಬೀದಿ ನಾಟಕದ ಮೂಲಕ ‘ಮೆಟಡೋರ್’ ಸಿನಿಮಾ ಟ್ರೇಲರ್ ಬಿಡುಗಡೆ
ಚಿಕ್ಕಮಗಳೂರು: ನಗರದ ಆಜಾದ್‌ಪಾರ್ಕ್ ನಲ್ಲಿ ವಿಭಿನ್ನವಾಗಿ ಬೀದಿ ನಾಟಕದ ಮೂಲಕ ಜಿಲ್ಲೆಯ ಸ್ಥಳೀಯ ನಿವಾಸಿಯೊಬ್ಬರು ನಿರ್ಮಾಣ ಮಾಡಿರುವ ‘ಮೆಟ ಡೋರ್’ ಸಿನಿಮಾದ ಟ್ರೇಲರ್ ಅನ್ನು ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಬುಧವಾರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಸಖರಾಯಪಟ್ಟಣದ ನಿವಾಸಿಯಾದ ಕಿರಣ್ ಅವರು ನಾಯಕ ನಟನಾಗಿ ಹಾಗೂ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತು ಮೆಟಡೋರ್ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಂದೇಶಗಳನ್ನು ಅಳವಡಿಸಲಾಗಿದ್ದು ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬರಲಿದೆ ಎಂದರು. […]