ವಿಕ್ರಾಂತ್ ರೋಣಾಗೆ ಶುಭ ಹಾರೈಸಿದ ರಾಜಮೌಳಿ; ಸಿನಿಮಾ ನೋಡಿ ಕಿಚ್ಚನಿಗೆ ಜೈ ಅಂದ ಪ್ರೇಕ್ಷಕರು

ನಿರ್ದೇಶಕ ಎಸ್ಎಸ್ ರಾಜಮೌಳಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಿರ್ದೇಶಕರಲ್ಲಿ ಒಬ್ಬರು. ಇವರ ಹೆಸರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಅಂತಹ ಒಬ್ಬ ನಿರ್ದೇಶಕನ ಕೈಯಲ್ಲಿ ಹೊಗಳಿಸಿಕೊಳ್ಳುವುದೆಂದರೆ ನಿಜವಾಗಿಯೂ ಖುಷಿಯ ವಿಚಾರ. ಬುಧವಾರ, ವಿಶ್ವ ದರ್ಜೆಯ ನಿರ್ದೇಶಕ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಕ್ರಾಂತ್ ರೋಣ ಚಿತ್ರ ತಂಡ ಮತ್ತು ಕಿಚ್ಚ ಸುದೀಪ್ ಅವರಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಬುಧವಾರ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಎಸ್‌ಎಸ್ ರಾಜಮೌಳಿಯವರು ವಿಕ್ರಾಂತ್ ರೋಣದ ನಾಯಕ ನಟ ಕಿಚ್ಚ ಸುದೀಪ್ ಅವರನ್ನು ಹೊಗಳಿ ಬರೆದಿದ್ದಾರೆ. “ಸುದೀಪ್ […]

ಪುಷ್ಪಾ ತಂಡವನ್ನು ಟ್ರೋಲ್ ಮಾಡಿದ ರಾಕಿ ಭಾಯ್ ಅಭಿಮಾನಿಗಳು: ಕೆ.ಜಿ.ಎಫ್ ಅಭಿಮಾನಿಗಳಿಂದ ಪುಷ್ಪಾಗೆ ಟಾಂಗ್!

ದೇಶಾದ್ಯಂತ ಧೂಳೆಬ್ಬಿಸಿದ ಎರಡು ಮಾಸ್ ಸಿನಿಮಾಗಳು ಎದುರು ಬದುರಾಗಿ ನಿಂತಿವೆ. ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ನಟ ಫಹಾದ್ ಫಾಸಿಲ್ ಅವರು ಭವಿಷ್ಯದಲ್ಲಿ `ಪುಷ್ಪ 3` ತೆರೆಮೇಲೆ ಮೂಡಿ ಬರುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದ್ದರು. ಒಂದನೇ ಭಾಗದಲ್ಲಿ ಫಹಾದ್ ಭಾಗವಿದ್ದ ಪೊಲೀಸ್ ಸ್ಟೇಷನ್ ದೃಶ್ಯಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದ ಬಳಿಕ ನಿರ್ಮಾಪಕರು ಪುಷ್ಪಾ-2 ಅನ್ನು ತೆರೆಗೆ ತರುವ ನಿರ್ಧಾರ ಮಾಡಿದ್ದರು. ಇದೀಗ ನಿರ್ಮಾಪಕರು ಚಿತ್ರವನ್ನು ಮೂರು […]

ನಟ ರಣವೀರ್ ಸಿಂಗ್ ಬಾಂದ್ರಾ ಹೊಸ ಮನೆ ಬೆಲೆ ಬರೋಬ್ಬರಿ 119 ಕೋಟಿ ರೂಪಾಯಿ!

ಮುಂಬೈ: ನಟ ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈನ ಬಾಂದ್ರಾದಲ್ಲಿರುವ ಸಾಗರ್ ರೇಶಮ್ ಎಂಬ ಐಷಾರಾಮಿ ವಸತಿ ಟವರ್ ನಲ್ಲಿ ಫ್ಯಾನ್ಸಿ ಸೀ-ವ್ಯೂ ಕ್ವಾಡ್ರಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಈ ಐಷಾರಾಮಿ ಕ್ವಾಡ್ರಾಪ್ಲೆಕ್ಸ್ ನ ಬೆಲೆ ಸರಿ ಸುಮಾರು 119 ಕೋಟಿ ರೂಪಾಯಿ! ಸಾಗರ್ ರೇಶಮ್ ಟವರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮತ್ತು ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ನಡುವೆ ಇದೆ. ವರದಿಯ ಪ್ರಕಾರ, ಸಿಂಗ್ ಅವರ ಹೊಸ ಕ್ವಾಡ್ರಪ್ಲೆಕ್ಸ್, ಟವರ್ […]

ರಾಜಕುಮಾರಿಯಾಗಿ ಮಿಂಚಲಿದ್ದಾರೆ ಐಶ್ವರ್ಯಾ ರೈ: ವಿಶ್ವ ಸುಂದರಿಯ ಪೊನ್ನಿಯನ್ ಸೆಲ್ವನ್ ಪೋಸ್ಟರ್ ಗೆ ಫಿದಾ ಆದ ಸಿನಿಪ್ರಿಯರು

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ತಮಿಳು ಚಿತ್ರರಂಗಕ್ಕೆ ಮತ್ತೆ ಮರಳಲಿದ್ದಾರೆ. ಚಿತ್ರದಲ್ಲಿ ಆಕೆ ಪಜುವೂರಿನ ರಾಜಕುಮಾರಿ ನಂದಿನಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಜುಲೈ 6 ರಂದು, ಚಿತ್ರದ ಐಶ್ವರ್ಯಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ನಂದಿನಿ ಪಾತ್ರದ ಜೊತೆಗೆ ಮಂದಾಕಿನಿ ದೇವಿಯಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊನ್ನಿಯಿನ್ ಸೆಲ್ವನ್: ಭಾಗ 1 ಎಂಬ ಶೀರ್ಷಿಕೆಯ ಮೊದಲ ಭಾಗವು ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಣಿರತ್ನಂ ಅವರ ನಿರ್ದೇಶನ […]

25 ದಿನಗಳಲ್ಲಿ ಚಾರ್ಲಿ ಕಲೆಕ್ಷನ್ 150 ಕೋಟಿ: 5 ಶೇ. ಭಾರತೀಯ ತಳಿಯ ನಾಯಿಗಳ ರಕ್ಷಿಸುವ ಎನ್.ಜಿ.ಒಗಳಿಗೆಂದ ನಿರ್ಮಾಪಕ ರಕ್ಷಿತ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸತೊಂದು ಸಂಚಲವನ್ನು ಹುಟ್ಟು ಹಾಕಿದ 777ಚಾರ್ಲಿ ಚಿತ್ರವು 25 ದಿನಗಳಲ್ಲಿ ದೇಶಾದ್ಯಂತ 450 ಸ್ಕ್ರೀನ್ ಗಳಲ್ಲಿ, ಎಲ್ಲಾ ಭಾಷೆಗಳನ್ನು ಒಟ್ಟು ಸೇರಿಸಿ ಸರಿ ಸುಮಾರು 150 ಕೋಟಿ ರೂಗಳನ್ನು ಗಲ್ಲಾಪೆಟ್ಟಿಗೆಯಿಂದ ಬಾಚಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ-ನಟ ರಕ್ಷಿತ್ ಶೆಟ್ಟಿ, ಚಾರ್ಲಿ ಯಶಸ್ಸಿನಿಂದ ಇಡೀ ತಂಡ ಸಂಪೂರ್ಣವಾಗಿ ಖುಷಿಯಾಗಿದೆ. ಇದು ಬರಿಯ ಚಿತ್ರವಲ್ಲ, ಇದು ನಮ್ಮೆಲ್ಲರ ಜೀವನದ ಮೂರು ವರ್ಷದ ಅನುಭವ ಕಥನ. ಕೆಜಿಎಫ್-1 ಮತ್ತು ಕೆಜಿಎಫ್- 2 ಚಿತ್ರವು ಇಡೀ […]