ವಿಕ್ಕಿ ಕೌಶಲ್ , ಸಾರಾ ಅಲಿ ಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಮೊದಲ ದಿನದ ಸಂಪಾದನೆ!

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರ ಜರಾ ಹಟ್ಕೆ ಜರಾ ಬಚ್ಕೆ ( Zara Hatke Zara Bachke ) ಸಿನಿಮಾ ಚಿತ್ರಮಂದಿರಗಳಲ್ಲಿ (ಶುಕ್ರವಾರ, ಜೂನ್​​ 2) ತೆರೆಕಂಡಿದ್ದು , ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನ 5.49 ಕೋಟಿ ರೂ. ಸಂಪಾದನೆ ಮಾಡಿದೆ ತರಣ್ ಆದರ್ಶ್ ಟ್ವೀಟ್: “ಜರಾ ಹಟ್ಕೆ ಜರಾ ಬಚ್ಕೆ ಪಯಣ ಪ್ರಾರಂಭಿಸಿದೆ. 2 ಕೋಟಿ ರೂ. ಗೂ ಕಡಿಮೆ ಸಂಪಾದಿಸಬಹುದೆಂದು ಊಹಿಸಿದ್ದ ನಿರಾಶಾವಾದಿಗಳನ್ನು ಮೌನಗೊಳಿಸಿದೆ. ಬೈ 1 ಗೆಟ್​ 1 […]

ಮಗಳಿಂದ ಸ್ಪೆಷಲ್​ ಫೋಟೋ ಶೇರ್​ : 50 ವರ್ಷ ದಾಂಪತ್ಯ ಪೂರೈಸಿದ ಅಮಿತಾಭ್​ ಬಚ್ಚನ್​- ಜಯಾ

ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ದಂಪತಿ ತಮ್ಮ ದಾಂಪತ್ಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ನಟ ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಚ್ಚನ್​ ದಂಪತಿ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಬಿಗ್​ ಬಿ ಮಗಳು ಶ್ವೇತಾ ಬಚ್ಚನ್​ ಸೋಶಿಯಲ್​ ಮೀಡಿಯಾದಲ್ಲಿ ತಂದೆ- ತಾಯಿಯ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅವರಿಬ್ಬರ ಬಗ್ಗೆ ಸುಂದರ ಟಿಪ್ಪಣಿಯನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಲೈಕ್ಸ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಇನ್​ಸ್ಟಾದಲ್ಲಿ ಬ್ಲ್ಯಾಕ್​ […]

‘ಆದಿಪುರುಷ್​’ ಬಿಡುಗಡೆಗೂ ಮುನ್ನವೇ 400 ಕೋಟಿ

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ್​’ ​ಬಿಡುಗಡೆಗೆ ಸಜ್ಜಾಗಿದೆ. ಪೌರಾಣಿಕ ಚಿತ್ರ ಆದಿಪುರುಷ್​ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ರಿಲೀಸ್​ಗೂ ಮುನ್ನವೇ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಬಾರಿ ಸದ್ದು ಮಾಡುತ್ತಿದೆ. ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್​: ಪ್ರಭಾಸ್​ ಅಭಿನಯದ ಆದಿಪುರುಷ್​ ಸಿನಿಮಾ 500 ಕೋಟಿ ರೂಪಾಯಿಗಳ ಬೃಹತ್​ ಬಜೆಟ್​ನಲ್ಲಿ ತಯಾರಾಗಿದೆ. ಬಿಡುಗಡೆಗೂ ಮುನ್ನವೇ ಈಗಾಗಲೇ ಚಿತ್ರ 432 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಹೀಗಾಗಿ ಸಿನಿಮಾ ರಿಲೀಸ್​ಗೂ ಮುನ್ನವೇ […]

ವಿಷ್ಣು ನಟನೆಯ ‘ಹಲೋ ಡ್ಯಾಡಿ’ ಸಿನಿಮಾ ನಟ ನಿಧನ

ಡಾ. ವಿಷ್ಣುವರ್ಧನ್ ಅಭಿನಯದ ಹಲೋ ಡ್ಯಾಡಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಿತಿನ್ ಬಾಲನಟರಾಗಿ ನಟಿಸಿದ ನಿತಿನ್ ಗೋಪಿ ಇಂದು ನಿಧನರಾಗಿದ್ದಾರೆ. ‘ಹಲೋ ಡ್ಯಾಡಿ’ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು ಅದರಲ್ಲೂ ‘ಶಾಲೆಗೆ ಈ ದಿನ ರಜಾ’ ಹಾಡಿನ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು . ನಿತಿನ್ ಗೋಪಿ ಅವರಿಗೆ ಇಂದು ಮುಂಜಾನೆ 5 ಗಂಟೆಗೆ ಸುಮಾರಿಗೆ ತ್ರೀವ ಹೃದಯಾಘಾತ ಆಗಿದೆ. ಕೂಡಲೇ ನಟನ ಅಪ್ಪ ಅಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ದಾರಿ […]

ಮೇ 29 ರಂದು ಆದಿಪುರುಷ್ ಚಿತ್ರದ “ರಾಮ್ ಸಿಯಾ ರಾಮ್” ದೇಶಾದ್ಯಂತ ಎಲ್ಲಾ ವೇದಿಕೆಗಳಲ್ಲಿ ಬಿಡುಗಡೆ

ಭಾರತದ ಐತಿಹಾಸಿಕ ಚರಿತ್ರೆ ರಾಮಾಯಣ ಆಧಾರಿತ ಎನ್ನಲಾದ ಆದಿಪುರುಷ್ ಚಿತ್ರವು ದಾಖಲೆ ಬರೆಯಲಿದ್ದು, ಚಿತ್ರದ ರಾಮ್ ಸಿಯಾ ರಾಮ್ ಹಾಡು ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಾದ್ಯಂತ 70+ ಮಾರುಕಟ್ಟೆಗಳನ್ನು ವ್ಯಾಪಿಸಿರುವ ವಿವಿಧ ವೇದಿಕೆಗಳಾದ ಚಲನಚಿತ್ರ ಚಾನೆಲ್‌ಗಳು, ಜಿಇಸಿ ಗಳು, ರೇಡಿಯೋ ಸ್ಟೇಷನ್, ರಾಷ್ಟ್ರೀಯ ಸುದ್ದಿ ವಾಹಿನಿಗಳು, ಹೊರಾಂಗಣ ಜಾಹೀರಾತು ಫಲಕಗಳು, ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಟಿಕೆಟಿಂಗ್ ಪಾಲುದಾರರು, ಚಲನಚಿತ್ರ ಥಿಯೇಟರ್‌ಗಳು, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ […]