ಮೂರು ದಿನದಲ್ಲಿ 300 ಕೋಟಿ ಗಳಿಸಿದ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್ 20 ಕೋಟಿ : ಆದಿಪುರುಷ್ ಗಳಿಕೆ 75 ರಷ್ಟು ಕುಸಿತ

ಇದೀಗ ಸಿನಿಮಾ ಗಳಿಕೆ ಇಳಿಕೆ ದಾರಿ ಹಿಡಿದಿದೆ. ಬಿಡುಗಡೆ ಕಂಡ ಬಳಿಕ ಮೊದಲ ಸೋಮವಾರದಂದು ಆದಿಪುರುಷ್ ಕಲೆಕ್ಷನ್ನಲ್ಲಿ ತೀವ್ರ ಕುಸಿತ ಕಂಡಿದೆ. ಬಾಕ್ಸ್ ಆಫೀಸ್ ಸಂಗ್ರಹ ಸಂಖ್ಯೆ ರಷ್ಟಿ 75 ರಷ್ಟು ಕುಸಿದಿದೆ. ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಂಡ ಆದಿಪುರುಷ್ ಸಿನಿಮಾ ಗಳಿಕೆ ಎಲ್ಲರ ಹುಬ್ಬೇರಿಸಿದೆ. ಮೂರೇ ದಿನಗಳಲ್ಲಿ 300 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ದಾಖಲೆ ಬರೆದಿದೆ.ಆದಿಪುರುಷ್’ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರವಾಗಿ ಭಾರಿ ಕುಸಿತ ಕಂಡಿದೆ. ಮೊದಲ ವಾರಾಂತ್ಯದ ಯಶಸ್ಸಿನ ನಂತರ ಚಿತ್ರವು ಓಟ […]
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ : ‘ಜಾತರ’ ಮಾಡಲು ಸಜ್ಜಾದ ಪ್ರಜ್ವಲ್ ದೇವರಾಜ್

2007ರಿಂದ ಸಿನಿಮಾ ವೃತ್ತಿ ಜೀವನ ಆರಂಭಿಸಿ, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ನಟ ಪ್ರಜ್ವಲ್ ದೇವರಾಜ್.ನಟ ಪ್ರಜ್ವಲ್ ದೇವರಾಜ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 5 ಭಾಷೆಗಳಲ್ಲಿ ಜಾತರೆ ಸಿನಿಮಾ: ನಟ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾ ಮೂಡಿ […]
ಚೊಚ್ಚಲ ಹೆಣ್ಣು ಮಗುವನ್ನು ಬರಮಾಡಿಕೊಂಡ ರಾಮ್ ಚರಣ್ ದಂಪತಿಗಳು

ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕೊನಿಡೇಲಾ ತಮ್ಮ ಚೊಚ್ಚಲ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಈ ಸುದ್ದಿಯನ್ನು ಆಸ್ಪತ್ರೆಯ ಬುಲೆಟಿನ್ ಮೂಲಕ ಪ್ರಕಟಿಸಲಾಗಿದೆ. ಉಪಾಸನಾ ಕೊನಿಡೇಲಾ ಜುಬಿಲಿ ಹಿಲ್ಸ್ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆಯು ತಿಳಿಸಿದೆ. ಡಿಸೆಂಬರ್‌ನಲ್ಲಿ ತಾವು ತಂದೆ ತಾಯಿಯರಾಗುವ ಬಗ್ಗೆ ದಂಪತಿಗಳು ಘೋಷಿಸಿಕೊಂಡಿದ್ದರು. ರಾಮ್ ಚರಣ್ ಅವರ ತಂದೆ, ನಟ ಚಿರಂಜೀವಿ, ಮಂಗಳವಾರ ಮುಂಜಾನೆ ದಂಪತಿಗಳನ್ನು ಭೇಟಿ ಮಾಡಿ […]
ರಶ್ಮಿಕಾ ಮಂದಣ್ಣಗೆ 80 ಲಕ್ಷ ರೂಪಾಯಿ ಮೋಸ ಮಾಡಿದ ಮ್ಯಾನೇಜರ್ ಗೆ ಗೇಟ್ ಪಾಸ್

ಹೈದರಾಬಾದ್: ಆರೋಪಿ ಮ್ಯಾನೇಜರ್ ನಟಿಗೆ 80 ಲಕ್ಷ ರೂ. ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಆರೋಪಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.\ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮನ್ನು ವಂಚಿಸಿದ ಮ್ಯಾನೇಜರ್ ಓರ್ವನನ್ನು ಕೆಲಸದಿಂದ ವಜಾ ಮಾಡಿದ್ದಾರೆ.ನಟಿ ರಶ್ಮಿಕಾ ಮಂದಣ್ಣ ಅವರು ತಮಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿ ಮನೆಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಟಿಯ ಪ್ರತಿದಿನದ […]
ಹಿಮ ರಾಷ್ಟ್ರದಲ್ಲಿ ಆದಿಪುರುಷ್ ಸಿನಿಮಾ ಪ್ರದರ್ಶನ ಬಂದ್ ಕಾರಣ ಸೀತೆ ಭಾರತವಲ್ಲ, ನೇಪಾಳದ ಮಗಳು

ಕಠ್ಮಂಡು(ನೇಪಾಳ):ಸೀತೆಯನ್ನು ಭಾರತದ ಮಗಳೆಂದು ಬಿಂಬಿಸಲಾಗಿದೆ. ಜಾನಕಿ ಜನಿಸಿದ್ದು ನೇಪಾಳದ ಜನಕಪುರದಲ್ಲಿ. ಈ ಬಗ್ಗೆ ಸುಳ್ಳು ಹೇಳಿದ್ದಕ್ಕೆ ದೇಶದಲ್ಲಿ ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ. ಸಂಭಾಷಣೆ ಮತ್ತು ಚಿತ್ರಕಥೆ ಕಾರಣಕ್ಕಾಗಿ ತೀವ್ರ ವಿವಾದಕ್ಕೀಡಾಗಿರುವ ತೆಲುಗು ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಪ್ರದರ್ಶನಕ್ಕೆ ನೇಪಾಳದಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ.ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಆದಿಪುರುಷ್ ಸಿನಿಮಾ ಒಂದಲ್ಲೊಂದು ಕಾರಣಕ್ಕೆ ವಿವಾದಕ್ಕೆ ಸಿಲುಕುತ್ತಿದೆ. ಪ್ರಸಿದ್ಧ ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿ ಆದಿಪುರುಷ ಸಿನಿಮಾದಲ್ಲಿ ಸೀತೆಯ ಮೂಲದ ಬಗ್ಗೆ ಸುಳ್ಳು ಹೇಳಲಾಗಿದೆ. […]