ಕರಾವಳಿ ಸೊಗಡಿನ ಕಾಂತಾರಕ್ಕೆ ಪ್ರೇಕ್ಷಕರಿಂದ ಭರಪೂರ ಅಭಿನಂದನೆ: ರಿಷಭ್ ಶೆಟ್ಟಿ ಅಭಿನಯಕ್ಕೆ ಮನಸೋತ ಅಭಿಮಾನಿಗಳು
ಉಡುಪಿ: ಅಪ್ಪಟ ಕರಾವಳಿಯ ಸೊಗಡನ್ನು ಹೊಂದಿರುವ ಕಾಂತಾರಾ ಕನ್ನಡ ಚಲನಚಿತ್ರವು ಶುಕ್ರವಾರ ಬಿಡುಗಡೆಹೊಂದಿದ್ದು, ಚಿತ್ರವನ್ನು ವೀಕ್ಷಿಸಿದವರೆಲ್ಲರಿಂದಲೂ ಒಳ್ಳೆಯ ವಿಮರ್ಶೆಗಳು ಬಂದಿವೆ. ತುಳುನಾಡಿನ ಭೂತ ಕೋಲ ಮತ್ತು ಕಂಬಳಗಳನ್ನು ಚಿತ್ರಿಸಿರುವ ಈ ಸಿನಿಮಾವು ತುಳುವರಲ್ಲದವರ ಮನಸ್ಸನ್ನೂ ಸೂರೆಗೊಂಡಿರುವುದು ವಿಶೇಷ. ಬಂಡಾಯ ನಾಯಕ ಶಿವನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರಿಷಭ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳೆಲ್ಲಾ ಮನಸೋತಿದ್ದಾರೆ. ಈ ಚಿತ್ರದಲ್ಲಿ ಕಂಬಳ ಓಡಿಸುವುದನ್ನು ಡ್ಯೂಪ್ ಇಲ್ಲದೆ ತಾನೇ ನಿರ್ವಹಿಸಿರುವ ರಿಷಬ್ ಇದಕ್ಕಾಗಿ ತಮ್ಮ ಹುಟ್ಟೂರಿನಲ್ಲಿ ಹಲವು ದಿನಗಳ ಕಾಲ ಅಭ್ಯಾಸ […]
ಕೆಜಿಎಫ್ ಬ್ಯಾನರ್, ಲೂಸಿಯಾ ಡೈರೆಕ್ಟರ್ ಜೊತೆಗೂಡಿದ ಫಹಾದ್ ಫಾಸಿಲ್: ಅ.9 ರಂದು ಸೆಟ್ಟೇರಲಿದೆ ‘ಧೂಮಮ್’
ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ, ಫಹದ್ ಫಾಸಿಲ್ ನಾಯಕರಾಗಿ ‘ಧೂಮಮ್’ ಎಂಬ ಹೊಸ ಚಲನಚಿತ್ರವನ್ನು ನಿರ್ಮಿಸುವ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟರ್ ನಲ್ಲಿ ಘೋಷಿಸಿದೆ. ಹೊಂಬಾಳೆ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೂಮಮ್ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವನ್ನು ಈ ಹಿಂದೆ ಲೂಸಿಯಾ ಮತ್ತು ಯು-ಟರ್ನ್ ಚಿತ್ರಗಳನ್ನು ಬರೆದು, ನಿರ್ದೇಶಿಸಿದ್ದ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಧೂಮಮ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. […]
2023ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ: ಗುಜರಾತಿ ಚಲನಚಿತ್ರ ಛೆಲೋ ಶೋ
2023ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಗುಜರಾತಿ ಚಲನಚಿತ್ರ ಛೆಲೋ ಶೋ(ಕೊನೆಯ ಚಿತ್ರ) ಎಂದು ಘೋಷಿಸಲಾಗಿದೆ . ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 95 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವನ್ನು ಪ್ರಕಟಿಸಿದೆ. ಈ ಸಿನಿಮಾವು ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಯ್ಕೆಯಾಗಿದೆ. ಚಿತ್ರವು ಭಾರತದಲ್ಲಿ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂಗ್ಲಿಷ್‌ನಲ್ಲಿ ಲಾಸ್ಟ್ ಫಿಲ್ಮ್ ಶೋ ಎಂದು ಹೆಸರಿಸಲಾದ ಛೆಲೋ ಶೋ, 2021 ರಲ್ಲಿ ರಾಬರ್ಟ್ ಡಿನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ […]
ಜೊತೆಜೊತೆಯಲಿ ಧಾರಾವಾಹಿಯಲ್ಲಿ ಬದಲಾದ ಚಿತ್ರಕಥೆ: ಆರ್ಯವರ್ಧನ್ ಪಾತ್ರಕ್ಕೆ ಅಫಘಾತ; ಅಭಿಮಾನಿಗಳಿಗೆ ಆಘಾತ
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದಿದ್ದ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕೆ ಅಪಘಾತ ಮಾಡಿ ಅನಿರುದ್ದ್ ಪಾತ್ರವನ್ನು ಕೊನೆಗೊಳಿಸಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದ ನಟ ಅನಿರುದ್ದ್ ಅವರನ್ನು ಕ್ಷುಲ್ಲಕ ಕಾರಣಗಳಿಗೆ ಧಾರಾವಾಹಿಯಿಂದ ಹೊರಹಾಕಿದ್ದಲ್ಲದೆ, ಎರಡು ವರ್ಷಗಳ ಕಾಲ ಕಿರುತೆರೆಯಲ್ಲಿ ನಟಿಸದಂತೆ ನಿರ್ಬಂಧವನ್ನೂ ಹೇರಲಾಗಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ಮತ್ತೆ ಅನಿರುದ್ದ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಕಥೆಯಲ್ಲಿ ಬದಲಾವಣೆ […]
ತುಳುವ ಮಣ್ಣಿನ ಕಂಪು ಪಸರುವ ಕಾಂತಾರಾ ಚಿತ್ರದ ಟ್ರೈಲರ್ ಬಿಡುಗಡೆ
ಮಂಗಳೂರು/ಉಡುಪಿ: ಅವಿಭಜಿತ ದ.ಕ ಜಿಲ್ಲೆಯ ಬಹುಮುಖ ಪ್ರತಿಭೆ, ಕುಂದಾಪುರದ ಅಭಿಜಾತ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಾಂತಾರಾ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಖುದ್ದು ರಿಷಬ್ ಶೆಟ್ಟಿ ಚಿತ್ರಕಥೆ ಬರೆದು ನಟಿಸಿ ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ನಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ದೃಶ್ಯಗಳು ಮನೋಜ್ಞವಾಗಿ ಮೂಡಿಬಂದಿವೆ. ನಾಯಕಿಯಾಗಿ ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮತೊಬ್ಬ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತವು […]