ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು

ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ. ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. […]

ಕಾಂತಾರ ಖ್ಯಾತಿಯ ನಟಿಯ ‘ಜುಗಲ್ ಬಂದಿ’ ಟ್ರೇಲರ್ ರಿಲೀಸ್

ಹೊಸಬರ ವಿನೂತನ ಪ್ರಯತ್ನವಿರುವ ‘ಜುಗಲ್ ಬಂದಿ’ (Jugal Bandi) ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ದಿವಾಕರ ಡಿಂಡಿಮ (Diwakar Dindama) ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರದ ಅಂಗಳಕ್ಕೆ ಹೆಜ್ಜೆ ಇಡಲಿದ್ದು, ಅದಕ್ಕೂ ಮುನ್ನ ಟ್ರೇಲರ್ ಮೂಲಕ ಸಿನಿಮಾಗೆ ಆಮಂತ್ರಣ ನೀಡಿದೆ ಚಿತ್ರತಂಡ. ಡಿಂಡಿಮ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾದ ಈ ಚಿತ್ರ ಹಲವು ಕಥೆಗಳ ಜುಗಲ್ ಬಂದಿ. […]

ರಾಜಮೌಳಿ ಅವರ RRR ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ

ಲಾಸ್ ಏಂಜಲೀಸ್: ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್.ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ

ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ

ಸದಾ ಬೋಲ್ಡ್‌ ಲುಕ್‌ನಲ್ಲಿ ಕಂಗೊಳಿಸುವ ರಾಗಿಣಿ, ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಂಕ್ರಾಂತಿ ದಿನದಂದು ಸೀರೆಯುಟ್ಟು ದೇವಸ್ಥಾನಗಳಿಗೆ ತೆರಳಿದ್ದ ರಾಗಿಣಿ ಇದೀಗ,ಶಿವರಾತ್ರಿ ಪ್ರಯುಕ್ತ ಅಪ್ಪನ ಜತೆ ಸೇರಿ ಮನೆಯಲ್ಲಿಯೇ ಹೋಮ ಹಾಕಿಸಿದ ರಾಗಿಣಿ ದ್ವಿವೇದಿ. ಶಿವರಾತ್ರಿ ಪ್ರಯುಕ್ತ ಮನೆಯಲ್ಲಿ ಹೋಮ ಹವನ ಹಾಕಿಸಿದ ಫೋಟೋಗಳನ್ನು ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.(Instagram/ Ragini Dwivedi