‘ದಿ ಕೇರಳ ಸ್ಟೋರಿ 2’ ನಿರ್ಮಾಣಕ್ಕೆ ಚಿತ್ರತಂಡ ನಿರ್ಧಾರ: ಈ ಸಿನಿಮಾದ ನಿರೀಕ್ಷೆ ಹೀಗಿದೆ.!!

‘ದಿ ಕೇರಳ ಸ್ಟೋರಿ’ ಸಿನಿಮಾದ ಕಲೆಕ್ಷನ್ ಈಗಾಗಲೇ ನೂರು ಕೋಟಿದಾಟಿದ್ದು, ಇದೀಗ ಚಿತ್ರತಂಡ ‘ದಿ ಕೇರಳ ಸ್ಟೋರಿ 2’ ನಿರ್ಮಿಸಲು ನಿರ್ಧರಿಸಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾವು ದೇಶಾದ್ಯಂತ ಚರ್ಚೆಯಾಗಿದ್ದು, ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಯುವತಿಯರ ಬ್ರೇನ್ವಾಶ್ ಬಗ್ಗೆ ತೋರಿಸಲಾಗಿದೆ. ಆದರೆ ಯುವಕರ ಬ್ರೇನ್ವಾಶ್ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಹಿಂದುತ್ವ ಸಂಘಟನೆಗಳು ಪ್ರಶ್ನೆ ಎತ್ತಿದೆ.

ನಿರ್ದೇಶಕ ಸುದೀಪ್ತೋ ಸೇನ್ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಯುವಕರನ್ನು ಬ್ರೇನ್ವಾಶ್ ಮಾಡಿದ್ದರ ಕುರಿತು ಸೀಕ್ವೆಲ್ ಮಾಡುವಂತೆ ಅವರಿಗೆ ಆಫರ್ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಅನೇಕ ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದ ಸೃಷ್ಟಿ ಮಾಡಿದೆ. ಹಿಂದುತ್ವ ಸಂಘಟನೆಗಳು ಈ ಚಿತ್ರಕ್ಕೆ ಬೆಂಬಲ ಸೂಚಿಸಿದೆ. ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಅನೇಕರು ಟೀಕಿಸಿದ್ದಾರೆ.