ಅನಿಮಲ್​​ ಸೆಟ್​ನಿಂದ ನಟನ ಫೋಟೋ ವೈರಲ್ – ರಗಡ್​ ಲುಕ್​ನಲ್ಲಿ ರಣ್​ಬೀರ್​ ಕಪೂರ್

ಈ ನಟರು ಮೊದಲ ಬಾರಿ ಒಟ್ಟಿಗೆ ನಟಿಸಿದ್ದು, ಅನಿಮಲ್ ಶೂಟಿಂಗ್​​​​ ಸೆಟ್​ನಿಂದ ನಟ ರಣ್​ಬೀರ್​ ಕಪೂರ್ ಅವರ ಫೋಟೋ ವೈರಲ್​ ಆಗಿದೆ.
ಅನಿಮಲ್ ಶೂಟಿಂಗ್​​​​ ಸೆಟ್​ನಿಂದ ನಟ ರಣ್​ಬೀರ್​ ಕಪೂರ್​ ಅವರ ಫೋಟೋ ವೈರಲ್​​ ಆಗಿದೆ.ಅನಿಮಲ್​​ 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

ಕಬೀರ್ ಸಿಂಗ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಆಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್​ ಕಪೂರ್ ಸ್ಕ್ರೀನ್​ ಶೇರ್ ಮಾಡಿದ್ದಾರೆ.ಬಾಲಿವುಡ್‌ನ ಬಹುಬೇಡಿಕೆ, ಸುಂದರ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಣ್​​​ಬೀರ್ ಕಪೂರ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಪತ್ನಿ ಆಲಿಯಾ ಭಟ್ ಅವರೊಂದಿಗೆ ವಿದೇಶಕ್ಕೆ ತೆರಳಿದ್ದರು.

ಅಲ್ಲಿಂದ ಈ ತಾರಾ ಜೋಡಿಯ ಹಲವು ಫೋಟೋಗಳು ವೈರಲ್ ಆಗಿ ಸದ್ದು ಮಾಡಿತು. ದುಬೈನ ಮಾಲ್‌ನಲ್ಲಿ ಮಗಳು ರಾಹಾಗಾಗಿ ಶಾಪಿಂಗ್ ಮಾಡಿದ್ದು, ರಣ್​​ಬೀರ್ ಮತ್ತು ಆಲಿಯಾ ಅವರ ಫೋಟೋ ವೈರಲ್ ಆಗಿತ್ತು.ಇದೀಗ ನಟನ ಮತ್ತೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದು ನಟನ ಫ್ಯಾಮಿಲಿ ಫೋಟೋ ಅಲ್ಲ, ಆಯಕ್ಷನ್ ಥ್ರಿಲ್ಲರ್ ಚಿತ್ರ ಅನಿಮಲ್ ಸೆಟ್​ನಿಂದ ವೈರಲ್​ ಆದ ಫೋಟೋ. ಈ ವೈರಲ್ ಚಿತ್ರದಲ್ಲಿ, ರಣ್​​ಬೀರ್ ಕಪೂರ್ ನೀಲಿ ಸೂಟ್​​ನಲ್ಲಿ ಕಾಣಿಸಿಕೊಂಡಿದ್ದು, ರಗಡ್​ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ.

ರಣ್​​​ಬೀರ್ ಕೊನೆಯದಾಗಿ ‘ತು ಜೂಟಿ ಮೆ ಮಕ್ಕರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಮಾರ್ಚ್ 8ರಂದು ತೆರೆಕಂಡ ಈ ಸಿನಿಮಾವನ್ನು ಲವ್ ರಂಜನ್ ನಿರ್ದೇಶಿಸಿದ್ದು, ಪ್ರೇಕ್ಷಕರಿಮದ ಮೆಚ್ಚುಗೆ ಸಂಪಾದಿಸಿತು. ಅದಕ್ಕೂ ಹಿಂದಿನ ಬ್ರಹ್ಮಾಸ್ತ್ರ ಸಿನಿಮಾ ಕೂಡ ಹಿಟ್​ ಆಗಿದೆ. ಮುಂದಿನ ಅನಿಮಲ್​ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.