ವಿವಾಹ ಬಂಧನದಲ್ಲಿ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಮಗಳು ಚಿತ್ರ ನಟಿ ಅಥಿಯಾ ಶೆಟ್ಟಿ ಜ.23 ರಂದು ಖಂಡಾಲಾ ನಿವಾಸದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಕೇವಲ ಕೆಲವೇ ಜನಗಳಿಗೆ ಸೀಮಿತವಾಗಿದ್ದ ಈ ಮದುವೆಯು ಸಾಂಗವಾಗಿ ನಡೆದಿದ್ದು, ಮಗನನ್ನು ಮನೆಗೆ ಬರಮಾಡಿಕೊಂಡಿದ್ದೇನೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಮಂಗಳೂರು ಶೈಲಿಯ ವೇಸ್ಟಿ ಉಟ್ಟ ಸುನೀಲ್ ಶೆಟ್ಟಿ ಮಗಳ ಮದುವೆಯಲ್ಲಿ ಮಿಂಚಿದ್ದಾರೆ. #WATCH | Athiya Shetty and KL Rahul […]

ಹಸೆಮಣೆ ಏರಲಿದೆ ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜೋಡಿ: ಖಂಡಾಲಾದಲ್ಲಿ ವಿವಾಹ ಸಾಧ್ಯತೆ

ಬಹುಚರ್ಚಿತ ಜೋಡಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಮತ್ತು ನಟ ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ ಕಡೆಗೂ ಹಸೆಮಣೆ ಏರಲು ತಯಾರಾಗಿದ್ದಾರೆ. ಜನವರಿ 21 ರಂದು ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಅವರ ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿದ್ದು, ಜನವರಿ 23 ರಂದು ಈ ಜೋಡಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಅಥಿಯಾ ತಂದೆ ಚಿತ್ರನಟ ಸುನೀಲ್ ಶೆಟ್ಟಿ ಅವರು 17 ವರ್ಷಗಳ ಹಿಂದೆ ಮಹಾರಾಷ್ಟ್ರದ ಖಂಡಾಲಾದಲ್ಲಿ ನಿರ್ಮಿಸಿರುವ […]

ಮಡದಿ ಮಕ್ಕಳ ಜೊತೆ ಸಂಕ್ರಾತಿ ಆಚರಿಸಿದ ರಾಕಿಂಗ್ ಸ್ಟಾರ್ ಯಶ್

ಹಾಸನದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ರಾಕಿಂಕ್ ಸ್ಟಾರ್, ರಾಕಿ ಭಾಯ್ ಖ್ಯಾತಿಯ ಚಿತ್ರನಟ ಯಶ್ ಸಂಕ್ರಾತಿ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ತಂದೆ, ತಾಯಿ, ಪತ್ನಿ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ ಜೊತೆಗೆ ಯಶ್ ಹಬ್ಬವನ್ನು ಆಚರಿಸಿದ್ದಾರೆ. ಈ ಚಿತ್ರಗಳನ್ನು ಅವರು ಟ್ವಿಟರ್ ನಲ್ಲಿಹಂಚಿಕೊಂಡಿದ್ದಾರೆ.  

ವಿವೇಕ್ ಅಗ್ನಿಹೋತ್ರಿಯ ‘ದ ವ್ಯಾಕ್ಸೀನ್ ವಾರ್’ ನಲ್ಲಿ ಕಾಂತಾರ ಬೆಡಗಿ ಸಪ್ತಮಿಗೌಡ

ಮುಂಬಯಿ: ಕನ್ನಡ ಚಿತ್ರನಟಿ ಕಾಂತಾರ ಬೆಡಗಿ ಸಪ್ತಮಿಗೌಡ ಹಿಂದಿ ಚಿತ್ರಲೋಕದತ್ತ ಪಯಣ ಬೆಳೆಸಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಯ ಮುಂಬರುವ ಚಿತ್ರ “ವ್ಯಾಕ್ಸೀನ್ ವಾರ್” ನಲ್ಲಿ ಪ್ರಮುಖ ಪಾತ್ರದಲ್ಲಿ ಸಪ್ತಮಿ ನಟಿಸಲಿದ್ದಾರೆ. ಈ ಬಗ್ಗೆ ನಿರ್ದೇಶಕ ವಿವೇಕ್ ರಂಜನ್ ಟ್ವೀಟ್ ಮಾಡಿದ್ದು, “ಸುಸ್ವಾಗತ ಸಪ್ತಮಿ ಗೌಡ, ದ ವ್ಯಾಕ್ಸೀನ್ ವಾರ್ ನ ನಿಮ್ಮ ಪಾತ್ರವು ಎಲ್ಲರ ಹೃದಯಗಳನ್ನು ಗೆಲ್ಲಲಿದೆ” ಎಂದಿದ್ದಾರೆ. ಚಿತ್ರದ ಬಗ್ಗೆ ಹರ್ಷಾತುರರಾಗಿರುವ ಸಪ್ತಮಿ ಚಿತ್ರದಲ್ಲಿ ನೀಡಿರುವ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. […]

ಅಜಿತ್ ಕುಮಾರ್ ಮತ್ತು ವಿಜಯ್ ಅಭಿಮಾನಿಗಳಲ್ಲಿ ಜಟಾಪಟಿ: ಚಿತ್ರದ ಪೋಸ್ಟರ್ ಹರಿದು ಪುಂಡಾಟಿಕೆ

ಚೆನ್ನೈ: ದಕ್ಷಿಣ ಭಾರತದ ತಮಿಳು ಚಿತ್ರ ನಟರಾದ ತಲಾ ಅಜಿತ್ ಕುಮಾರ್ ಮತ್ತು ತಲಪತಿ ವಿಜಯ್ ಅಭಿಮಾನಿಗಳ ಮಧ್ಯೆ ಜಟಾಪಟಿ ನಡೆದಿದ್ದು, ಒಂದು ಬಣ ಮತ್ತೊಂದು ಬಣದ ನಾಯಕಾ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದೆ. ಎಂಟು ವರ್ಷಗಳ ಬಳಿಕ ಅಜಿತ್ ಕುಮಾರ್ ನಟನೆಯ ‘ಥುನಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಒಂದೇ ದಿನದಂದು ಬಿಡುಗಡೆಯಾಗಿದೆ. ತಮಿಳುನಾಡಿನ ಕೋಯಂಬೆಡುವಿನಲ್ಲಿ ಚಿತ್ರಮಂದಿರದ ಎದುರು ಅಭಿಮಾನಗಳ ಸಾಗರ ಜಮಾವಣೆಯಾಗಿದೆ. ಚೆನ್ನೈನ ರೊಹಿಣಿ ಥಿಯೇಟರಿನಲ್ಲಿ ಚಿತ್ರವನ್ನು ನೋಡಲು ಎರಡೂ ಬಣಗಳ ಅಭಿಮಾನಿಗಳು ರಾತ್ರಿಯೆ […]